ಎಣಿಕೆಗೂ ಮುನ್ನವೇ ಅಂಚೆ ಮತಪತ್ರಗಳು ಬಯಲು

Kalaburagi GP Election ballot paper
Published on

ಅರಸೀಕೆರೆ: ಗ್ರಾಮ ಪಂಚಾಯಿತಿ ಚುನಾವಣೆಯ ಕರ್ತವ್ಯದಲ್ಲಿ ಪಾಲ್ಗೊಂಡಿದ್ದ ತಾಲೂಕಿನ ತಳಲುತೊರೆ ಗ್ರಾಮದ ಮೂವರು ಶಿಕ್ಷಕರು ಮತದಾನ ಮಾಡಿರುವ ಅಂಚೆ ಮತಪತ್ರಗಳು ಎಣಿಕೆಗೂ ಮುನ್ನವೇ ಬಯಲಾಗಿವೆ.

ತಾಲೂಕು ಆಡಳಿತ ಗ್ರಾಪಂ ಚುನಾವಣಾ ಕಾರ್ಯಕ್ಕೆ ಈ ಮೂವರೂ ಶಿಕ್ಷಕರನ್ನು ಬಳಸಿಕೊಂಡಿತ್ತು. ಆದ್ದರಿಂದ ಇವರಿಗೆ ಅಂಚೆ ಮತಪತ್ರದ ಮೂಲಕ ಮತದಾನ ಮಾಡಲು ಅವಕಾಶ ಕಲ್ಪಿಸಿತ್ತು. ಅದರಂತೆ, ಮತಗಟ್ಟೆ ಸಂಖ್ಯೆ 273ಕ್ಕೆ ಸಂಬಂಧಿಸಿದಂತೆ ಕ್ರಮ ಸಂಖ್ಯೆ 582, 583 ಹಾಗೂ 584ರಲ್ಲಿ ಗೌಪ್ಯ ಮತದಾನ ಮಾಡಿದ ಮತಪತ್ರವನ್ನು ಫೋಟೊ ತೆಗೆದು ಪಕ್ಷ ಹಾಗೂ ವ್ಯಕ್ತಿನಿಷ್ಠೆ ಪ್ರದರ್ಶಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಇದೀಗ ಮತಪತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಮತಪತ್ರಗಳ ಜೆರಾಕ್ಸ್ ಪ್ರತಿ ಪಡೆದಿರುವ ಮತ್ತೊಬ್ಬ ಅಭ್ಯರ್ಥಿ, ಮತದಾನದ ಗೌಪ್ಯತೆ ಕಾಪಾಡಬೇಕಿದ್ದ ಶಿಕ್ಷಕರ ನಡೆ ಅಕ್ಷಮ್ಯ. ಕೂಡಲೇ ಈ ಮತಗಳನ್ನು ಅಸಿಂಧುಗೊಳಿಸುವ ಜತೆಗೆ, ಚುನಾವಣಾ ವ್ಯವಸ್ಥೆಗೆ ಅಗೌರವ ತೋರಿರುವ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ತಾಲೂಕು ಹಾಗೂ ಜಿಲ್ಲಾಡಳಿತಕ್ಕೆ ದೂರು ನೀಡಿದ್ದಾರೆ.

ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net