

ಹಾವೇರಿ: ಸಮಾಜದಲ್ಲಿ ಅತ್ಯಂತ ಪವಿತ್ರವಾದ ವೃತ್ತಿ ಎಂದರೆ ಅದು ಶಿಕ್ಷಕ ವೃತ್ತಿಯಾಗಿದೆ. ಆದ್ದರಿಂದ ಶಿಕ್ಷಕರಾದವರು ವೃತ್ತಿ ಘನತೆಯನ್ನು ಎತ್ತಿ ಹಿಡಿಯಲು ತುಂಬಾ ಶ್ರದ್ಧೆ ಮತ್ತು ಸೇವಾಮನೋಭಾವದಿಂದ ಮಕ್ಕಳ ಭವಿಷ್ಯ ಕಟ್ಟಲು ಶ್ರಮಿಸಬೇಕಾಗಿದೆ ಎಂದು ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜ್ನ ಪ್ರಾಚಾರ್ಯ ಬಸವರಾಜ ಇಟ್ಟಿಗುಡಿ ಹೇಳಿದರು.
ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜ್ನಲ್ಲಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣ ಪ್ರತಿಯೊಬ್ಬ ವ್ಯಕ್ತಿಯ ಬದುಕನ್ನು ಬೆಳಗುತ್ತದೆ. ಪ್ರಜ್ಞಾವಂತ ಪ್ರಜೆಗಳಿಂದ ಮಾತ್ರ ದೇಶದ ಅಭಿವೃದ್ಧಿ ಕಾಣಲು ಸಾಧ್ಯ. ಶಾಲೆಯ ನಾಲ್ಕು ಗೋಡೆಗಳ ಮಧ್ಯೆ ವಿದ್ಯಾಥಿರ್ಗಳ ಭವಿಷ್ಯ ನಿರ್ಮಾಣವಾಗುತ್ತದೆ. ಒಬ್ಬ ಉತ್ತಮ ಗುರುವಿನಿಂದ ಮಾತ್ರ ಅತ್ಯುತ್ತಮ ಶಿಷ್ಯಂದಿರು ತಯಾರಾಗಲು ಸಾಧ್ಯ. ದೇಶದ ಭವಿಷ್ಯ ಶಿಕ್ಷಕರ ಕೈಯಲ್ಲಿದೆ. ಶಿಕ್ಷಕರು ಮನಸ್ಸು ಮಾಡಿದರೆ ಒಂದು ಅತ್ಯುತ್ತಮ, ಮೌಲ್ಯಯುತ ದೇಶ ಕಟ್ಟಲು ಸಾಧ್ಯವಿದೆ. ಈ ಪವಿತ್ರ ವೃತ್ತಿಯ ಪಾವಿರ್ತ್ಯವನ್ನು ನಾವೆಲ್ಲ ಕಾಪಾಡಿಕೊಳ್ಳಬೇಕಿದೆ ಎಂದರು.
ಉಪನ್ಯಾಸಕರಾದ ಶೇಖರ ಭಜಂತ್ರಿ, ಎಸ್.ಸಿ. ಮರಡಿ, ವಿ.ಟಿ. ಹೊನ್ನಪ್ಪನವರ, ಸಿ.ಎಂ. ಕಮ್ಮಾರ, ಎಸ್.ಎಸ್. ನಿಸ್ಸಿಮಗೌಡ್ರು, ರವಿ ಸಾದರ, ವಿ.ಎಸ್. ಪಾಟೀಲ, ಪುಷ್ಪಲತಾ ಡಿ.ಎಲ್., ಮಂಜುನಾಥ ಹತ್ತಿಯವರ, ಶಿವಾನಂದ ಕೆ., ಸುನಂದ ಶೀಲಿ, ಈಶ್ವರಗೌಡ ಪಾಟೀಲ, ಬೀರಪ್ಪ ಕುರುಬರ, ರೂಪ ಪಾಟೀಲ ಮತ್ತಿತರರಿದ್ದರು.