ಶ್ರೇಷ್ಠ ಸಂತಾನ

pravadi vvani
Published on
ಧರ್ಮ ನಿಷ್ಠರಾದ ಅಬೂ ಹುರೈರಾ(ರ) ಅವರು ಪ್ರವಾದಿ ಮುಹಮ್ಮದ್(ಸ) ಅವರು ಹೇಳಿದ್ದನ್ನು ಹೀಗೆ ಉಲ್ಲೇಖಿಸಿದ್ದಾರೆ: ಮಾನವನು ಮರಣ ಹೊಂದುವಾಗ ಆತನ ಕರ್ಮಗಳ ಅವಧಿ ಮುಗಿಯುತ್ತದೆ. ಆದರೆ ಮೂರು ಕರ್ಮಗಳ ಪುಣ್ಯ ಅವನ ನಿಧನಾನಂತರವೂ ಆತನಿಗೆ ಲಭಿಸುತ್ತಲೇ ಇರುತ್ತದೆ. ಮೊದಲನೆಯದು ಆತನು ಮಾಡಿದ ಶಾಶ್ವತ ಸ್ವರೂಪದ ದಾನ ಕಾರ್ಯಗಳು, ಎರಡನೆಯದು ಆತನು ಜನತೆಗೆ ಬಿಟ್ಟು ಹೋದ ಪ್ರಯೋಜನಕರವಾದ ವಿದ್ಯೆ, ಮೂರನೆಯದು ಆತನ ತರಬೇತಿಯ ಪರಿಣಾಮವಾಗಿ ಸಜ್ಜನರಾಗಿ ಬೆಳೆದು, ತಮ್ಮ ಹೆತ್ತವರಿಗಾಗಿ ಪ್ರಾರ್ಥಿಸುವ ಪುತ್ರ, ಪುತ್ರಿಯರು. ಈ ಜಗತ್ತಿನಲ್ಲಿ ನಡೆಯುವ ಶಾಶ್ವತ ಸ್ವರೂಪದ ದಾನವೆಂದರೆ ಜನತೆಗೆ, ಸಮಾಜಕ್ಕೆ ಬಹುದೀರ್ಘ ಸಮಯದವರೆಗೆ ಪ್ರಯೋಜನ ನೀಡುತ್ತಿರುವಂತಹ ದಾನ. ನಿದರ್ಶನಕ್ಕೆ ನೀರು ಹರಿಯುವಂತಹ ಕಾಲುವೆ ನಿರ್ವಣ, ಗ್ರಂಥಾಲಯದ ನಿರ್ವಣ, ಪ್ರಯಾಣಿಕರಿಗಾಗಿ, ಪ್ರವಾಸಿಗರಿಗಾಗಿ ತಂಗುದಾಣ ನಿರ್ವಣ, ಜನರಿಗೆ ನೆರಳು ನೀಡುವ ಮರಗಳನ್ನು ನೆಡುವುದು, ದೇವಸ್ಥಾನ, ಮಸೀದಿ, ಶಾಲೆ, ಮದರಸಾಗಳ ನಿರ್ವಣ, ಅವುಗಳಿಗೆ ಧಾರ್ವಿುಕ ಗ್ರಂಥಗಳನ್ನು, ಇತಿಹಾಸ, ವಿಜ್ಞಾನ, ಇತರ ಗ್ರಂಥಗಳನ್ನು ದಾನ ಮಾಡುವುದು, ವಿದ್ಯಾರ್ಥಿ ನಿಲಯಗಳ ನಿರ್ಮಾಣ ಮುಂತಾದ ಮೌಲಿಕವೂ, ಜನಹಿತವೂ, ಪ್ರಯೋಜನಕರವೂ ಆದ ಕಾರ್ಯಗಳನ್ನು ಕೈಗೊಳ್ಳುವುದು.

ಇವನ್ನು ದಾನ ಮಾಡಿದ ವ್ಯಕ್ತಿ ಮರಣ ಹೊಂದಿದ ನಂತರವೂ ಈ ವಸ್ತುಗಳಿಂದ ಜನತೆಗೆ ಉಪಕಾರ ಆಗುತ್ತಿರುವವರೆಗೆ ಆತನಿಗೆ ಅದರ ಪುಣ್ಯವು ಲಭಿಸುತ್ತಲೇ ಇರುವುದು. ಇದೇ ರೀತಿ ಯಾರಿಗಾದರೂ ಧರ್ಮದ ವಿದ್ಯೆ ಕಲಿಸಿ, ಆತನನ್ನು ವಿದ್ವಾಂಸನನ್ನಾಗಿ ಮಾಡಿದರೆ, ಇಲ್ಲವೇ ಧರ್ಮದ ಜ್ಞಾನ ನೀಡುವಂತಹ ಗ್ರಂಥವನ್ನು ರಚಿಸಿದರೆ, ಅದರ ಪುಣ್ಯವು ಮೃತ ಜ್ಞಾನಿಗೆ ಸಿಗುತ್ತಿರುವುದು, ಹಾಗೆಯೇ ಒಬ್ಬ ವ್ಯಕ್ತಿಯ ಪ್ರಯತ್ನಗಳಿಂದಾಗಿ ಆತನ ಮಕ್ಕಳು ಧರ್ಮನಿಷ್ಠರೂ, ಸತ್ಯಸಂದರೂ ಆದರೆ ಅವರು ಸತ್ಕರ್ಮಗಳನ್ನು ಮಾಡುತ್ತಲಿರುವ ತನಕ ಆ ತಂದೆಗೆ ಪುಣ್ಯ ಸಿಗುತ್ತಿರುವುದು, ಇಲ್ಲವಾದರೆ ಮಕ್ಕಳು ನಾಳೆ ಪರಲೋಕದಲ್ಲಿ ದೇವರ ಮುಂದೆ ನಮ್ಮ ದುಷ್ಟಬುದ್ಧಿ, ನೀಚ ಭಾವನೆಗಳ ನಿರ್ವಣಕ್ಕೆ ನಮ್ಮ ತಂದೆಯೇ ಕಾರಣ ಎಂದೂ ವಾದಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net