ಗ್ಯಾರಂಟಿಯಿಂದ ಆರ್ಥಿಕ ಸ್ಥಿತಿ ಸುಧಾರಣೆ

sor guaranty
ಸೊರಬದಲ್ಲಿ ಗ್ಯಾರಂಟಿ ಯೋಜನೆಗಳ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಎಚ್.ಕೆ.ಜಯಶೀಲ ಗೌಡ, ಕೆ.ಜಿ.ಶಶಿಧರ ಇತರರಿದ್ದರು.
Published on

ಸೊರಬ: ಗ್ಯಾರಂಟಿ ಯೋಜನೆಗಳಿಂದ ಬಡವರ, ದೀನ ದಲಿತರ ಆರ್ಥಿಕ ಸ್ಥಿತಿ ಸುಧಾರಿಸಿದೆ. ಈ ಯೋಜನೆ ಸಾಕಾರಗೊಳ್ಳಲು ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕು ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಕೆ.ಜಯಶೀಲ ಗೌಡ ಹೇಳಿದರು.

ತಾಪಂ ಸಭಾಂಗಣದಲ್ಲಿ ಬುಧವಾರ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ತಳ ಸಮುದಾಯಗಳು, ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು, ಮಹಿಳೆಯರು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ಯೋಜನೆಗಳನ್ನು ಜಾರಿಗೊಳಿಸಿದೆ. ನೆಮ್ಮದಿಯ ಜೀವನ ನೆಡೆಸಲು ಸಹಕಾರಿಯಾಗಿದೆ ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಬೇಕಾದರೆ ಬಹುಮುಖ್ಯವಾದ ಹೊಣೆ ಅಧಿಕಾರಿಗಳದ್ದಾಗಿರುತ್ತದೆ ಎಂದರು.

ಗ್ಯಾರಂಟಿ ಸಮಿತಿ ಸದಸ್ಯ ಆರ್.ಟಿ.ಮಂಜುನಾಥ್ ಮಾತನಾಡಿ, ಶಿರಸಿ ಘಟಕದಿಂದ ಬರುವ ಬಸ್ ಕಿರುವತ್ತಿಯಲ್ಲಿ ತಂಗುತ್ತಿದೆ. ಅದನ್ನು ಜಡೆಯಲ್ಲಿ ನಿಲುಗಡೆ ಮಾಡಿದರೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಜಡೆ- ದಾಸನಕೊಪ್ಪ- ಶಿರಸಿ ಮಾರ್ಗದ ಬಸ್ ಪುನಃ ಆರಂಭಿಸಬೇಕು ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರು.

ಹಾವೇರಿ, ಅಕ್ಕಿ ಆಲೂರು, ಪ್ರಥಮದರ್ಜೆ ಕಾಲೇಜು, ನಾಲ್ಕರ ಕ್ರಾಸ್, ಆನವಟ್ಟಿ ಮಾರ್ಗವಾಗಿ ಸಂಚರಿಸುವ ಬಸ್ ವೇಳಾಪಟ್ಟಿ ಸರಿಪಡಿಸಬೇಕು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸೊರಬದಿಂದ ಉದ್ರಿ-ತೋಗರ್ಸಿ ಹಾಗೂ ಎಣ್ಣೆಕೊಪ್ಪ ಮಾರ್ಗವಾಗಿ ಚಿಕ್ಕೇರಿಗೆ ಬಸ್ ವ್ಯವಸ್ಥೆ ಕಲ್ಪಿಸಬೇಕು. ಆನವಟ್ಟಿ- ಸೊರಬ- ಧರ್ಮಸ್ಥಳ, ಆನವಟ್ಟಿ- ಸೊರಬ- ಮೈಸೂರು ಮಾರ್ಗವಾಗಿ ಬಸ್ ವ್ಯವಸ್ಥೆ ಕಲ್ಪಿಸಬೇಕು, ತವನಂದಿ ಗುಡವಿ ಮಧ್ಯಭಾಗದಲ್ಲಿ ಗ್ರಿಡ್ ವ್ಯವಸ್ಥೆ ಕಲ್ಪಿಸಬೇಕು ಎಂದು ಸಮಿತಿ ಸದಸ್ಯರಾದ ಚಾಂದ್ ಸಾಬ್, ಮುಖ್ತಿಯಾರ್ ಬಾಷಾ, ಸಂತೋಷ್ ಮನವಿ ಮಾಡಿದರು.

ತಾಪಂ ಇಒ ಕೆ.ಜಿ.ಶಶಿಧರ, ಆಹಾರ ಇಲಾಖೆಯ ಯೋಗೀಶ್, ಜಿಲ್ಲಾ ಗ್ಯಾರಂಟಿ ಸಮಿತಿ ಸದಸ್ಯ ಪ್ರಭಾಕರ ಶಿಗ್ಗಾ, ಗ್ಯಾರಂಟಿ ಸಮಿತಿ ಸದಸ್ಯರಾದ ಪಾಂಡು, ಶಿವಪುತ್ರಪ್ಪ, ರಾಮಪ್ಪ, ಅಭಿಷೇಕ್, ವಿನಾಯಕ, ಜಯಶೀಲಪ್ಪ, ತಾಪಂ ವ್ಯವಸ್ಥಾಪಕಿ ಮಮತಾ, ಇಲಾಖೆ ಅಧಿಕಾರಿಗಳಾದ ಶ್ರೀಶೈಲ ಬಿರಾದಾರ್, ಆರ್.ಕೆ.ನಂದೂರು, ಮೆಸ್ಕಾಂನ ಸತ್ಯಪ್ರಕಾಶ್, ಸೋಮಶೇಖರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net