ಚಳಿ ತಾಳಲಾರದೆ ಪ್ರಜ್ಞೆ ತಪ್ಪಿ ಬಿದ್ದ ವರ; Marriage​ ರದ್ದುಗೊಳಿಸಿ ವಧುವಿನ ಕುಟುಂಬ ಹೇಳಿದ್ದು ಹೀಗೆ...

Brother-Sister Marriage
Published on

ರಾಂಚಿ: ದಿನ ಕಳದಂತೆ ದೇಶದಲ್ಲಿ ಚಳಿ ಹೆಚ್ಚುತ್ತಿದ್ದು, ಉತ್ತರಭಾರತದಲ್ಲಿ ತುಸು ಹೆಚ್ಚು ಎಂದು ಹೇಳಬಹುದಾಗಿದೆ. ದೆಹಲಿಯಲ್ಲಿ ವಾಯು ಗುಣಮಟ್ಟ ತೀವ್ರವಾಗಿ ಹದಗೆಟ್ಟಿದ್ದು, ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಇದೀಗ ಚಳಿಯ ಕಾರಣಕ್ಕೆ ಮದುವೆಯೊಂದು (Marriage) ಮುರಿದು ಬಿದ್ದಿರುವ ಘಟನೆ ಜಾರ್ಖಂಡ್​ನ ದಿಯೋಗಢದಲ್ಲಿ ನಡೆದಿದ್ದು, ಈ ವಿಚಾರ ಅಚ್ಚರಿಯನ್ನುಂಟು ಮಾಡಿದೆ.

ಡಿಸೆಂಬರ್ 15ರಂದು ದಿಯೋಗಢದ ಆರ್ನವ್​ ಜೊತೆಗೆ ಬಿಹಾರದ ಭಾಗಲ್​ಪುರ ನಿವಾಸಿ ಅಂಕಿತಾ ಅವರೊಟ್ಟಿಗೆ ವಿವಾಹ (Marriage) ನಿಶ್ಚಯವಾಗಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ಅರ್ನವ್​ ಚಳಿ ತಾಳಲಾರದೆ ಮೂರ್ಛೆ ಹೋಗಿದ್ದಾನೆ. ಇದನ್ನು ಕಂಡ ಮದುವೆಯನ್ನು ರದ್ದುಗೊಳಿಸಿದ್ದು, ಮದುವೆಮಂಟಪದಿಂದ ಎದ್ದು ಹೋಗಿದ್ದಾಳೆ.

Late Marriage

ಘಟನೆಯ ಹಿನ್ನೆಲೆ? 

ಡಿಸೆಂಬರ್​ 15ರಂದು ದಿಯೋಗಢದ ಘೋರ್ಮಾರಾದಲ್ಲಿ ಅರ್ನವ್​ ಹಾಗೂ ಅಂಕಿತಾ ವಿವಾಹವನ್ನು ನಿಶ್ಚಯಿಸಲಾಗಿತ್ತು. ವಧುವಿನ ಕುಟುಂಬಸ್ಥರು ಮದುವೆ ಮನೆ (Marriage Hall) ತಲುಪಿದ ಬಳಿಕ ಶಾಸ್ತ್ರಗಳನ್ನು ಪ್ರಾರಂಭಿಸಲಾಗಿದೆ. ಆ  ಬಳಿಕ ವಧು ಹಾಗೂ ವರ ಇಬ್ಬರನ್ನು ಜೊತೆಯಾಗಿ ಕೂರಿಸಿ ಕೆಲವು ಶಾಸ್ತ್ರಗಳನ್ನು ಮಾಡಲಾಗಿದೆ. ಈ ವೇಳೆ ಚಳಿಯಿಂದಾಗಿ ವರ ನಡುಗಲು ಶುರು ಮಾಡಿದ್ದು, ಪುರೋಹಿತರು ಮಂತ್ರ ಪಠಿಸುತ್ತಿದ್ದಂತೆ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ.

ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಒಂದೂವರೆ ಘಂಟೆಗಳ ಬಳಿಕ ಆತನಿಗೆ ಪ್ರಜ್ಞೆ ಬಂದಿದೆ. ಇದನ್ನು ನೋಡಿದ ವಧು ಮದುವೆಯನ್ನು ರದ್ದುಪಡಿಸುವಂತೆ ಹೇಳಿದ್ದು, ವರನಿಗೆ ಗಂಭೀರ ಸ್ವರೂಪದ ಖಾಯಿಲೆಯಿದ್ದು ಇದನ್ನು ಮುಚ್ಚಿಟ್ಟು ಮದುವೆ (Marriage) ಮಾಡಲಾಗುತ್ತಿದೆ ಎಂದು ವಧು ಅಂಕಿತಾ ಆರೋಪಿಸಿದ್ದಾಳೆ. ವಧು ಹಾಗೆ ಹೇಳುತ್ತಿದ್ದಂತೆ ಮದುವೆಮನೆಯಲ್ಲಿ ಗದ್ದಲ ಉಂಟಾಗಿದ್ದು, ಪೊಲೀಸರು ಮದ್ಯಪ್ರವೇಶಿಸಿ ಪರಿಸ್ಥಿತಿಯನ್ನು ಸುಧಾರಿಸಲು ಮುಂದಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಅಂತಿಮವಾಗಿ ವಧು ಹಾಗೂ ವರನ ಕಡೆಯವರು ಪರಸ್ಪರ ಮಾತನಾಡಿ ಮದುವೆಯನ್ನು ರದ್ದುಗೊಳಿಸಿದ್ದು ತಮ್ಮ ತಮ್ಮ ಮನೆಗೆ ವಾಪಸ್​ ಆಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net