'ಗೃಹಲಕ್ಷ್ಮೀ'ಗೆ ನೆಟ್‌ವರ್ಕ್ ಕಾಟ

20 HHR 05 (5)
ಮೈದೊಳಲಿನ ಗ್ರಾಪಂನಲ್ಲಿ ಗೃಹಲಕ್ಷ್ಮೀಗೆ ಅರ್ಜಿ ಸಲ್ಲಿಸಿದ ಫಲಾನುಭವಿಗೆ ಯೋಜನೆಯ ಆದೇಶ ಪ್ರತಿ ನೀಡಲಾಯಿತು. ಸೋಮಶೇಖರ್, ಕೆ.ಎಚ್.ಪರಮೇಶ್ವರ ರಾವ್, ಮಂಜುನಾಥ್, ನಂದಿನಿ ಇತರರಿದ್ದರು.
Published on

ಹೊಳೆಹೊನ್ನೂರು: ಗ್ರಾಮಾಂತರ ಭಾಗದಲ್ಲಿ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಗುರುವಾರ ಬೆಳಗ್ಗೆಯಿಂದ ಸಂಜೆವರೆಗೂ ಮಹಿಳೆಯರು ಕಾದು ಕಾದು ಸುಸ್ತಾದರು.

ಮೊಬೈಲ್‌ಗೆ ಸಂದೇಶ ಬಂದ ಮಹಿಳೆಯರು ನಿಗದಿಯಾದ ಗ್ರಾಪಂಗಳ ಬಾಪೂಜಿ ಸೇವಾ ಕೇಂದ್ರ ಹಾಗೂ ಗ್ರಾಮ ಒನ್ ಕೇಂದ್ರಗಳಿಗೆ ಭೇಟಿ ನೀಡಿದರು. ಮಧ್ಯಾಹ್ನ ಎರಡು ಗಂಟೆಯಾದರೂ ಕೆಲ ಗ್ರಾಪಂಗಳಲ್ಲಿ ಒಂದೂ ಅರ್ಜಿಯನ್ನು ಸಲ್ಲಿಸಲು ಸಾಧ್ಯವಾಗಲಿಲ್ಲ. ಆಗೊಮ್ಮೆ, ಈಗೊಮ್ಮೆ ತೆರೆದುಕೊಳ್ಳುತ್ತಿದ್ದ ಅಪ್ಲಿಕೇಷನ್‌ನಲ್ಲಿ ಒಟಿಪಿ ಪಡೆಯುವ ಹೊತ್ತಿಗೆ ಸವರ್ರ್ ಹೋಗುತ್ತಿತ್ತು. ಒಟಿಪಿ ಸಲ್ಲಿಸುವ ನಿಗದಿತ ಸಮಯ ಮುಗಿದು ಹೋಗುತಿತ್ತು. ಹೀಗಾಗಿ ಹಲವೆಡೆ ಒಂದೂ ಅರ್ಜಿ ಸಲ್ಲಿಸಲು ಆಗಲಿಲ್ಲ. ಕೆಲವು ಗ್ರಾಪಂಗಳಲ್ಲಿ 5ರಿಂದ 6 ಅರ್ಜಿ ಸಲ್ಲಿಕೆ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net