

ನವದೆಹಲಿ: ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟವಾದ ಹಲವಾರು ವಿಡಿಯೋಗಳಲ್ಲಿ ಬಿಳಿ ಕಾರು ಚೀನಾದ ಶಾಂಘೈ ಹೋಟೆಲ್‌ನ ಗಾಜಿನ ಬಾಗಿಲುಗಳನ್ನು ಒಡೆದು, ಹಿಮ್ಮುಖವಾಗಿ ಲಾಬಿಗೆ ನುಗ್ಗಿ, ಇರುವ ಎಲ್ಲವನ್ನೂ ನಾಶ ಮಾಡುವುದನ್ನು ಕಾಣಬಹುದು.
ಸಿಟ್ಟಾಗಿದ್ದ ಅತಿಥಿಯೊಬ್ಬ ತನ್ನ ಸ್ಪೋರ್ಟ್ಸ್ ಕಾರನ್ನು ಚೈನೀಸ್ ಹೋಟೆಲ್‌ನ ಬಾಗಿಲುಗಳ ಮೂಲಕ ನುಗ್ಗಿಸಿ ಅದರ ಲಾಬಿಯ ಸುತ್ತಲೂ ಹುಚ್ಚುಚ್ಚಾಗಿ ಓಡಿಸಿದ್ದಾನೆ. ಇದಕ್ಕೆ ಕಾರಣ ಇನ್ನೂ ವಿಚಿತ್ರವಾದದ್ದು. ಈತನ ಲ್ಯಾಪ್ಟಾಪ್ ಕಾಣೆಯಾಗಿದ್ದು ಈ ಬಗ್ಗೆ ಸಿಬ್ಬಂದಿಜೊತೆಗೆ ವಾದ ಮಾಡಿದ್ದಾನೆ. ಆದರೆ ಲ್ಯಾಪ್ಟಾಪ್ ಸಿಗದೇ ಸಮಾಧಾನಗೊಳ್ಳದ ಈತ ಹೋಟೆಲ್ ಒಳಕ್ಕೆ ಕಾರು ನುಗ್ಗಿಸಿದ್ದಾನೆ.
ಈ ಕಾರು ಐಷಾರಾಮಿ ಕನ್ವರ್ಟಿಬಲ್ ಸ್ಪೋರ್ಟ್ಸ್ ಕಾರಾಗಿದ್ದು, ಒಳಗೆ ನುಗ್ಗಿದ ಮೇಲೆ ಅಡ್ಡಾದಿಡ್ಡಿಯಾಗಿ ಓಡಾಡಿದೆ. ಇದನ್ನು ಕಂಡು ಭಯಭೀತರಾದ ಸಾರ್ವಜನಿಕರು ಏನಾಗುತ್ತಿದೆ ಎಂದು ಒಬ್ಬರನ್ನೊಬ್ಬರು ಕೇಳಿದ್ದಾರೆ. (ಏಜೆನ್ಸೀಸ್)