ಹೋಂ ಐಸೋಲೇಶನ್ ಪರಾಮರ್ಶೆಗೆ ಸುತ್ತೋಲೆ

home stay
Published on

ಬೆಂಗಳೂರು: ಕರೊನಾ ರೋಗಲಕ್ಷಣ ಇಲ್ಲದವರು ಹಾಗೂ ಅಲ್ಪಪ್ರಮಾಣದ ಲಕ್ಷಣ ಉಳ್ಳವರನ್ನು ಮನೆಯಲ್ಲೇ ಪ್ರತ್ಯೇಕವಾಗಿರಿಸಲು (ಹೋಂ ಐಸೋಲೇಶನ್) ತೀರ್ವನಿಸಿ, ಮಾರ್ಗಸೂಚಿ ಹೊರಡಿಸಲಾಗಿದೆ. ಈ ಬಗ್ಗೆ ವಸ್ತುಸ್ಥಿತಿ ಅವಲೋಕಿಸಿ ವರದಿ ತರಿಸಿಕೊಳ್ಳಲು ಆರೋಗ್ಯ ತಂಡಗಳನ್ನು ನೇಮಿಸುವಂತೆ ಜಿಲ್ಲಾ ಆರೋಗ್ಯ ಹಾಗೂ ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಿ, ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ. ಈ ತಂಡಗಳು ನಿಗದಿತ ಸೂಚನೆಗಳನುಸಾರ ಸ್ಥಳಕ್ಕೆ ಭೇಟಿ ನೀಡಿ, ವಸ್ತುಸ್ಥಿತಿ ಅವಲೋಕನದ ಫಲಿತಾಂಶ ಆಧರಿಸಿ ಹೋಂ ಐಸೋಲೇಶನ್ ಗೆ ಸೂಕ್ತವೆಂದು ಪ್ರಮಾಣೀಕರಿಸಬೇಕು ಎಂದು ಸೂಚಿಸಲಾಗಿದೆ.

ಪ್ರಮುಖ ಸೂಚನೆಗಳು: ಹೋಂ ಐಸೋಲೇಶನ್​ಗೆ ಸೂಚಿತ ವ್ಯಕ್ತಿಗೆ ಶೌಚಗೃಹ ಸಹಿತ, ಉತ್ತಮ ಗಾಳಿಯಾಡುವ ಪ್ರತ್ಯೇಕ ಕೊಠಡಿ ಇರಬೇಕು. ಆತ ಆ ಕೋಣೆಯಲ್ಲೇ ಕುಟುಂಬದ ಇತರ ಅದರಲ್ಲೂ ಹಿರಿಯರು, ರಕ್ತದೊತ್ತಡ, ಹೃದ್ರೋಗ, ಮೂತ್ರಪಿಂಡ ಕಾಯಿಲೆಯಿದ್ದು ಸುಲಭವಾಗಿ ಸೋಂಕಿಗೆ ತುತ್ತಾಗುವವರಿಂದ ದೂರವಿರಬೇಕು. ಮನೆಯಲ್ಲಿ ಎಲ್ಲದರ ಕಟ್ಟುನಿಟ್ಟು ಪಾಲನೆ ಖಾತ್ರಿಪಡಿಸಿಕೊಳ್ಳಬೇಕು. ಮನೆಯ ಪ್ರವೇಶ ದ್ವಾರದಲ್ಲೇ ಹೋಂ ಐಸೋಲೇಶನ್ ಸೂಚನಾಪತ್ರ ಅಂಟಿಸಬೇಕು. ಗುರುತಿಸಿದ ವ್ಯಕ್ತಿಯ ಕೈಗೆ 17 ದಿನಗಳ ಹೋಂ ಐಸೋಲೇಶನ್ ಮುದ್ರೆ ಹಾಕಬೇಕು.ಐಸೋಲೇಶನ್ ನಲ್ಲಿರುವ ವ್ಯಕ್ತಿ ಮತ್ತವರ ಕುಟುಂಬಸ್ಥರಿಗೆ ಕಿರಿಕಿರಿ ಆಗದಂತೆ ನೆರೆಹೊರೆಯ ಕನಿಷ್ಠ ಇಬ್ಬರಿಗೆ ಜಾಗೃತಿ ಮೂಡಿಸಿ, ಸಲಹೆ ನೀಡಬೇಕು. ವಾರ್ಡ್/ಗ್ರಾಮ/ಬೂತ್ ಮಟ್ಟದ ನಿವಾಸಿಗಳ ಅಥವಾ ಅಪಾರ್ಟ್​ವೆುಂಟ್ ಮಾಲೀಕರ ಕಲ್ಯಾಣದ ಸಂಘದ 3 ಸದಸ್ಯರನ್ನು ಒಳಗೊಂಡ ಸಮಿತಿ ರಚಿಸಿ, ಹೋಂ ಐಸೋಲೇಶನ್ ನಲ್ಲಿ ಇರುವ ವ್ಯಕ್ತಿ ನಿಯಮ ಪಾಲಿಸುತ್ತಿರುವ ಬಗ್ಗೆ ನಿಗಾ ವಹಿಸುವ ಹೊಣೆ ಒಪ್ಪಿಸಬೇಕು. ಉಲ್ಲಂಘಿಸಿದರೆ ಆ ವ್ಯಕ್ತಿಯನ್ನು ಸಮೀಪದ ಕರೊನಾ ಆರೈಕೆ ಕೇಂದ್ರಕ್ಕೆ ಸ್ಥಳಾಂತರಿಸಬೇಕು. ಪ್ರತಿದಿನ ನಿಗಾವಹಿಸುವುದಕ್ಕಾಗಿ ಟೆಲಿ ಮಾನಿಟರಿಂಗ್ ಕೇಂದ್ರದ ಜತೆ ಸೋಂಕಿತ ವ್ಯಕ್ತಿಗೆ ಸಂಪರ್ಕ ಕಲ್ಪಿಸಬೇಕು. ಹೋಂ ಐಸೋಲೇಶನ್ ವ್ಯಕ್ತಿಯ ಕೈಗವಸು, ಮಾಸ್ಕ್ ಮತ್ತಿತರ ಪ್ರತಿದಿನದ ತ್ಯಾಜ್ಯವನ್ನು ಶೇ.1ರಷ್ಟು ಸೋಡಿಯಂ ಹೈಪೋಕ್ಲೋರೈಟ್​ನಲ್ಲಿ ಅರ್ಧ ತಾಸು ನೆನೆಸಿಟ್ಟು, ಬಳಿಕ ಪ್ರತ್ಯೇಕ ಚೀಲದಲ್ಲಿಟ್ಟು ವಿಲೇವಾರಿ ಮಾಡಬೇಕು. ಹೋಂ ಐಸೋಲೇಶನ್ ವ್ಯಕ್ತಿಗೆ ಇಷ್ಟವಿಲ್ಲದಿದ್ದರೆ ಅಥವಾ ಕುಟುಂಬದ ಸದಸ್ಯರು ಒಪ್ಪದಿದ್ದಲ್ಲಿ ಸಮರ್ಪಕ ಕರೊನಾ ಸವಲತ್ತುಳ್ಳ ಕಡೆ ಸ್ಥಳಾಂತರಿಸಬೇಕು. ್ಝೋಗಿಯ ಬಗ್ಗೆ ಸಂಬಂಧಿತ ವೈದ್ಯಾಧಿಕಾರಿ ಪ್ರತಿದಿನವೂ ಜಿಲ್ಲಾ ಕಣ್ಗಾವಲು ಅಧಿಕಾರಿಗೆ ವರದಿ ಸಲ್ಲಿಸಬೇಕು. ಅವರು ಆಪ್ ಮತ್ತು ಕೇಂದ್ರ ಸರ್ಕಾರದ ಕೋವಿಡ್-19 ಜಾಲತಾಣದಲ್ಲಿ ಕಾಲಕಾಲಕ್ಕೆ ಮಾಹಿತಿ ರವಾನಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net