ಗ್ರಾಹಕರ ವೆಚ್ಚ ಹೆಚ್ಚಿಸಲು ಜಿಎಸ್​ಟಿ ಪರಿಷ್ಕರಣೆ: ಗರಿಷ್ಟ ಪರಿಣಾಮ ಬೀರುವ 5 ವಲಯಗಳು| GST

GST
Published on

GST: ಈ ವಾರ ಘೋಷಿಸಲಾದ ಜಿಎಸ್​ಟಿ ದರ ಪರಿಷ್ಕರಣೆಯಲ್ಲಿ ಸೋಪುಗಳು, ಶಾಂಪುಗಳು, ಕೂದಲಿನ ಎಣ್ಣೆ, ಪುಡಿಗಳು ಮತ್ತು ಟೂತ್‌ಪೇಸ್ಟ್‌ನಂತಹ ವೈಯಕ್ತಿಕ ಆರೈಕೆ ಮತ್ತು ಗೃಹ ಆರೈಕೆ ಉತ್ಪನ್ನಗಳ ಮೇಲಿನ ಜಿಎಸ್‌ಟಿಯನ್ನು ಶೇಕಡಾ 12–18 ರಿಂದ ಶೇಕಡಾ 5 ಕ್ಕೆ ಇಳಿಸಲಾಗಿದೆ ಎಂದು ಗ್ಲೋಬಲ್ ಫೈನಾನ್ಷಿಯಲ್ ಕನ್ಸಲ್ಟೆನ್ಸಿ ಬರ್ನ್‌ಸ್ಟೈನ್ ವರದಿ ಮಾಡಿದೆ.

ಇದು FMCG ಸಂಸ್ಥೆಗಳಿಗೆ ತಕ್ಷಣದ ಅವಧಿಯಲ್ಲಿ ಬೆಲೆ ನಿಗದಿಗೆ ಬೆಂಬಲವನ್ನು ಒದಗಿಸಬೇಕು. ಹಾಗೆಯೇ ಇದು ಗ್ರಾಹಕರು ಒದಗಿಸುವ ಒಟ್ಟು ಬೆಲೆಯ ಹೆಚ್ಚಿನ ಭಾಗವನ್ನು ಉಳಿಸಿಕೊಳ್ಳಲು ಅವರಿಗೆ ಅನುವು ಮಾಡಿಕೊಡುತ್ತದೆ. ಆದಾಗ್ಯೂ, ಇದು ಉತ್ಪನ್ನಗಳಿಗೆ ಹೆಚ್ಚಿನ ವ್ಯಾಲೆಟ್​ ಹಂಚಿಕೆಯ ಮೂಲಕ ಗ್ರಾಹಕರ ಬೇಡಿಕೆಯನ್ನು ಹೆಚ್ಚಿಸಬಹುದು ಎಂದು ವರದಿ ಮಾಡಿದೆ.

ಉಡುಪು ಮತ್ತು ಪಾದರಕ್ಷೆಗಳ ಮೇಲೆ ಜಿಎಸ್​ಟಿ ಪರಿಣಾಮ

ಉಡುಪು ಮತ್ತು ಪಾದರಕ್ಷೆಗಳ ಮೇಲಿನ ಜಿಎಸ್‌ಟಿಯು ಮಿಶ್ರ ಪರಿಣಾಮ ಬೀರುತ್ತದೆ ಎಂದು ಬರ್ನ್‌ಸ್ಟೈನ್ ವರದಿ ಮಾಡಿದೆ. ಇಲ್ಲಿಯವರೆಗೆ 1,000 ರಿಂದ 2,500 ರ ನಡುವಿನ ಬೆಲೆಯ ಉಡುಪುಗಳು ಹಾಗೂ ಪಾದರಕ್ಷೆಗಳ ಮೇಲೆ ಶೇ. 18 ರಷ್ಟು ತೆರಿಗೆ ವಿಧಿಸಲಾಗುತ್ತಿತ್ತು.

ಆದರೆ, ಪರಷ್ಕೃತ ದರದಲ್ಲಿ 1,000 ರಿಂದ 2,500 ರೂ ಇರುವಂತಹ ಉಡುಪು ಮತ್ತು ಪಾದರಕ್ಷೆಗಳ ಮೇಲಿನ ತೆರಿಗೆಯನ್ನು ಶೇ.5 ರಷ್ಟು ಇಳಿಕೆ ಮಾಡಲಾಗಿದೆ. ಹಾಗೆಯೇ 2,500ರೂ. ಕ್ಕಿಂತ ಹೆಚ್ಚಿನ ವಸ್ತುಗಳಿಗೆ ಶೇ 18 ರಷ್ಟು ತೆರಿಗೆ ವಿಧಿಸಲಾಗಿದೆ ಎಂದು ಹೇಳಿದೆ.

ಟ್ರೆಂಟ್​, ಆದಿತ್ಯ ಬಿರ್ಲಾ ಫ್ಯಾಷನ್ ರಿಟೇಲ್ ಮತ್ತು ಆದಿತ್ಯ ಬಿರ್ಲಾ ಲೈಫ್‌ಸ್ಟೈಲ್​ಗೆ ಇದು ಸಕಾರಾತ್ಮಕ ಬೆಳವಣಿಗೆ ನೀಡುತ್ತದೆ ಏಕೆಂದರೆ, ಅವರ ನಿಗದಿಪಡಿಸುವ ಬೆಲೆ 1000 ಕ್ಕಿಂತ ಹೆಚ್ಚಿರುವುದರಿಂದ ಪ್ರಯೋಜನ ಪಡೆಯುವ ನಿರೀಕ್ಷೆ ಹೆಚ್ಚಿದೆ. ಆದಾಗ್ಯೂ, ಪಾದರಕ್ಷೆಗಳ ಜಿಎಸ್‌ಟಿ ಕಡಿಮೆಗೊಳಿಸುವಿಕೆ ಲಿಬರ್ಟಿ, ಕ್ಯಾಂಪಸ್, ಮೆಟ್ರೋ ಮುಂತಾದ ಚಿಲ್ಲರೆ ವ್ಯಾಪಾರಿಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿಸಿದೆ.

ಚಿಲ್ಲರೆ ವ್ಯಾಪಾರಿಗಳ ಮೇಲೆ ಪರಿಣಾಮ

ವಿಶಾಲ್ ಮೆಗಾ ಮಾರ್ಟ್, ವಿ-ಮಾರ್ಟ್, ವಿ2 ರಿಟೇಲ್ ಮತ್ತು ಸ್ಟೈಲ್ ಬಜಾರ್‌ನಂತಹ ಅಂಗಡಿಗಳಲ್ಲಿ ಉಡುಪು ಚಿಲ್ಲರೆ ವ್ಯಾಪಾರಿಗಳ ಮೇಲಿನ ಪರಿಣಾಮವು ಹೆಚ್ಚಾಗಿ ತಟಸ್ಥವಾಗಿರುತ್ತದೆ. ಏಕೆಂದರೆ ಅವರ ಹೆಚ್ಚಿನ ವಸ್ತುಗಳು 1,000 ರೂ.ಗಿಂತ ಕಡಿಮೆ ಬೆಲೆಯಲ್ಲಿರುತ್ತವೆ. ಹಾಗಾಗಿ ಅವರ ಮೇಲೆ ಹೊರೆ ಹೆಚ್ಚಾಗಬಹುದು.

QSR ಗಳಿಗೆ ಲಾಭ ನಿರೀಕ್ಷೆ

ಪ್ಯಾಕೇಜಿಂಗ್ ಸಾಮಗ್ರಿಗಳು, ಚೀಸ್, ಕಾಂಡಿಮೆಂಟ್ಸ್, ಬೆಣ್ಣೆ, ತುಪ್ಪ ಮುಂತಾದ ಸಾಮಾಗ್ರಿಗಳ ಮೇಲಿನ ಜಿಎಸ್​ಟಿ ಕಡಿತದಿಂದ ಫಲಾನುಭವಿಗಳು ಹೆಚ್ಚಿನ ಲಾಭ ಪಡೆದರೆ, ಈ ದರಗಳಿಂದಾಗಿ ಆಹಾರ ವಿತರಣಾ ವೇದಿಕೆಗಳು ಹೆಚ್ಚುವರಿ ಹೊರೆಯನ್ನು ಎದುರಿಸಬೇಕಾಗುತ್ತದೆ. ಹಾಗೆಯೇ ಡೊಮಿನೊಸ್ ಅನ್ನು ನಡೆಸುವ ಜುಬಿಲಂಟ್ ಫುಡ್‌ವರ್ಕ್ಸ್, ಅದರ ಒಟ್ಟು ಲಾಭವು ಶೇ. 70–80 ಬೇಸಿಸ್ ಪಾಯಿಂಟ್‌ಗಳಷ್ಟು ಸುಧಾರಿಸಬಹುದು.

ಆಹಾರ ವಿತರಣೆಗಳ ಮೇಲೆ ಹೊಸ ಜಿಎಸ್‌ಟಿ ಶುಲ್ಕಗಳು

ಆಹಾರ ವಿತರಣಾ ವೇದಿಕೆಗಳು ಹೆಚ್ಚುವರಿ ಹೊರೆಯನ್ನು ಎದುರಿಬೇಕಾಗುತ್ತದೆ. ಹಾಗೆಯೇ, ಇ-ಕಾಮರ್ಸ್ ಆಪರೇಟರ್‌ಗಳ ಮೂಲಕ ಸಂಗ್ರಹಿಸಲಾದ ವಿತರಣಾ ಶುಲ್ಕಗಳ ಮೇಲೆ ಹೊಸ 18 ಪ್ರತಿಶತದಷ್ಟು GST ವಿಧಿಸಲಾಗಿದೆ. ಇವು ಹಿಂದೆ ತೆರಿಗೆ ಮುಕ್ತವಾಗಿದ್ದವು. ಆಹಾರ ವಿತರಣಾ ವೇದಿಕೆಗಳ ಆದಾಯದ ಶೇ.10–20 ಪ್ರತಿಶತದಷ್ಟು ವಿತರಣೆಯ ಪಾಲನ್ನು ಹೊಂದಿದೆ.

ಜಿಎಸ್​ಟಿ ಪರಿಷ್ಕರಣೆಯ ಭಾಗ

ಪ್ರಧಾನಿ ನರೇಂದ್ರ ಮೋದಿಯವರು ಸ್ವಾತಂತ್ರ್ಯ ದಿನಾಚರಣೆಯಂದು ತೆರಿಗೆ ವಿನಾಯಿತಿಯನ್ನು ನೀಡುವುದರ ಬಗ್ಗೆ ತಿಳಿಸಿದ ನಂತರ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್​ ನೇತೃತ್ವದಲ್ಲಿ ಸೆಪ್ಟೆಂಬರ್​ 3 ರಂದು ಜಿಎಸ್​ಟಿ ದರದಲ್ಲಿ ಪರಿಷ್ಕೃತ ದರಗಳ ಶೇಕಡ ಇಳಿಕೆವಾರು ಕಂಡುಬಂದಿದೆ.

ಇನ್ನು ಸೆಪ್ಟೆಂಬರ್​ 22 ರಂದು ಈ ಹೊಸ ದರಗಳು ಜಾರಿಗೆ ಬರಲಿದ್ದು, ಇದರಿಂದ ಆರ್ಥಿಕ ಬೆಳವಣಿಗೆಯನ್ನು ಬೆಂಬಲಿಸುವುದರ ಜೊತೆಗೆ ನಾಗರಿಕರಿಗೆ ಹೊಸ ತೆರಿಗೆ ಹೊರೆಯನ್ನು ಕಡಿಮೆ ಗುರಿಯನ್ನು ಹೊಂದಿದೆ. (ಏಜೆನ್ಸಿಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net