ಗೃಹಲಕ್ಷ್ಮೀ ಯೋಜನೆಗೆ ಚಾಲನೆ; ನೇರ ಪ್ರಸಾರದ ವೀಕ್ಷಣೆಗೆ ನಗರಸಭೆಯಿಂದ ವ್ಯವಸ್ಥೆ

Nagarasabhe
Published on

ರಾಣೆಬೆನ್ನೂರ: ಮೈಸೂರಿನಲ್ಲಿ ಆ. 30ರಂದು ಬೆಳಗ್ಗೆ 11.30ಕ್ಕೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರು ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡಲಿರುವ ನೇರ ಪ್ರಸಾರದ ವೀಕ್ಷಣೆಗೆ ಸ್ಥಳೀಯ ನಗರಸಭೆ ವತಿಯಿಂದ ನಗರದ ವಿವಿಧ ಸ್ಥಳಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.
ಎಪಿಎಂಸಿ ಸಮುದಾಯ ಭವನದಲ್ಲಿ ವಾರ್ಡ್‌ಗಳ ಸಂಖ್ಯೆ 1,2,3,4,8,9,10,11,20, ವಿನಾಯಕ ನಗರ ಬಳ್ಳಾರಿ ಕಲ್ಯಾಣ ಮಂಟಪದಲ್ಲಿ 5.6.7,22,23,24,25,26, ಸಿದ್ಧೇಶ್ವರ ನಗರದ ಸಿದ್ಧೇಶ್ವರ ಕಲ್ಯಾಣ ಮಂಟಪದಲ್ಲಿ 15,16,29,30,31, ಹಳೇ ಅಂತರವಳ್ಳಿ ರಸ್ತೆಯ ಎಂ.ಎಂ. ಫಂಕ್ಷನ್ ಹಾಲ್‌ನಲ್ಲಿ 27.28,32,33,34,35 ಹಾಗೂ ನೆಹರು ಮಾರ್ಕೇಟ್ ಕಲ್ಯಾಣ ಮಂಟಪದಲ್ಲಿ 12,13,14,17,18,19,21 ವಾರ್ಡ್‌ಗಳ ಫಲಾನುಭವಿಗಳಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ನಗರಸಭೆ ಆಯುಕ್ತ ನಿಂಗಪ್ಪ ಕುಮ್ಮಣ್ಣನವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net