ದೆಹಲಿಯ ಮೆಟ್ರೋ ರೈಲುಗಳಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ಗೆ ಬೆದರಿಕೆ ಬರಹ: ಎಎಪಿ ಆರೋಪ

delhi cm
Published on

ನವದೆಹಲಿ: ದೆಹಲಿಯ ಮೆಟ್ರೋ ರೈಲುಗಳಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಬೆದರಿಕೆ ಹಾಕುವ ಬರೆಯಲಾಗಿದೆ. ಈ ಘಟನೆಯ ಹಿಂದೆ ಬಿಜೆಪಿ ಕೈವಾಡವಿದೆ ಎಂದು ಆಮ್ ಆದ್ಮಿ ಪಕ್ಷ ಸೋಮವಾರ ಆರೋಪಿಸಿದೆ.

ಬಿಜೆಪಿಯು ದೆಹಲಿಯಲ್ಲಿ ಎಲ್ಲಾ ಏಳು ಸ್ಥಾನಗಳನ್ನು ಕಳೆದುಕೊಳ್ಳಲಿರುವ ಸಂಗತಿಯಿಂದ ಗಲಿಬಿಲಿಗೊಂಡಿದೆ, ಹಾಗಾಗಿಯೇ ಅದು" ಸಿಎಂ ಕೇಜ್ರಿವಾಲ್​ ಅವರನ್ನು ಗುರಿಯಾಗಿಸಿಕೊಂಡು ಇಂತಹ ವಿಭಿನ್ನ ಷಡ್ಯಂತ್ರಗಳನ್ನು ಹೆಣೆಯುತ್ತಿದೆ ಎಂದು ಮೂಲಕ ಕೇಜ್ರಿವಾಲ್ ಅವರನ್ನು ಗುರಿಯಾಗಿಸುತ್ತಿದೆ ಎಎಪಿ ನಾಯಕ ಅತಿಶಿ ಅವರು ಆರೋಪ ಮಾಡಿದರು.

ದೆಹಲಿಯ ರಾಜೀವ್ ಚೌಕ್, ಪಟೇಲ್ ಚೌಕ್ ಮತ್ತು ಪಟೇಲ್ ನಗರ ಎಂಬ ಮೂರು ಮೆಟ್ರೋ ನಿಲ್ದಾಣಗಳ ಗೋಡೆಗಳ ಮೇಲೆ ವ್ಯಕ್ತಿಯೊಬ್ಬ ಗೀಚುಬರಹ ಬರೆದು ಅರವಿಂದ್​ ಕೇಜ್ರಿವಾಲ್‌ಗೆ ಬೆದರಿಕೆ ಹಾಕಿದ್ದಾನೆ ಎಂದು ಅತಿಶಿ ದೂರಿದ್ದಾರೆ.

"ಅವರು ಮಾರ್ಚ್ 21 ರಂದು ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿದರು. ನಂತರ ಅವರನ್ನು ತಿಹಾರ್ ಜೈಲಿನಲ್ಲಿ ಇರಿಸಿ, ಅವರಿಗೆ 15 ದಿನಗಳವರೆಗೆ ಇನ್ಸುಲಿನ್​ ನೀಡುವುದನ್ನು ನಿಲ್ಲಿಸಿದರು. ಆಗ ನಾವು ನ್ಯಾಯಾಲಯವನ್ನು ಸಂಪರ್ಕಿಸಬೇಕಾಯಿತು. ಕೇಜ್ರಿವಾಲ್ ಅವರು ಜೈಲಿನಿಂದ ಹೊರ ಬಂದ ನಂತರ, ಅವರನ್ನು ಗುರಿಯಾಗಿಸಲು ರಾಜ್ಯಸಭೆ ಸದಸ್ಯೆ ಸ್ವಾತಿ ಮಲಿವಾಲ್ ಅವರನ್ನು ಬಳಸಿಕೊಂಡರು. ಮಲಿವಾಲ್ ಮಾಡಿದ ಆರೋಪಗಳು ಸುಳ್ಳೆಂದು ಸಾಬೀತುಪಡಿಸುವ ವಿಡಿಯೋಗಳನ್ನು ಬಹಿರಂಗಪಡಿಸಿದ ನಂತರ ಅವರ ಈ ಷಡ್ಯಂತ್ರವು ಫಲ ಕೊಡಲಿಲ್ಲ ಎಂದು ಅತಿಶಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಗೀಚುಬರಹದ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ. ಈ ನಿಲ್ದಾಣಗಳು ಸಿಸಿಟಿವಿ ಕ್ಯಾಮೆರಾ ನಿಗಾದಲ್ಲಿವೆ. ದಿನದ 24 ಗಂಟೆಗಳ ಕಾಲ ಮೆಟ್ರೋ ನಿಲ್ದಾಣಗಳಲ್ಲಿ ಭಾರೀ ಭದ್ರತಾ ಸಿಬ್ಬಂದಿಯ ನಿಗಾಇರುತ್ತದೆ. ಆದರು ಪೊಲೀಸರು ಅದರ ಬಗ್ಗೆ ಏಕೆ ಕ್ರಮ ಕೈಗೊಂಡಿಲ್ಲ. ಸೈಬರ್ ಸೆಲ್ ಎಲ್ಲಿದೆ? ಇದೆಲ್ಲವೂ ಬಿಜೆಪಿಯ ಸಂಚಿನಿಂದ ನಡೆಯುತ್ತಿದೆ ಎನ್ನುವುದನ್ನು ತಿಳಿದು ಬರುತ್ತಿದೆ ಎಂದು ಆರೋಪ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net