ಒಣ ಕಸ ಹಸಿ ಕಸ ವಿಂಗಡಿಸಿ ಕೊಡಿ; ಪರಮೇಶ

19-RNR-03
Published on

ರಾಣೆಬೆನ್ನೂರ: ಜನತೆ ಒಣ ಕಸ ಹಸಿ ಕಸ ಬೇರ್ಪಡಿಸಿ ಗ್ರಾಪಂ ಸ್ವಚ್ಛತಾ ವಾಹಿನಿಗೆ ನೀಡಿದರೆ ತಮ್ಮ ಮನೆಯ ಸುತ್ತ ಮುತ್ತಲಿನ ಪರಿಸರದಲ್ಲಿ ಸ್ವಚ್ಛತೆ ಕಾಪಾಡಲು ಸಾಧ್ಯ ಎಂದು ತಾಪಂ ಇಒ ಪರಮೇಶ ಹೇಳಿದರು.

ತಾಲೂಕಿನ ಗುಡ್ಡದಆನ್ವೇರಿ ಗ್ರಾಪಂನಲ್ಲಿ ಬುಧವಾರ ಏರ್ಪಡಿಸಿದ್ದ ಒಣ ಕಸ ಹಸಿ ಕಸ ಸಂಗ್ರಹಣ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಮುದಾಯ ಸ್ವಚ್ಛತೆಯಿಂದ ಇದ್ದರೆ ಆರೋಗ್ಯವಂತ ಸಮಾಜ ನಿಮಿರ್ಸಲು ಸಾಧ್ಯ. ಗ್ರಾಮಗಳಲ್ಲಿ ಮನೆ ಮನೆಗೆ ಭೇಟಿ ನೀಡಿ ಒಣ ಕಸ ಹಸಿ ಕಸ ನೀರಿನ ಮಿತವಾದ ಬಳಕೆ ಕುರಿತು ಮಹಿಳಾ ಸಂಘದ ಪ್ರತಿನಿಧಿಗಳು ಜಾಗೃತಿ ಮೂಡಿಸಲಿದ್ದಾರೆ ಎಂದರು.

ಗ್ರಾಪಂ ಪಿಡಿಒ ರಾಜೀವ ಪಾಟೀಲ, ಅಧ್ಯೆ ಬಸವ್ವ ತಳವಾರ, ಉಪಾಧ್ಯೆ ಲಕ್ಷಿ$್ಮ ಚಟ್ನಿ, ಹನುಮಂತಪ್ಪ ಸಾರಥಿ, ಹನುಮಂತ ಬಿ.ಎಂ., ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಗ್ರಾಪಂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net