ಶಾಲೆಗಳಿಗೆ ಶುಕ್ರದೆಸೆ, ಕೊಠಡಿ ನಿರ್ಮಾಣಕ್ಕೆ ಕೂಡಿಬಂತು ಕಾಲ: ಶಿಕ್ಷಣ ಕ್ಷೇತ್ರಕ್ಕೆ ಸರ್ಕಾರದ ದಾಖಲೆಯ ಕೊಡುಗೆ

Vidhana Soudha
Published on

| ವಿಲಾಸ ಮೇಲಗಿರಿ ಬೆಂಗಳೂರು

ಖಾಸಗಿ ಶಾಲೆಗಳ ಅಬ್ಬರದ ನಡುವೆ ಸಮರ್ಪಕ ಕೊಠಡಿಗಳು ಇಲ್ಲದೆ ಮಂಕಾಗಿದ್ದ ಸರ್ಕಾರಿ ಶಾಲೆಗಳಿಗೆ ಇದೀಗ ಶುಕ್ರದೆಸೆ ಒದಗಿ ಬಂದಿದೆ. 3,616 ಹಿರಿಯ ಪ್ರಾಥಮಿಕ ಮತ್ತು 2985 ಪ್ರೌಢಶಾಲೆಗಳಲ್ಲಿ ಒಟ್ಟಾರೆ 6,601 ಕೊಠಡಿಗಳನ್ನು ನಿರ್ವಿುಸಲು ಸರ್ಕಾರ ಮುಂದಡಿ ಇಟ್ಟಿದೆ.

ಶಾಲಾ ಕಟ್ಟಡ ನಿರ್ಮಾಣ ಸರ್ಕಾರಕ್ಕೊಂದು ಸವಾಲು. ಹಳೆ ಕಾಲದ ಕಟ್ಟಡಗಳು ದಿನೇ ದಿನೆ ಶಿಥಿಲಾವಸ್ಥೆ ತಲುಪುತ್ತಿದ್ದು ಮಕ್ಕಳ ಶೈಕ್ಷಣಿಕ ಪ್ರಗತಿಗೆ ದೊಡ್ಡ ಅಡ್ಡಿಯಾಗಿವೆ. ಕಾಲ ಕಾಲಕ್ಕೆ ಶಾಲಾ ಕಟ್ಟಡ ನಿರ್ವಿುಸುತ್ತಿದ್ದರೂ, 50 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳು, 1 ಕೋಟಿಗೂ ಹೆಚ್ಚು ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಇತ್ತೀಚೆಗೆ ಬಿದ್ದ ಭಾರೀ ಮಳೆ ಹಾಗೂ ಪ್ರವಾಹಗಳಿಂದ ರಾಜ್ಯಾದ್ಯಂತ ಶಾಲೆಗಳ ಸ್ಥಿತಿ ಅಧೋಗತಿಗಿಳಿದಿದೆ. ಕಾಲ ಕಾಲಕ್ಕೆ ನಿರ್ವಹಣಾ ವೆಚ್ಚ ಬಿಡುಗಡೆಯಾಗದೇ ಇರುವುದು ಈ ದುಸ್ಥಿತಿಗೆ ಮತ್ತೊಂದು ಪ್ರಮುಖ ಕಾರಣ. ಇದಕ್ಕೆ ಪರಿಹಾರ ಕಂಡು ಹಿಡಿಯಲು ದಾಖಲೆ ಮಟ್ಟದಲ್ಲಿ ಕೊಠಡಿ ನಿರ್ವಣಕ್ಕೆ ಸರ್ಕಾರ ಸಜ್ಜಾಗಿದೆ. 2022-23ನೇ ಸಾಲಿನಲ್ಲಿ ಯುನೈಟೆಡ್ ಡಿಸ್ಟ್ರಿಕ್ಟ್ ಇನ್ಪಾರ್ವೆಷನ್ ಸಿಸ್ಟೆಮ್ ಫಾರ್ ಎಜುಕೇಷನ್(ಯೂ-ಡೈಸ್), ಸ್ಟುಡೆಂಟ್ ಅಚಿವ್​ವೆುಂಟ್ ಟ್ರ್ಯಾಕಿಂಗ್ ಸಿಸ್ಟೆಮ್​ಸ್ಯಾಟ್ಸ್) ಅಂಕಿ-ಅಂಶಗಳ ಪ್ರಕಾರ ತುರ್ತು 6,601 ಸರ್ಕಾರಿ ಶಾಲಾ ಕೊಠಡಿಗಳ ಅವಶ್ಯಕತೆ ಇದೆ. ‘ವಿವೇಕ’ ಹೆಸರಿನಲ್ಲಿ ಶಾಲಾ ಕಟ್ಟಡ ನಿರ್ಮಾಣ ಯೋಜನೆ ರೂಪಿಸಲಾಗಿದ್ದು, ಕೆಲವೇ ದಿನಗಳಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಕಟ್ಟಡಗಳಿಗೆ ಸಾಂಕೇತಿಕವಾಗಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಪ್ರಾಥಮಿಕ ಶಾಲೆಗಳಿಗೆ ಘಟಕ ವೆಚ್ಚ 13.90 ಲಕ್ಷ ರೂ. ನಿಗದಿಪಡಿಸಿದರೆ, ಪ್ರೌಢಶಾಲೆ ಘಟಕ ವೆಚ್ಚ 16.40 ಲಕ್ಷ ರೂ. ನಿಗದಿಪಡಿಸಲಾಗಿದ್ದು, ಈ ಕಟ್ಟಡಗಳಿಗೆ ಒಟ್ಟು 992.16 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಇವಲ್ಲದೆ, ಸರ್ಕಾರಿ ಪದವಿ ಪೂರ್ವ ಕಾಲೇಜುಗಳ 1500 ಹೆಚ್ಚುವರಿ ಕೊಠಡಿ ನಿರ್ವಣಕ್ಕೂ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ.

ಕಾಮಗಾರಿಗೆ ಕಾಲಮಿತಿ: ಆರು ತಿಂಗಳಲ್ಲಿ ಈ ಕಟ್ಟಡ ನಿರ್ಮಾಣ ಪೂರ್ಣಗೊಳಿಸುವ ಷರತ್ತಿಗೆ ಒಳಪಟ್ಟು ಟೆಂಡರ್ ಕರೆಯಲಾಗಿದೆ. ಪ್ರಚಲಿತ ಎಲ್ಲ ಖರೀದಿ ನಿಯಮ ಹಾಗೂ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಕಾಯ್ದೆ 1999 ಹಾಗೂ ಅದರಡಿ ಹೊರಡಿಸಲಾದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಈ ಕಟ್ಟಡ ನಿರ್ಮಾಣ ಮಾಡಲಾಗುತ್ತದೆ.

6,601 ಕೊಠಡಿಗಳು ಮಾತ್ರವಲ್ಲ, ಈ ಬಾರಿ ಹೆಚ್ಚು ಮಳೆ ಬಂದಿರುವು ದರಿಂದ ಸಾಕಷ್ಟು ಶಾಲೆಗಳಿಗೆ ಹಾನಿಯಾಗಿದೆ. ಉ.ಕರ್ನಾಟಕದಲ್ಲಿ ಇನ್ನೂ ಹೆಂಚಿನ ಮೇಲ್ಚಾವಣಿ ಇರುವ ಶಾಲೆಗಳಿವೆ. ಹಾಗಾಗಿ ಸರ್ಕಾರ ಇನ್ನಷ್ಟು ಕೊಠಡಿ ಮಂಜೂರು ಮಾಡಿ ಸುಗಮ ಪಾಠ ಪ್ರವಚನಕ್ಕೆ ಅನುಕೂಲ ಮಾಡಿಕೊಡಬೇಕು. | ಚಂದ್ರಶೇಖರ ನುಗ್ಗಲಿ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ.

ಅನುದಾನ ಎಲ್ಲಿಂದ?: ಆಯಾ ಪ್ರದೇಶಕ್ಕೆ ಅನುಗುಣವಾಗಿ ರಾಜ್ಯ ಬಂಡವಾಳ ವೆಚ್ಚ, ವಿಶೇಷ ಅಭಿವೃದ್ಧಿ ಯೋಜನೆ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ, ಕರ್ನಾಟಕ ಗಣಿ ಪರಿಸರ ಪುನಃಶ್ಚೇತನ ನಿಗಮ ಮತ್ತು ಜಿಲ್ಲಾ ಖನಿಜ ನಿಧಿಗಳಡಿ ಈ ಅನುದಾನವನ್ನು ಭರಿಸಲಾಗುತ್ತದೆ.

ಕ್ಷೇತ್ರಕ್ಕೆ 20 ಕೊಠಡಿ: ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 20 ಕೊಠಡಿ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡ ಮೀಸಲು ಕ್ಷೇತ್ರಗಳಿಗೆ 20 ಕೊಠಡಿಗಳ ಜತೆಗೆ ಇನ್ನೂ 10 ಹೆಚ್ಚುವರಿ ನೀಡಲಾಗುತ್ತಿದೆ.

ಏನೇನು ಸಮಸ್ಯೆ?: ರಾಜ್ಯದ ಅನೇಕ ಕಡೆ ಮಕ್ಕಳು ಜೀವ ಭಯದಲ್ಲಿ ಪಾಠ ಕೇಳಬೇಕಾದ ಸ್ಥಿತಿ ಇದೆ. ಇನ್ನು ಕೆಲವೆಡೆ ಶತಮಾನ ಪೂರೈಸಿದ ಶಾಲಾ ಕಟ್ಟಡಗಳಿದ್ದು, ಅತೀ ತುರ್ತು ನವೀಕರಣಗೊಳ್ಳಬೇಕಿದೆ. ಶಾಲೆಗಳ ನಿರ್ವಹಣೆಗೆ ಬಿಡಿಗಾಸಿನ ಅನುದಾನ ಬಿಡುಗಡೆಯಾಗುತ್ತಿರುವುದರಿಂದ ಇದುವರೆಗೆ ಯಾವುದೇ ಸೂಕ್ತ ಪರಿಹಾರ ಸಿಕ್ಕಿಲ್ಲ. ಮುರಿದು ಹೋದ ಹೆಂಚು, ತೂತು ಬಿದ್ದ ತಗಡಿನ ಚಾವಣಿ, ಸೋರುತ್ತಿರುವ ತಾರಸಿಗಳಿಂದ ಮಳೆಗಾಲದಂಲ್ಲಂತೂ ಮಕ್ಕಳು ಶಾಲೆಯಲ್ಲಿ ಆತಂಕದಲ್ಲಿ ದಿನ ದೂಡಬೇಕಿದೆ. ಹಣದ ಕೊರತೆಯಿಂದ ರಾಜ್ಯಾದ್ಯಂತ ದುಸ್ಥಿತಿಯಲ್ಲಿರುವ ಶಾಲೆಗಳ ದುರಸ್ತಿ ಮತ್ತು ನಿರ್ವಹಣೆ ಕಾಯರ್å ಸರ್ಕಾರಕ್ಕೆ ಸವಾಲಾಗಿತ್ತು. ಈ ಸವಾಲಿಗೆ ಉತ್ತರವಾಗಿ ಕೊಠಡಿ ನಿರ್ವಣಕ್ಕೆ ಸರ್ಕಾರ ಈಗ ಸಜ್ಜಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net