ಜಿಎಸ್ಟಿ ಬಾಕಿ ಬಿಡುಗಡೆಗೆ ಕೇಂದ್ರದ ಮೇಲೆ ಒತ್ತಡ

GST (4)
Published on

ಬೆಂಗಳೂರು: ಸರಕು ಸೇವಾ ತೆರಿಗೆ (ಜಿಎಸ್ಟಿ) ಮಂಡಳಿ ಸಭೆ ಶನಿವಾರ ದೆಹಲಿಯಲ್ಲಿ ನಡೆಯುತ್ತಿದ್ದು, ಕರ್ನಾಟಕವು ತನಗೆ ಬರಬೇಕಾದ ಬಿಡುಗಡೆ ಈ ಸಂದರ್ಭದಲ್ಲಿ ಒತ್ತಡ ಹೇರಲಿದೆ.

ಬುಧವಾರ ವಿಕಾಸ ಸೌಧದಲ್ಲಿ ಜಿಎಸ್ಟಿ ಮಂಡಳಿ ಸದಸ್ಯರೂ ಆಗಿರುವ ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಯಾವೆಲ್ಲ ವಿಚಾರವನ್ನು ಮಂಡಳಿ ಮುಂದೆ ಚರ್ಚೆ ನಡೆಸಬೇಕೆಂಬ ಬಗ್ಗೆ ವಿಚಾರ ವಿನಿಮಯ ನಡೆಸಿದರು.

ಮುಖ್ಯವಾಗಿ ರಾಜ್ಯ ಸರ್ಕಾರಕ್ಕೆ ಬಾಕಿ ಬರಬೇಕಾದ 2,300 ಕೋಟಿ ರೂ. ಜಿಎಸ್ಟಿ ಪರಿಹಾರದ ಬಗ್ಗೆ ಗಮನ ಸೆಳೆಯುವ ಹಾಗೂ ರಾಜ್ಯದ ಅಜೆಂಡಾ ಸ್ಪಷ್ಟಪಡಿಸುವ ಸಂಬಂಧ ತೀರ್ಮಾನ ಕೈಗೊಳ್ಳಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net