

ರಾಯಬಾಗ: ರಾಜ್ಯ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಅಭಿವದ್ಧಿಗಾಗಿ ಅನುದಾನವೇ ನೀಡುತ್ತಿಲ್ಲ. ಇದರಿಂದ ಅಭಿವದ್ಧಿ ಕಾಮಗಾರಿ ಕೆಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಶಾಸಕ ಡಿ.ಎಂ.ಐಹೊಳೆ ಆರೋಪಿಸಿದರು.
ತಾಲೂಕಿನ ಭೆಂಡವಾಡ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯಡಿ 1 ಕೋಟಿ ರೂ. ವೆಚ್ಚದ ಭೆಂಡವಾಡ-ಚಿಕ್ಕೋಡಿ ರೆಲ್ವೆ ಸ್ಟೇಷನ್ ರಸ್ತೆ ಹಾಗೂ ಮಂಟೂರ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆಯಡಿಯ 20 ಲಕ್ಷ ರೂ. ಅನುದಾನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಈಚೆಗೆ ಚಾಲನೆ ನೀಡಿ ಮಾತನಾಡಿದರು. ರಾಯಬಾಗ ಕ್ಷೇತ್ರದ ಅಭಿವದ್ಧಿಗೆ ಬದ್ಧವಾಗಿದ್ದೇನೆ. ಎಲ್ಲ ಗ್ರಾಮಗಳಿಗೆ ಮೂಲಸೌಲಭ್ಯ ಕಲ್ಪಿಸಲಾಗುವುದು ಎಂದು ಭರವಸೆ ನೀದರು.
ಎಇಇ ಆರ್.ಬಿ.ಮನವಡ್ಡರ, ರಾಜೇಶ ಡಂಗ, ಶೋಭಾ ಮೇಗಾಡೆ, ಸುರೇಶ ಚೌಗುಲೆ, ಅಪ್ಪು ಬಾನೆ, ನಿಂಗಪ್ಪ ಪಕಾಂಡಿ, ಸಂಗಪ್ಪ ಬೆನ್ನಾಳೆ, ರೇವಣು ಧುಪದಾಳೆ, ಡಾ.ಅಪ್ಪಯ್ಯ ನಾಯಿಕ, ಮಹಾದೇವ ಸಾರಾಪುರೆ, ಉಮೇಶ ಪೂಜೇರಿ, ಅಪ್ಪಾಸಾಬ ದೇಸಾಯಿ, ರಾವಸಾಬ ದೇಸಾಯಿ, ಭೀಮು ಹಳವರ, ಉದಯ ಉಪ್ಪಾರ, ಮುತ್ತೆಪ್ಪ ನಾಯಿಕ, ಗುರುನಾಥ ಹಂಜಿ, ರಾವಸಾಬ ಮೇಗಾಡೆ, ಶಿವಾನಂದ ಉಪ್ಪಾರ ಇತರರಿದ್ದರು.