

ಹಾಸನ: ಜಿದ್ದಾಜಿದ್ದಿನ ಅಖಾಡವಾಗಿರುವ ಗ್ರಾಪಂ ಚುನಾವಣೆಯಲ್ಲೂ ಹಣ-ಮದ್ಯದ ಜತೆಗೆ ಕಿಡ್ನ್ಯಾಪ್, ಬೆದರಿಕೆ, ಆಪರೇಷನ್ ಭಾರಿ ಸದ್ದು ಮಾಡುತ್ತಿವೆ. ಹಳ್ಳಿ ರಾಜಕಾರಣದಲ್ಲಿ ಹಲವೆಡೆ ಮಾರಾಮಾರಿ ನಡೆದು ಸಾವು-ನೋವು ಕೂಡ ಸಂಭವಿಸಿದೆ. ಇದೀಗ ಅಧ್ಯಕ್ಷೆ ಸ್ಥಾನಕ್ಕೆ ಸ್ಫರ್ಧಿಸಬೇಕಿದ್ದ ಮಹಿಳಾ ಅಭ್ಯರ್ಥಿ ಕಾಣೆಯಾಗಿದ್ದು, ಕಿಡ್ನ್ಯಾಪ್ ಮಾಡಿದ್ದಾರೆ ಎಂದು ಆಕೆಯ ಮಗ ದೂರು ನೀಡಿದ್ದಾರೆ.
ಇಂತಹ ಘಟನೆ ಹಾಸನ ಜಿಲ್ಲೆಯಲ್ಲಿ ಸಂಭವಿಸಿದ್ದು, ತನ್ನ ತಾಯಿ ಭಾಗ್ಯಮ್ಮನನ್ನು ಅಪಹರಣ ಮಾಡಿದ್ದಾರೆ ಎಂದು ಮಗ ಜಯರಾಂ ಶಾಂತಿಗ್ರಾಮ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇದನ್ನೂ ಓದಿರಿ ಸರ್ಕಾರದ ವಿರುದ್ಧ ಸಿಡಿದೆದ್ದ ಧ್ರುವ ಸರ್ಜಾ! ನಟನ ಆ ಪ್ರಶ್ನೆಗೆ ಸಿಎಂ ಉತ್ತರಿಸುವರೇ?
ಮಡೆನೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಿಗದಿಯಾಗಿತ್ತು. ಕಾರೇಕೆರೆ ಕ್ಷೇತ್ರದಿಂದ ಜಯಗಳಿಸಿದ್ದ ಭಾಗ್ಯಮ್ಮ, ಅಧ್ಯಕ್ಷೆ ಸ್ಥಾನಕ್ಕೆ ಸ್ಪರ್ಧಿಸಲು ಸಜ್ಜಾಗಿದ್ದರು. ಆದರೆ. ಜ.28ರಂದೇ ಭಾಗ್ಯಮ್ಮ ನಾಪತ್ತೆಯಾಗಿದ್ದಾರೆ. ಚುನಾವಣೆಗೆ ಸ್ಪರ್ಧಿಸದಂತೆ ತಡೆಯಲು ಮಡೆನೂರು ಗ್ರಾಮದ ವೆಂಕಟೇಶ, ಹಿರಿಯಣ್ಣಗೌಡ, ಸುರೇಂದ್ರ ಎಂಬುವವರು ನನ್ನ ತಾಯಿಯನ್ನು ಕಿಡ್ನ್ಯಾಪ್ ಮಾಡಿದ್ದಾರೆ ಎಂದು ಮಗ ಜಯರಾಂ ಆರೋಪಿಸಿದ್ದಾರೆ.