ತನ್ನ ಕೂದಲಿನ ಮೂಲಕ ಗಿನ್ನೆಸ್​ ದಾಖಲೆ ಬರೆದ 15ರ ಬಾಲಕ!

Untitled design - 2023-09-20T191346.810
Published on

ಗ್ರೇಟರ್ ನೋಯ್ಡಾ: ಅತೀ ಉದ್ದನೆಯ ಕೂದಲನ್ನು ಬಿಡುವ ಮುಖೇನ ಗಿನ್ನೆಸ್ ವಿಶ್ವ ದಾಖಲೆಯನ್ನು ಬರೆದ 15ರ ಬಾಲಕನಿಗೆ ಇದೀಗ ಸಾಮಾಜಿಕ ಜಾಲತಾಣ ಸೇರಿದಂತೆ ಅನೇಕರಿಂದ ವ್ಯಾಪಕ ಮೆಚ್ಚುಗೆ ಹರಿದುಬಂದಿದೆ.

ಉತ್ತರಪ್ರದೇಶದ ಗ್ರೇಟರ್ ನೋಯ್ಡಾದ ನಿವಾಸಿ 15 ವರ್ಷದ ಸಿದಕ್‌ದೀಪ್ ಸಿಂಗ್ ಚಾಹಲ್, ಅತಿ ಉದ್ದವಾದ ಕೂದಲನ್ನು ಹೊಂದುವ ಮುಖೇನ ಈಗ ಗಿನ್ನೆಸ್ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾನೆ. ದಾಖಲೆ ಬರೆಯುವ ನಿಟ್ಟಿನಲ್ಲಿ ಕೂದಲನ್ನು ಬಿಡದ ಬಾಲಕ, ತನ್ನ ಧಾರ್ಮಿಕ ನಂಬಿಕೆಗಳಿಂದಾಗಿ ಬೆಳೆಸಿದ್ದೇನೆ ಎಂದು ಹೇಳಿದ್ದಾನೆ.

ಬರೋಬ್ಬರಿ 146 ಸೆ.ಮೀ.ಗಳಷ್ಟು ಅಂದರೆ 4 ಅಡಿ ಮತ್ತು 9.5 ಇಂಚುಗಳ ಉದ್ದ ಕೂದಲನ್ನು ಬೆಳೆಸಿದ್ದಾರೆ. ಈ ಕುರಿತು ಮಾತನಾಡಿರುವ ಚಹಾಲ್​,

"ಕೂದಲು ಒಣಗಿಸುವಾಗ ಗೆಳೆಯರು ನನ್ನನ್ನು ಹುಡುಗಿ ಎಂದು ಚುಡಾಯಿಸುತ್ತಿದ್ದರು. ಆದ್ರೆ, ಅದನ್ನು ಎಂದಿಗೂ ನಾನು ನೆಗೆಟಿವ್​ ಆಗಿ ತೆಗೆದುಕೊಂಡಿಲ್ಲ. ಬದಲಿಗೆ ಅದನ್ನೇ ಪ್ರೇರಣೆಯಾಗಿ ತೆಗೆದುಕೊಂಡೆ. ಇಂದು ನನ್ನ ಹಲವಾರು ಸ್ನೇಹಿತರು ಇದಕ್ಕೆ ವಿಶೇಷವಾಗಿ ಅಭಿನಂದಿಸುತ್ತಾರೆ" ಎಂದು ಹೇಳಿದರು.

"ನಾನು ಸಿಖ್ ಧರ್ಮವನ್ನು ಅನುಸರಿಸುತ್ತೇನೆ. ನಮ್ಮ ಕೂದಲನ್ನು ಕತ್ತರಿಸುವುದನ್ನು ನಾವು ನಿಷೇಧಿಸಿದ್ದೇವೆ. ಕೂದಲನ್ನು ಈ ಉದ್ದಕ್ಕೆ ಪಡೆಯಲು ನಾನು ಸಾಕಷ್ಟು ಕಾಳಜಿಯನ್ನು ತೆಗೆದುಕೊಳ್ಳಬೇಕಾಗಿತ್ತು. ಇದಕ್ಕೆ ನನ್ನ ಕುಟುಂಬ ನೀಡಿದ ಸಂಪೂರ್ಣ ಬೆಂಬಲವೇ ಕಾರಣ" ಎಂದು ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net