ಬಡವರ ಮಕ್ಕಳ ಉನ್ನತ ಶಿಕ್ಷಣಕ್ಕೆ ಸರ್ಕಾರದ ಬಳಿ ಹಣವಿಲ್ಲ: ಆರ್.ಅಶೋಕ್ ಆಕ್ಷೇಪ | Appeasment politics in education not correct

r ashoka
Published on

ಬೆಂಗಳೂರು: ಮೂಲ ಸವಲತ್ತುಗಳ ಕೊರತೆ, ಅಗತ್ಯ ವ್ಯವಸ್ಥೆಗೆ ಬೇಕಾದ ಹಣವಿಲ್ಲವೆಂದು ಒಂಭತ್ತು ಹೊಸ ವಿಶ್ವ ವಿದ್ಯಾಲಯಗಳನ್ನು ಮುಚ್ಚಲು ರಾಜ್ಯ ಸರ್ಕಾರ ಮುಂದಾಗಿ, ಮುಸ್ಲಿಮರ ಶಿಕ್ಷಣಕ್ಕೆ ಅತ್ಯುತ್ಸಾಹ ತೋರಿಸುತ್ತಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಕ್ಷೇಪಿಸಿದ್ದಾರೆ.

ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಈ ಕುರಿತು ಸಂದೇಶ ಹಂಚಿಕೊಂಡಿರುವ ಅವರು, ಮುಸ್ಲಿಂ ಮಕ್ಕಳ ಶಿಕ್ಷಣಕ್ಕೆ ಅನುದಾನ ನೀಡಿ, ಅದಕ್ಕೆ ಯಾವುದೇ ಅಭ್ಯಂತರವಿಲ್ಲ. ಆದರೆ ಬಡವರು, ಗ್ರಾಮೀಣ ಪ್ರದೇಶದ ಮಕ್ಕಳ ಉನ್ನತ ಶಿಕ್ಷಣಕ್ಕೆ ಅನುದಾನ ನೀಡಲು ಹಿಂಜರಿಕೆ ಸರಿಯಲ್ಲ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.

ಒಂಭತ್ತು ವಿಶ್ವ ವಿದ್ಯಾಲಯಗಳಿಗೆ 342 ಕೋಟಿ ರೂ. ಕೊಡಲು ಹಣವಿಲ್ಲವೆಂದು ಬಡ ಮಕ್ಕಳು ವ್ಯಾಸಂಗ ಮಾಡುತ್ತಿರುವ ವಿವಿಗಳನ್ನು ಮುಚ್ಚುತ್ತೇವೆ ಎಂದು ಹಠಕ್ಕೆ ಬಿದ್ದಿರುವ ಕಾಂಗ್ರೆಸ್ ಸರ್ಕಾರ, ಮುಸ್ಲಿಮರ ಶಿಕ್ಷಣಕ್ಕೆ 1,200 ಕೋಟಿ ರೂ. ವಿನಿಯೋಗಿಸಲು ಹೊರಟಿದೆ ಎಂದು ತಾರತಮ್ಯವನ್ನು ಎತ್ತಿ ಹಿಡಿದಿದ್ದಾರೆ.

ಮುಸ್ಲಿಮರ ಜತೆಗೆ ಎಲ್ಲ ಸಮುದಾಯಗಳ ಮಕ್ಕಳು ಶೈಕ್ಷಣಿಕ ಪ್ರಗತಿ ಸಾಧಿಸಬೇಕು. 342 ಕೋಟಿ ರೂ. ಕೊಡುವುದು ಸಾಧ್ಯವಿಲ್ಲವಾದರೆ ಖಜಾನೆ ದಿವಾಳಿಯಾಗಿರುವಂತಿದೆ. ಬಡವರ ಮಕ್ಕಳ ಶಿಕ್ಷಣಕ್ಕಿಂತ ಓಲೈಕೆ ರಾಜಕಾರಣವೇ ಹೆಚ್ಚಾಗಿರುವ ಕಾಂಗ್ರೆಸ್ ಪಕ್ಷಕ್ಕೆ ನಾಚಿಕೆಯಾಗಬೇಕು ಎಂದು ಆರ್.ಅಶೋಕ್ ಕಿಡಿಕಾರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net