ಮದುವೆ ದಿನವೇ ಆಯಾಸ, ತಲೆಸುತ್ತು! ಮೊದಲ ರಾತ್ರಿಯೇ ಪತ್ನಿಗೆ ಗರ್ಭಧಾರಣೆ ಕಿಟ್​ ಬಳಸು ಎಂದ ಪತಿ.. Pregnancy Test Kit

Pregnancy Test Kit
Published on

 Pregnancy Test Kit :  ಮದುವೆಯ ದಿನವೇ ಯುವಕನೊಬ್ಬ ತನ್ನ ಹೆಂಡತಿಗೆ ಗರ್ಭಾಧಾಠಣೆ ಪರೀಕ್ಷಾ ಕಿಟ್​ನ್ನು ನೀಡಿದ್ದಾನೆ. ಈ ಘಟನೆ ಉತ್ತರಪ್ರದೇಶದ ರಾಮ್​ಪುರದಲ್ಲಿ ನಡೆದಿದೆ.

ಸುದ್ದಿ ಮೂಲಗಳ ಪ್ರಕಾರ, ಮದುವೆಯಾದ ನಂತರ ವಧುವಿಗೆ ಆಯಾಸ, ತಲೆತಿರುಗುವಿಕೆ ಉಂಟಾಗಿದೆ. ವರ ಗಾಬರಿಗೊಂಡು ತನ್ನ ಸ್ನೇಹಿತರ ಬಳಿ ಈ ವಿಷಯವನ್ನು ಹಂಚಿಕೊಂಡಿದ್ದಾನೆ. ಗರ್ಭಧಾರಣೆಯ ಸಂಕೇತವಾಗಿರಬಹುದು ಎಂದು  ಗೆಳೆಯರು ತಮಾಷೆ ಮಾಡಿದ್ದಾರೆ. ಈ ಮಾತನ್ನು ಗಂಭೀರವಾಗಿ ತೆಗೆದುಕೊಂಡ ವರ ಭಯಗೊಂಡಿದ್ದಾನೆ.

ರಾತ್ರೋರಾತ್ರಿ ಮೆಡಿಕಲ್​ಗೆ ಹೋಗಿ ಗರ್ಭಧಾರಣೆ ಪರೀಕ್ಷಾ ಕಿಟ್​ ತಂದಿದ್ದಾನೆ. ತದನಂತರ ಈ ಕಿಟ್​ನ್ನು ವಧುವಿಗೆ ನೀಡಿ ಪರೀಕ್ಷೆ ಮಾಡಲು ತಿಳಿಸಿದ್ದಾನೆ. ಈ ವಿಚಾರವಾಗಿ ಕೋಪಗೊಂಡ ವಧು ತನ್ನ ಕುಟುಂಬದ ಸದಸ್ಯರಿಗೆ ಈ ವಿಚಾರವನ್ನು ತಿಳಿಸಿದ್ದಾಳೆ. ವಿಷಯ ತಿಳಿದ ಕೂಡಲೇ ಮನೆಗೆ ಕುಟುಂಬಸ್ಥರು ಬಂದಿದ್ದು, ಈ ವಿಚಾರದ ಬಗ್ಗೆ ಎರಡು ಕುಟುಂಬಗಳ ನಡುವೆ ಕೆಲ ಸಮಯ ಗಲಾಟೆ ನಡೆದಿದೆ.

ಈ ಗಲಾಟೆ ಇನ್ನಷ್ಟು ಉಲ್ಬಣಗೊಳ್ಳುವುದಕ್ಕಿಂತ ಮುಂಚೆ ಕೆಲವು ಗ್ರಾಮಸ್ಥರು ಮಧ್ಯೆ ಪ್ರವೇಶಿಸಿ ಎರಡು ಗಂಟೆಗಳ ಕಾಲ ಪಂಚಾಯಿತಿ ನಡೆಸಿದರು. ಇನ್ನು ವರ ತನ್ನ ತಪ್ಪಿನ ಅರಿವಾಗಿ ಎಲ್ಲರ ಮುಂದೆ ಕ್ಷಮೆಯಾಚಿಸಿದ್ದಾನೆ. ಇನ್ನು ಮುಂದೆ ಈ ರೀತಿಯಾಗಿ ವರ್ತಿಸುವುದಿಲ್ಲ ಭರವಸೆ ನೀಡಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net