ಪ್ರಭಾಸ್ ಮ್ಯಾರೇಜ್​ ಬಗ್ಗೆ ಕ್ಲಾರಿಟಿ ಕೊಟ್ಟ ದೊಡ್ಡಮ್ಮ: ಡಾರ್ಲಿಂಗ್​ ಮದುವೆ ಯಾವಾಗ? | Prabhas Marriage

photo-2-689afc2f28278
Published on

Prabhas Marriage: ಸೌತ್​ ಇಂಡಸ್ಟ್ರಿಯಲ್ಲಿ ಪ್ರಭಾಸ್ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ನಟ ಪ್ರಭಾಸ್​. ಅವರ ವಯಸ್ಸು 44 ಆಗಿದ್ದರೂ ಮದುವೆಯಾಗಿಲ್ಲ. ಆದರೆ ಪ್ರಭಾಸ್ ಮದುವೆಯನ್ನು ಕಾಣಲು ಅಭಿಮಾನಿಗಳು ಕಾಯುತ್ತಿದ್ದಾರೆ. ಅಲ್ಲದೇ ಪ್ರಭಾಸ್ ಮದುವೆ ಬಗ್ಗೆ ಆಗಾಗ ನಾನಾ ಸುದ್ದಿಗಳು ವೈರಲ್ ಆಗುತ್ತಿರುವುದು ಸಾಮಾನ್ಯವಾಗಿದೆ. ಇದೀಗ ಅವರ ದೊಡ್ಡಮ್ಮ ಕೃಷ್ಣಂ ರಾಜು ಅವರ ಪತ್ನಿ ಶ್ಯಾಮಲಾ ದೇವಿ ಪ್ರಭಾಸ್​ ಮದುವೆ ಬಗ್ಗೆ ಮಾತನಾಡಿದ್ದಾರೆ.

ಕೃಷ್ಣಂ ರಾಜು ಅವರ ಪತ್ನಿ ಶ್ಯಾಮಲಾ ದೇವಿ ಸೋಮವಾರ ಕಾಕಿನಾಡದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಅವರು ದಕ್ಷರಾಮ ದೇವಸ್ಥಾನಕ್ಕೂ ಭೇಟಿ ನೀಡಿದರು. ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, "ಪ್ರಭಾಸ್ ಖಂಡಿತವಾಗಿಯೂ ಮದುವೆಯಾಗುತ್ತಾರೆ. ಶಿವನು ಅವರನ್ನು ಆಶೀರ್ವದಿಸಿದಾಗ, ಅವರು ಮದುವೆಯಾಗುತ್ತಾರೆ" ಎಂದರು.

ಆದಾಗ್ಯೂ, ಅದು ಯಾವಾಗ ಸಂಭವಿಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಅವರು,ಅವರ ಹೆಣ್ಣುಮಕ್ಕಳು ಸಹ ಶೀಘ್ರದಲ್ಲೇ ಮದುವೆಯಾಗುತ್ತಾರೆ ಎಂದು ಎಂದಿದ್ದಾರೆ.

ಶ್ಯಾಮಲಾ ದೇವಿ ಹೇಳಿದಂತೆ ಪ್ರಭಾಸ್ ನಿಜವಾಗಿಯೂ ಮದುವೆಯಾಗುತ್ತಾರೋ ಇಲ್ಲವೋ ಎಂಬುದು ಅನುಮಾನ. ಏಕೆಂದರೆ ಅವರಿಗೆ ಪ್ರಸ್ತುತ 45 ವರ್ಷ. ಅವರ ಬಳಿ ಈಗಾಗಲೇ ರಾಜಾಸಾಬ್, ಫೌಜಿ (ವರ್ಕಿಂಗ್ ಟೈಟಲ್), ಸಲಾರ್ 2, ಕಲ್ಕಿ 2 ನಂತಹ ಲೆಕ್ಕವಿಲ್ಲದಷ್ಟು ಚಿತ್ರಗಳು ಸಾಲಿನಲ್ಲಿವೆ. ಇವುಗಳ ಜೊತೆಗೆ, ಇನ್ನೂ ಕೆಲವು ಯೋಜನೆಗಳ ಬಗ್ಗೆಯೂ ಕೇಳಿಬರುತ್ತಿದೆ. ಇವೆಲ್ಲವೂ ಎಂದಾದರೂ ಪೂರ್ಣಗೊಳ್ಳುತ್ತದೆಯೇ? ಪ್ರಭಾಸ್ ಯಾವಾಗ ಮದುವೆಯಾಗುತ್ತಾರೆ? ಎಂಬ ಕೂತುಹಲ ಇದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net