ಟಿಕ್​ಟಾಕ್ ಸ್ಟಾರ್ ಆದ ಹಿರಿಯಜ್ಜ

sudina 1
Published on

ನವದೆಹಲಿ: ಸಾಮಾನ್ಯವಾಗಿ ಎಲ್ಲರಿಗೂ ಪ್ರಸಿದ್ಧಿಯನ್ನು ಪಡೆಯಬೇಕೆಂಬ ಆಸೆ ಇದ್ದೇ ಇರುತ್ತದೆ. ಅದಕ್ಕಾಗಿ ಏನೇನೋ ಕಸರತ್ತು ಮಾಡುವುದೂ ಅಹಜ. ಇದಕ್ಕೆಂದೇ ಸಾಮಾಜಿಕ ಜಾಲತಾಣಗಳಲ್ಲಿ ಟಿಕ್​ಟಾಕ್​ನಂಥ ಅನೇಕ ಆಪ್​ಗಳು ಬಂದಿವೆ. ಟೆಕ್ಸಾಸ್​ನ ಫೋರ್ಟ್​ವರ್ಥ್ ಎಂಬಲ್ಲಿರುವ ಸ್ಟೀಫನ್ ಆಸ್ಟಿನ್ ಎಂಬ 81 ವರ್ಷದ ವೃದ್ಧರು ಈಗ ಟಿಕ್​ಟಾಕ್​ನಲ್ಲಿ ಬಹಳ ಜನಪ್ರಿಯರಾಗಿದ್ದಾರೆ.

ಅವರ ಸುಲಭ ರೀತಿಯ ಅಡುಗೆ ಹಾಗೂ ತಮಾಷೆಯ ವಿಡಿಯೋಗಳು ನೆಟ್ಟಿಗರ ಮನಸ್ಸನ್ನು ಸೆಳೆಯುತ್ತಿವೆ. ಕುಕ್ಕಿಂಗ್ ವಿತ್ ಸ್ಟೀವ್ ಎಂಬ ಅಡಿಬರಹದಲ್ಲಿ ಪ್ಯಾನ್ ಕೇಕ್, ಸ್ಯಾಂಡ್​ವಿಚ್ ಸೇರಿದಂತೆ ಇದೇ ಮಾದರಿಯ ಕೆಲವು ಚಿಕ್ಕ ಚಿಕ್ಕ ತಿಂಡಿತಿನಿಸುಗಳನ್ನು ಮಾಡುವುದು ಹೇಗೆಂಬ ವಿಡಿಯೋಗಳನ್ನು ಅವರು ಟಿಕ್​ಟಾಕ್​ನಲ್ಲಿ ಹಾಕಿದ್ದಾರೆ.

ಬಾಳೆಹಣ್ಣು ತಿನ್ನುತ್ತ ಅಥವಾ ಕಾಫಿ ಕುಡಿಯುತ್ತ ಹಾಸ್ಯಭರಿತ ಮಾತುಗಳನ್ನಾಡುವ ವಿಡಿಯೋಗಳೂ ಬಹಳ ಜನಪ್ರಿಯವಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net