ಸರ್ಕಾರಿ ನೌಕರರಿಗೆ ಹಬ್ಬಕ್ಕೆ 4 ಸಾವಿರ ರೂ. ಬೋನಸ್​ ಜತೆಗೆ ವಿಶೇಷ ಭತ್ಯೆ!

Money
Published on

ತಿರುವನಂತಪುರಂ: ಸರ್ಕಾರಿ ನೌಕರರಿಗೆ ಕೇರಳ ಸರ್ಕಾರ ಬಂಪರ್​ ಉಡುಗೊರೆ ಘೋಷಿಸಿದೆ. ಓಣಂ ಹಬ್ಬಕ್ಕೆ 4 ಸಾವಿರ ರೂ. ಬೋನಸ್​ ಮತ್ತು 2750 ರೂ.ವರೆಗೆ ಹಬ್ಬದ ಭತ್ಯೆ ನೀಡಲು ನಿರ್ಧರಿಸಿದೆ.

ಇಷ್ಟೇ ಅಲ್ಲದೆ, ಮುಂಗಡವಾಗಿ 15 ಸಾವಿರ ರೂ. ಹಣವನ್ನು ಸಹ ಸರ್ಕಾರ ನೀಡಲಿದೆ. 27,360 ರೂ.ವರೆಗಿನ ಸಂಬಳ ಪಡೆಯುವ ನೌಕರರಿಗೆ 4000 ಬೋನಸ್​ ಸಿಗಲಿದೆ. 1000 ದಿಂದ 2750ರವರೆಗೆ ಹಬ್ಬದ ಭತ್ಯೆ ದೊರೆಯಲಿದೆ.

ಇನ್ನು ಎಲ್ಲ ನೌಕರರಿಗೆ 15 ಸಾವಿರ ಮುಂಗಡ ಹಣ ದೊರೆಯಲಿದ್ದು, ಅಕ್ಟೋಬರ್​ನಿಂದ ಆರಂಭವಾಗುವಂತೆ 5 ಕಂತುಗಳಲ್ಲಿ ಮುಂಗಡ ಹಣವನ್ನು ಖಾತೆಯಿಂದ ಕಡಿದುಕೊಳ್ಳಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net