

ಬನ್ನೂರು: ಈ ಬಾರಿ ನಾಡಿಗೆ ಒಳಿತನ್ನು ಉಂಟು ಮಾಡುವ ನಿಟ್ಟಿನಲ್ಲಿ ಗೌರಿ ದೇವಿಯು ಕರಿಮಣಿ ಬಿಚ್ಚೋಲೆ ಅರಿಶಿಣದೊಂದಿಗೆ ಬಂದಿರುವುದು ಊರಿನ ಜನರಲ್ಲಿ ಸಂತಸವನ್ನುಂಟು ಮಾಡಿದೆ ಎಂದು ಆನಂದವಲ್ಲಿ ಹನುಮಂತೇಶ್ವರ ದೇವಾಯದ ಪ್ರಧಾನ ಅರ್ಚಕ ಮಂಜುನಾಥ್ ತಿಳಿಸಿದರು.
ಪಟ್ಟಣದ ಕಾವೇರಿ ನದಿಯಲ್ಲಿ ಗೌರಮ್ಮ ದೇವಿಯನ್ನು ಊರಿಗೆ ಆಹ್ವಾನಿಸುವ ನಿಟ್ಟಿನಲ್ಲಿ ಸಲ್ಲಿಸುವ ಪೂಜೆಯ ವೇಳೆ ಗೌರಮ್ಮ ದೇವಿ ಅರಿಶಿಣ, ಕರಿಮಣಿ, ಬಿಚ್ಚೋಲೆಯ ಮೂಲಕ ಬಂದಿರುವುದು ಶುಭ ಸಂಕೇತವಾಗಿದೆ ಎಂದು ತಿಳಿಸಿದರು. ನಂತರ ಶಾಸ್ತ್ರೋಕ್ತವಾಗಿ ಗೌರಮ್ಮ ದೇವಿಯ ಮೂರ್ತಿಗೆ ಪೂಜೆಯನ್ನು ಸಲ್ಲಿಸಿ ತೊಟ್ಟಿಲ ಮೂಲಕ ಊರಿಗೆ ತರಲಾಯಿತು. ಈ ಸಂದರ್ಭದಲ್ಲಿ ಗ್ರಾಮದ ಮಹಿಳೆಯರು ಗೌರಿ ದೇವಿಗೆ ಅಲ್ಲಲ್ಲಿ ಪೂಜೆ ಸಲ್ಲಿಸಿದರು.
ಸಮಾಜ ಸೇವಕ ವೈ.ಎಸ್.ರಾಮಸ್ವಾಮಿ, ಅರವಿಂದ್, ನಾಡಗೌಡ ಪಾರ್ಥಸಾರಥಿ, ಬಾಲ್‌ರಾಜ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.