

ಬೆಂಗಳೂರು: ಮಾಜಿ ರಾಷ್ಟ್ರಪತಿ ನಿಧನ ಹಿನ್ನೆಲೆ ದೇಶಾದ್ಯಂತ ಏಳು ದಿನಗಳವರೆಗೆ ಶೋಕಾಚರಣೆ ಘೋಷಣೆ ಮಾಡಲಾಗಿದೆ. ಇದು ಆಗಸ್ಟ್ 31 ರಿಂದ ಸೆಪ್ಟೆಂಬರ್ 6ರ ವರೆಗೆ (ಎರಡೂ ದಿನಗಳು ಸೇರಿ ) ಜಾರಿಯಲ್ಲಿರಲಿದೆ. ಈ ನಡುವೆ ಸೆಪ್ಟೆಂಬರ್ 5ರಂದು (ಶನಿವಾರ) ಶಿಕ್ಷಕರ ದಿನ ಆಚರಿಸಬೇಕಿದೆ.
ಆದರೆ, ಶೋಕಾಚರಣೆ ನಡುವೆ ಶಿಕ್ಷಕರ ದಿನ ಆಚರಿಸಬೇಕೆ, ಬೇಡವೇ ಎಂಬ ಬಗ್ಗೆ ಗೊಂದಲಗಳೆದಿದ್ದವು. ಇದನ್ನು ಬಗೆಹರಿಸಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿ ಪ್ರಕಟಣೆಯೊಂದನ್ನು ಹೊರಡಿಸಿ ಗೊಂದಲಗಳನ್ನು ನಿವಾರಿಸಿದೆ.
ಆಯುಕ್ತರ ಕಚೇರಿ ಆದೇಶದ ಪ್ರಕಾರ ಶಿಕ್ಷಕರ ದಿನ ಆಚರಿಸಬಹುದು. ಆದರೆ, ಯಾವುದೇ ಔತಣ ಕೂಟ, ಇತರ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅವಕಾಶವಿಲ್ಲ. ಆದರೆ, ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಬಹುದು ಎಂದು ತಿಳಿಸಲಾಗಿದೆ.