

ಶಿವಮೊಗ್ಗ: ರಾಜ್ಯದ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಸಹಯೋಗದಲ್ಲಿ ಗಾರ್ನಿಯರ್ ಹೇರ್ ಕಲರ್ ಕಂಪನಿಯಿಂದ ಗಾರ್ನಿಯರ್ ಪ್ರಚಾರದ ಕ್ಯಾಂಪೇನ್‌ಗೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ತಮಿಳು ಸಮುದಾಯ ಭವನದಲ್ಲಿ ಸತತ ಎರಡನೇ ದಿನವೂ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಯಿತು.
ಎರಡನೇ ದಿನ ಮಂಗಳವಾರ 75ಕ್ಕೂ ಹೆಚ್ಚು ಮಂದಿ ಉಚಿತ ಕ್ಯಾಂಪೇನ್‌ನ ಪ್ರಯೋಜನ ಪಡೆದರು. ಏಕಕಾಲದಲ್ಲಿ ಮೂರು ಮಂದಿಗೆ ಮಾತ್ರ ಹೇರ್ ಕಲರಿಂಗ್ ಮಾಡುವ ಅವಕಾಶವಿದ್ದು ವಿವಿಧ ಮಹಿಳಾ ಸಂಘಗಳ ಪದಾಧಿಕಾರಿಗಳು, ಸದಸ್ಯರು ಗುಂಪು ಗುಂಪಾಗಿ ಬಂದು ಹೇರ್ ಕಲರಿಂಗ್ ಮಾಡಿಸಿಕೊಂಡರು. ಯುವತಿಯರು ತಮ್ಮ ಕೇಶಕ್ಕೆ ವಿಶೇಷ ಬಣ್ಣಗಳ ಮೆರುಗು ಪಡೆದುಕೊಂಡರು.
60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರೂ ತಮ್ಮ ಕೇಶಕ್ಕೆ ಹೊಸ ಸ್ಪರ್ಶ ಪಡೆಯಲು ಮುಂದಾಗಿದ್ದು ವಿಶೇಷವಾಗಿತ್ತು. ಗಾರ್ನಿಯರ್‌ನಿಂದ ಹೇರ್ ಕಲರಿಂಗ್ ಮಾಡಲು ಸ್ಥಳದಲ್ಲಿ ಸೂಕ್ತ ವ್ಯವಸ್ಥೆ ಮಾಡಲಾಗಿತ್ತು. ಮಿಳ್ಳಘಟ್ಟ, ಬುದ್ಧನಗರ, ಟಿಪ್ಪುನಗರ, ಆರ್‌ಎಂಎಲ್‌ನಗರ ಮುಂತಾದ ಬಡಾವಣೆಗಳಿಂದ ನಾಗರಿಕರು ಆಗಮಿಸಿ ಉಚಿತವಾಗಿ ಹೇರ್ ಕಲರಿಂಗ್ ಮಾಡಿಸಿಕೊಂಡರು. ಜು.12ರವರೆಗೂ ನಡೆಯುವ ಉಚಿತ ಕ್ಯಾಂಪೇನ್‌ನ ಪ್ರಯೋಜನವನ್ನು ಆಸಕ್ತರು ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ (ಮೊ.8884431959 ಅಥವಾ 8884432442) ಸಂಪರ್ಕಿಸಬಹುದು.