ಮದ್ವೆಯಾದ ಮೂರೇ ದಿನಕ್ಕೆ ಹೃದಯಘಾತದಿಂದ ವರ ಸಾವು! | Heart Attack

ಹೊಳೆಯುವ ಚರ್ಮ ನಿಮ್ಮದಾಗಬೇಕೆ ಆಲಿಯಾ ಭಟ್__ ಸೇವಿಸುವ ಬೀಟ್_ರೂಟ್ ಸಲಾಡ್_ ಪ್ರಯತ್ನಿಸಿ! Beetroot Salad (2)
Published on

Heart Attack: ವಿವಾಹವಾದ ಮೂರೇ ದಿನಗಳಲ್ಲಿ ನವ ವರ ಹೃದಯಾಘಾತದಿಂದ ಮೃತಪಟ್ಟ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ.

ಇಲ್ಲಿನ ಬದಂಗ್‌ಪೇಟೆಯ ಲಕ್ಷ್ಮಿ ದುರ್ಗಾ ನಗರ ಕಾಲೋನಿಯ ಸಾಯಿ ಅನಿಲ್ ಕುಮಾರ್ (26) ಮೃತ. ಈ ತಿಂಗಳ(ಆಗಸ್ಟ್​) 7 ರಂದು ವಿವಾಹವಾಗಿದೆ. ಮರುದಿನ, ಬೆಳಗಿನ ಜಾವ ತನ್ನ ನವ ವಧುವಿನೊಂದಿಗೆ ಮನೆಗೆ ತಲುಪಿದ ತಕ್ಷಣ ಅವರಿಗೆ ಹೃದಯಾಘಾತವಾಗಿದೆ. ಅವರ ಕುಟುಂಬದ ಸದಸ್ಯರು ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಚಿಕಿತ್ಸೆ ನೀಡುವ ವೇಳೆಗೆ ಮೃತಪಟ್ಟಿದ್ದಾರೆ.

ಅದ್ಧೂರಿ ಸಮಾರಂಭದಲ್ಲಿ ದಂಪತಿಗಳು ವಿವಾಹವಾಗಿದ್ದು, ಮದುವೆ ಮೆರವಣಿಗೆಯಲ್ಲಿ ಎಲ್ಲರೂ ಸಂತೋಷದಿಂದಿದ್ದರು. ಮದುವೆಯಾದ ಕೇವಲ ಮೂರೇ ದಿನಗಳ ನಂತರ ವರನು ಮೃತಪಟ್ಟಿರುವ ಘಟನೆ ಮದುವೆಯ ಮನೆ ದುರಂತದಿಂದ ತುಂಬಿ ಹೋಗಿದೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net