

ಬೆಂಗಳೂರು: ಮುಖ್ಯಮಂತ್ರಿ, ಸಚಿವರು, ಸಭಾಪತಿ, ಸಭಾಧ್ಯಕ್ಷರು, ಮುಖ್ಯಸಚೇತಕರು ಹಾಗೂ ಶಾಸಕರ ಸಂಬಳ ಹಾಗೂ ಭತ್ಯೆ ಹೆಚ್ಚಳಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಒಪ್ಪಿಗೆ ನೀಡಿದ್ದಾರೆ.
ಸಚಿವ, ಶಾಸಕರ ವೇತನ-ಭತ್ಯೆ ಪರಿಷ್ಕರಣೆಯು ಸೇರಿ ವಿಧಾನಮಂಡಲ ಬಜೆಟ್ ಅಧಿವೇಶನದಲ್ಲಿ ಅಂಗೀಕರಿಸಿ ಸರ್ಕಾರ ಶಿಾರಸು ಮಾಡಿದ ಮಸೂದೆಗಳ ಪೈಕಿ ನಾಲ್ಕಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದು, ಅಧಿಸೂಚನೆಯೂ ಪ್ರಕಟವಾಗಿದೆ.
ಕರ್ನಾಟಕ ಮೋಟಾರು ವಾಹನಗಳ ತೆರಿಗೆ (ತಿದ್ದುಪಡಿ), ಕರ್ನಾಟಕ ಸಚಿವರ ಶಾಸಕರ ಸಂಬಳ ಮತ್ತು ಭತ್ಯೆಗಳು (ತಿದ್ದುಪಡಿ), ಕರ್ನಾಟಕ ಶಾಸಕರ ಸಂಬಳ, ಭತ್ಯೆಗಳು (ತಿದ್ದುಪಡಿ) ಮತ್ತು ಕರ್ನಾಟಕ ಗ್ರಾಮ ಅಧಿಕಾರಿಗಳ ರದ್ದತಿ (ತಿದ್ದುಪಡಿ) ವಿಧೇಯಕಗಳಿಗೆ ರಾಜ್ಯಪಾಲರು ಒಪ್ಪಿಗೆ ನೀಡುವುದರೊಂದಿಗೆ ಈ ಕಾಯ್ದೆಗಳು ಜಾರಿಯಾಗಿವೆ.