ತಾಯಿ ಇಲ್ಲದ ಮೊಮ್ಮಗನನ್ನು ಸರಪಳಿಯಿಂದ ಕಟ್ಟಿ, ರಕ್ತಬರುವಂತೆ ಥಳಿಸುತ್ತಿದ್ದ ಅಜ್ಜಿ ಬಂಧನ

Boy
Published on

ಲುಧಿಯಾನಾ: ಅಜ್ಜ-ಅಜ್ಜಿಯರು ಮೊಮ್ಮಕ್ಕಳನ್ನು ತುಂಬ ಪ್ರೀತಿಸುತ್ತಾರೆ. ಕಾಳಜಿ ಮಾಡುತ್ತಾರೆ. ಆದರೆ ಇಲ್ಲೊಬ್ಬಳು ಅಜ್ಜಿ ಅದಕ್ಕೆ ತದ್ವಿರುದ್ಧ. ತನ್ನ 8 ವರ್ಷದ ಮೊಮ್ಮಗನಿಗೆ ಕೊಡಬಾರದ ಹಿಂಸೆ ಕೊಟ್ಟಿದ್ದಾರೆ.

ಪಂಜಾಬ್​​ನ ಲೂಧಿಯಾನಾದ ನೀಚಿ ಮಂಗ್ಲಿ ಪ್ರದೇಶದಲ್ಲಿ ಘಟನೆ ನಡೆದಿದೆ. 55 ವರ್ಷದ ಮಹಿಳೆ ಈ ಬಾಲಕನ ತಾಯಿಯ ಅಮ್ಮ. ಮೊಮ್ಮಗ ತುಂಬ ತುಂಟತನ ಮಾಡುತ್ತಾನೆ ಎಂಬ ಕಾರಣಕ್ಕೆ ಅವನನ್ನು ಕಂಬಕ್ಕೆ, ಕಬ್ಬಿಣದ ಸರಪಳಿಯಿಂದ ಕಟ್ಟಿ ಕೋಲಿನಿಂದ ಥಳಿಸಿದ್ದಾರೆ. ಸದ್ಯ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಏನೂ ಮಾಡ್ದೇ 19 ಲಕ್ಷಕ್ಕೂ ಹೆಚ್ಚು ವೀವ್ಸ್​ ಪಡೆದ ಯೂಟ್ಯೂಬರ್: ಈ ವಿಡಿಯೋ ನೋಡ್ಬೇಡಿ, ಶಾಕ್​ ಆಗ್ಬೋದು!

ಈ ಬಾಲಕನ ತಾಯಿ ವಿಚ್ಛೇದಿತಳಾಗಿದ್ದಳು. ಕೆಲವೇ ತಿಂಗಳ ಹಿಂದೆ ಉತ್ತರ ಪ್ರದೇಶದಲ್ಲಿ ಮೃತಪಟ್ಟಿದ್ದರು. ತಾಯಿಯ ಸಾವಿನ ಬಳಿಕ ಈ ಬಾಲಕ ಮತ್ತು ಅವನ ಸೋದರಿ ಇಬ್ಬರೂ ಲುಧಿಯಾನಕ್ಕೆ ಬಂದು ಅಮ್ಮನ ತಾಯಿ ಅಂದರೆ ಅಜ್ಜಿಯೊಂದಿಗೆ ವಾಸವಾಗಿದ್ದರು.

ಆದರೆ ಈ ಬಾಲಕನಿಗೆ ಅಜ್ಜಿ ಸುಮಾರು ಪ್ರತಿದಿನ ಹೊಡೆಯುತ್ತಿದ್ದಳು. ಕಾಲು, ಕೈಗಳನ್ನೆಲ್ಲ ಕಟ್ಟಿ ಹೊಡೆಯುತ್ತಿದ್ದಳು. ಜುಲೈ 28ರಂದು ಬಾಲಕನ ತೋಳು, ಕಾಲುಗಳೆಲ್ಲ ರಕ್ತ ಬರುವಷ್ಟು ಹೊಡೆಯುತ್ತಿದ್ದಳು. ಅದನ್ನು ನೋಡಿದ ಪಕ್ಕದ ಮನೆಯವರೊಬ್ಬರು ಪೊಲೀಸರಿಗೆ ದೂರು ನೀಡಿದ್ದರು.

ಮಹಿಳೆಯನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಬಾಲಕನಿಂದ ತುಂಬ ತೊಂದರೆಯಾಗುತ್ತಿತ್ತು. ಒಮ್ಮೊಮ್ಮೆ ಮನೆ ಬಿಟ್ಟು ಹೋದರೆ ಎಷ್ಟು ದಿನಗಳಾದರೂ ಬರುತ್ತಿರಲಿಲ್ಲ. ಅವನನ್ನು ಹುಡುಕುವುದು ಕಷ್ಟವಾಗುತ್ತಿತ್ತು. ಇದೇ ಕಾರಣಕ್ಕೆ ಹೊಡೆಯುತ್ತಿದ್ದೆ ಎಂದು ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದಾಗಿ ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net