ದೇಶದಲ್ಲಿ ಅತ್ಯಾಚಾರ ಏಕೆ ನಡೆಯುತ್ತೆ?; ಗುಜರಾತ್ ಗೃಹಸಚಿವರ ಪ್ರಕಾರ ಅದಕ್ಕೆ ಇವೆರಡೇ ಮುಖ್ಯ ಕಾರಣ..

rape
Published on

ಗುಜರಾತ್​: ಕಾನೂನು ಸುವ್ಯವಸ್ಥೆ ಎಷ್ಟೇ ಬಿಗಿಗೊಳಿಸಿದರೂ, ಮಕ್ಕಳು-ಮಹಿಳೆಯರಲ್ಲಿ ಎಷ್ಟೇ ಜಾಗೃತಿ ಮೂಡಿಸಿದರೂ ದೇಶದಲ್ಲಿ ಒಂದಲ್ಲ ಒಂದು ಕಡೆ ಅತ್ಯಾಚಾರದ ಪ್ರಕರಣ ಬೆಳಕಿಗೆ ಬರುತ್ತಲೇ ಇರುತ್ತವೆ. ಅಷ್ಟಕ್ಕೂ ದೇಶದಲ್ಲಿ ಅತ್ಯಾಚಾರ ಆಗಲು ಎರಡು ಪ್ರಮುಖ ಕಾರಣಗಳಿವೆಯಂತೆ!

ಅಂಥ ಎರಡು ಕಾರಣಗಳನ್ನು ಗುಜರಾತ್ ಗೃಹ ಸಚಿವ ಹರ್ಷ ಸಂಘವಿ ಹೇಳಿದ್ದಾರೆ. ಮೊಬೈಲ್​ಫೋನ್​ಗಳಲ್ಲಿ ಅಶ್ಲೀಲ ವಿಡಿಯೋಗಳು ಸುಲಭದಲ್ಲಿ ಲಭ್ಯವಿರುವುದೇ ದೇಶದಲ್ಲಿ ಅತ್ಯಾಚಾರ ನಡೆಯಲು ಪ್ರಮುಖ ಕಾರಣ. ಅತ್ಯಾಚಾರಕ್ಕೆ ಮತ್ತೊಂದು ಪ್ರಮುಖ ಕಾರಣ ಎಂದರೆ ಪರಿಚಿತರು ಮತ್ತು ಸಂಬಂಧಿಕರೇ ಅಪರಾಧ ಎಸಗುವುದು ಎಂದು ಅವರು ಹೇಳಿದ್ದಾರೆ.

ಇತ್ತೀಚೆಗಿನ ಸಮೀಕ್ಷೆಯೊಂದರಲ್ಲಿ ಈ ಮಾಹಿತಿ ಕಂಡುಬಂದಿದೆ. ಅತ್ಯಾಚಾರಕ್ಕೆ ಯಾವಾಗಲೂ ಪೊಲೀಸರನ್ನೇ ದೂರಲಾಗುತ್ತದೆ. ಆದರೆ ಅಂಥ ಪ್ರಕರಣಗಳು ಸಮಾಜಕ್ಕೆ ಕಳಂಕ. ಅಂಥವು ನಡೆದಾಗ ಪೊಲೀಸರನ್ನು ದೂಷಿಸಬಾರದು. ತಂದೆಯೇ ಮಗಳ ಮೇಲೆ ಅತ್ಯಾಚಾರ ನಡೆಸಿದಾದ ಅದೊಂದು ದೊಡ್ಡ ಸಾಮಾಜಿಕ ಸಮಸ್ಯೆ ಅಲ್ಲವೇ? ತಂದೆ ಮಗಳ ಮೇಲೆ ಅತ್ಯಾಚಾರ ನಡೆಸುವುದಕ್ಕೆ ಆತನ ಮೊಬೈಲ್​ಫೋನೇ ಕಾರಣ ಎಂದು ಸಚಿವರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net