ಗುಜರಾತ್​ ಚುನಾವಣೆ: ಇಂದು ಮೊದಲ ಹಂತದ ಮತದಾನ

Election 1
Published on

ಅಹಮದಾಬಾದ್​: ಗುರುವಾರ ನಡೆಯಲಿರುವ ಗುಜರಾತ್​ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ರಾಜ್ಯ ಸರ್ವಸನ್ನದ್ಧಗೊಂಡಿದೆ. ಸೌರಾಷ್ಟ್ರ-ಕಛ್​ ಮತ್ತು ದಣ ಭಾಗಗಳ 19 ಜಿಲ್ಲೆಗಳ 89 ಸ್ಥಾನಗಳ ಜನಪ್ರತಿನಿಧಿಗಳ ಆಯ್ಕೆಗೆ ಗುರುವಾರ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಈ ಹಂತದಲ್ಲಿ 788 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಮೊದಲ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಕಾರ್ಯ ಮಂಗಳವಾರ ಸಂಜೆ ಕೊನೆಗೊಂಡಿತ್ತು. 14,382 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್​ ಎಲ್ಲ 89 ಸ್ಥಾನಗಳಲ್ಲಿ ಸ್ಪರ್ಧಿಸಿವೆ. ಆಪ್​ನ 88 ಹುರಿಯಾಳುಗಳಿದ್ದಾರೆ. 339 ಪಕ್ಷೇತರ ಅಭ್ಯರ್ಥಿಗಳೂ ಕಣದಲ್ಲಿದ್ದಾರೆ. ಬಿಎಸ್​ಪಿ 57, ಬಿಟಿಪಿ 14 ಹಾಗೂ ಸಿಪಿಐ (ಎಂ) ನಾಲ್ಕು ಸ್ಥಾನಗಳಲ್ಲಿ ಸ್ಪರ್ಧಿಸಿವೆ. ಆಪ್​ ಮುಖ್ಯಮಂತ್ರಿ ಅಭ್ಯರ್ಥಿ ಇಸುದಾನ್​ ಗಢವಿ ಸೌರಾಷ್ಟ್ರ ವಲಯದ ಖಂಭಾಲಿಯಾ ಕ್ಷೇತ್ರದಲ್ಲಿ ಸ್ಪರ್ಧೆಯಲ್ಲಿದ್ದಾರೆ.

ಕ್ರಿಕೆಟಿಗ ರವೀಂದ್ರ ಜಡೇಜಾ ಪತ್ನಿ ರಿವಾಬಾ ಜಡೇಜಾ, ಬಿಜೆಪಿ ಶಾಸಕರಾದ ಹರ್ಷ ಸಾಂಘ್ವಿ, ಪೂರ್ಣೇಶ್​ ಮೋದಿ, ಪುರುಷೋತ್ತಮ ಸೋಳಂಕಿ ಮೊದಲ ಹಂತದಲ್ಲಿ ಕಣದಲ್ಲಿರುವ ಪ್ರಮುಖರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net