

First Night : ಈ ಕಣ್ಣಲ್ಲಿ ಇನ್ನೂ ಏನೇನು ನೋಡ್ಬೇಕೋ! ಎಂಬ ಡೈಲಾಗ್ ಈ ವಿಡಿಯೋ ನೋಡಿದ್ರೆ ಖಂಡಿತಾ ನಿಮಗೆ ನೆನಪಾಗುತ್ತೆ. ಈ ಸಾಮಾಜಿಕ ಜಾಲತಾಣ ಯುಗದಲ್ಲಿ ಎಲ್ಲರೂ ಫೇಮಸ್ ಆಗಬೇಕು ಎಂಬ ಉದ್ದೇಶದಿಂದ ಹುಚ್ಚುಚ್ಚಾಗಿ ವಿಡಿಯೋ ಮಾಡಿ ಹರಿಬಿಡುತ್ತಿದ್ದಾರೆ. ಒಬ್ಬರು ತಮ್ಮ ಅಡುಗೆ ಕೋಣೆಯನ್ನು ತೋರಿಸಿದರೆ, ಕೆಲವರು ತಮ್ಮ ಬಾತ್ರೂಮ್ ತೋರಿಸುತ್ತಾರೆ. ಅದೇ ರೀತಿ ಫ್ರಿಡ್ಜ್, ವಾಷಿಂಗ್ ಮೆಶಿನ್ ಸಹ ತೋರಿಸುತ್ತಾರೆ.
ಕೆಲವರಂತೂ ಟ್ಯಾಲೆಂಟ್ ಹೆಸರಿನಲ್ಲಿ ಅಸಭ್ಯ ವಿಡಿಯೋ ಮಾಡಿ ಎಕ್ಸ್ಪೋಸ್ ಮಾಡುತ್ತಿದ್ದಾರೆ. ಬೆಡ್ರೂಮಿನಲ್ಲಿ ನಡೆಯುವ ಅತ್ಯಂತ ರಹಸ್ಯ ವಿಚಾರಗಳನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಲಾಗುತ್ತಿದೆ. ಇತ್ತೀಚೆಗೆ ನವದಂಪತಿ, ಮೊದಲ ರಾತ್ರಿಗಾಗಿ ಸಿಂಗರಿಸಿದ ತಮ್ಮ ಕೋಣೆಯಲ್ಲಿ ಮಲಗಿ ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ತೀವ್ರ ಟೀಕೆಗೆ ಗುರಿಯಾಗಿದೆ.
ವೈರಲ್ ಆಗಿರುವ ವಿಡಿಯೋವನ್ನು ಸಜ್ಜದ್ ಚೌಧರಿ ಎಂಬಾತ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾನೆ. ವಿಡಿಯೋದಲ್ಲಿ ವಧು ಸಿಂಗರಿಸಿದ ಮಂಚದ ಮೇಲೆ ಮಲಗಿದ್ದಾಳೆ. ವರನು ಕೂಡ ಮಂಚದ ಮೇಲಿದ್ದು, ಇಲ್ಲಿ ಬಣ್ಣ ಮುಖ್ಯ ಅಲ್ಲ ಪ್ರೀತಿ ಮುಖ್ಯ ಎಂದು ವರ ಮಾತು ಆರಂಭಿಸುತ್ತಾನೆ. ಇದೇ ವೇಳೆ ವಧು, ನೀವು ಜನರಿಗೆ ನಿಮ್ಮ ಖಾಸಗಿ ಕ್ಷಣಗಳನ್ನು ತೋರಿಸುತ್ತೀರಾ? ಎಂದು ಕೇಳುತ್ತಾಳೆ. ಅದಕ್ಕೆ ಸಜ್ಜದ್ ಚೌಧರಿ, ನನಗೆ ಎಂತಹ ಸುಂದರ ಹೆಂಡತಿ ಸಿಕ್ಕಿದ್ದಾಳೆ. ನಾನು ಅದನ್ನು ಜನರಿಗೆ ಹೇಳಬೇಕಲ್ಲವೇ ಎಂದು ಉತ್ತರಿಸಿದ್ದಾನೆ.
ವಿಡಿಯೋ ರೆಕಾರ್ಡ್ ಆಗುತ್ತಿರುವಾಗ ಮಧ್ಯದಲ್ಲಿ ವಿದ್ಯುತ್ ಕೂಡ ಆಫ್ ಆಗುತ್ತದೆ. ಆದರೂ ಸಜ್ಜದ್ ಮಾತನಾಡುವುದು ಕೇಳಿಸುತ್ತದೆ. ಈ ಇನ್ಸ್ಟಾಗ್ರಾಂ ಪುಟದಲ್ಲಿ ದಂಪತಿಯ ಹಲವು ವಿಡಿಯೋಗಳಿವೆ. ಈ ವಿಡಿಯೋವನ್ನು ಮೊದಲ ರಾತ್ರಿಯ ತಮಾಷೆಗಾಗಿ ರೆಕಾರ್ಡ್ ಮಾಡಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಅಲ್ಲದೆ, ವಧು-ವರರ ಬಗ್ಗೆ ಇತರ ಮಾಹಿತಿಯೂ ಲಭ್ಯವಿಲ್ಲ. ಇನ್ಸ್ಟಾಗ್ರಾಂ ಖಾತೆ ನೋಡಿದರೆ ಇದನ್ನು ತಮಾಷೆಗಾಗಿ ಮಾಡಿರುವಂತೆ ತೋರುತ್ತದೆ.
ಈ ವಿಡಿಯೋ ಇಲ್ಲಿಯವರೆಗೆ 4.9 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಹಲವು ಕಾಮೆಂಟ್‌ಗಳು ಸಹ ಬಂದಿದ್ದು, ವರನಿಗೆ ಸರ್ಕಾರಿ ಕೆಲಸ ಇದ್ದರೆ ಸಾಕು, ಇಲ್ಲಿ ಹಣ ಮುಖ್ಯ ಸೌಂದರ್ಯವಲ್ಲ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಈ ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ. (ಏಜೆನ್ಸೀಸ್)