ಬೆಂಗಳೂರು : ಬಿಇ ಪದವೀಧರರಿಗೆ ಜಿಟಿಟಿಸಿಯಲ್ಲಿ ಪ್ರಾಂಶುಪಾಲರಾಗುವ ಅವಕಾಶ

Exam
Published on

ಬೆಂಗಳೂರು: ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ) ಗಳಲ್ಲಿ ಪ್ರಾಂಶುಪಾಲರ ಹುದ್ದೆಗಳಿಗೆ ಸಂಪರ್ಕ ಸಂವಹನ, ಪರಸ್ಪರ ಸಂವಾದದಲ್ಲಿ ಅತ್ಯುತ್ತಮ ಪರಿಣತಿ ಹೊಂದಿರುವ, ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸುವ ಟೂಲ್ ರೂಮ್ ಮತ್ತು ಟ್ರೈನಿಂಗ್ ಸೆಂಟರ್ ಚಟುವಟಿಕೆಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿರುವ ಪ್ರತಿಭಾವಂತ

ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

6 (ಉಡುಪಿ, ಗೋಕಾಕ, ಮಂಗಳೂರು, ದಾಂಡೇಲಿ, ಕೋಲಾರ, ಕೂಡಲಸಂಗಮದಲ್ಲಿ ) ಪ್ರಾಂಶುಪಾಲ ಹುದ್ದೆ ಇವೆ.

ಎಐಸಿಟಿಇಯಿಂದ ಮಾನ್ಯತೆ ಹೊಂದಿರುವ ಯಾವುದೇ ವಿವಿಯಿಂದ ಮೆಕಾನಿಕಲ್ ಇಂಜಿನಿಯರಿಂಗ್ ಸಂಬಂಧಿಸಿದ ವಿಷಯದಲ್ಲಿ ಪ್ರಥಮ ದರ್ಜೆ ಬಿಇ ಜತೆಗೆ ಪ್ರಥಮ ದರ್ಜೆ ಸ್ನಾತಕೋತ್ತರ ಪದವಿ ಪಾಸಾಗಿರಬೇಕು. ಕಾರ್ಯಾನುಭವ ಹೊಂದಿರಬೇಕು. ಕನಿಷ್ಠ 28 ವರ್ಷ ಗರಿಷ್ಠ 63 ವರ್ಷ ವಯೋಮಿತಿ ಹೊಂದಿರಬೇಕು.

ತಿಂಗಳಿಗೆ ಕ್ರೋಢೀಕೃತ ಸಂಭಾವನೆ 50,000 ರೂ. ಇರುತ್ತದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆಗಸ್ಟ್ 7 ರವರೆಗೆ ಅರ್ಜಿ ಸಲ್ಲಿಸಬಹುದು. ಮಾಹಿತಿಗೆ :

https://karunadu.karnataka.gov.in/gttc ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net