ರೈತರ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯ

sheshapur gopal
ಶೇಷಾಪುರ ಗೋಪಾಲ್
Published on

ಕೋಲಾರ: ಅವಿಭಜಿತ ಕೋಲಾರ ಜಿಲ್ಲೆಯ ಮಾವು ಬೆಳೆಗಾರರು ಸಂಕಷ್ಟದಲ್ಲಿದ್ದು, ಸರ್ಕಾರ ನೆರವಿಗೆ ಧಾವಿಸುವಲ್ಲಿ ನಿರ್ಲಕ್ಷ್ಯ ತೋರುತ್ತಿದೆ ಎಂದು ಮಾವು ಬೆಳೆಗಾರ ಶೇಷಾಪುರ ಗೋಪಾಲ್​ ಬೇಸರ ವ್ಯಕ್ತಪಡಿಸಿದರು.

ರೈತರ ಬದುಕು ಅನಾಥವಾಗಿ ನಿಂತಿದೆ. ರೈತರಿಗೆ ಯಾವುದೇ ರೀತಿಯ ಮೂಲ ಸೌಲಭ್ಯಗಳು ಇಲ್ಲದೆ ಜೀವನ ಕಟ್ಟಿಕೊಳ್ಳಲು ಸರ್ಕಾರಿ ಸಂಸ್ಥೆ, ರಾಜಕೀಯ ವ್ಯಕ್ತಿಗಳನ್ನು ಅವಲಂಭಿಸಿಲ್ಲ. ರೈತರ ಬದುಕು ಹಸನಾಗಿ ಇರಬೇಕಾಗಿದೆ, ಸರ್ಕಾರದ ಆರ್ಥಿಕ ನೀತಿಗಳು ರೈತರಿಗೆ ಅನುಕೂಲವಾಗಿರಬೇಕು ಎಂದು ಹೇಳಿದರು.

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ರಾಜಕಾರಣ ಬಂಡವಾಳ ಶಾಹಿಗಳ ಕೈ ಸೇರಿದ್ದು, ರೈತರ ಬದುಕು ಅನಾಥವಾಗಿದೆ. ರೈತರಿಂದ ಮತ ಪಡೆದು ಅಧಿಕಾರಕ್ಕೆ ಬಂದಿರುವ ಶಾಸಕರು, ಎಂಎಲ್ಸಿಗಳು, ಸಚಿವರು ಬದುಕಿನ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ದೂರಿದರು.

ಟೊಮ್ಯಾಟೋ, ತರಕಾರಿ ಬೆಳೆದವರ ಪರಿಸ್ಥಿತಿ ಏನಾಗಿದೆ ಎಂಬುದರ ಬಗ್ಗೆ ನೋಡಿದ್ದೇವೆ. ಈಗಿನ ಪರಿಸ್ಥಿತಿಯು ಹಿಂದೆಯೂ ಸಹ ಸಮಸ್ಯೆ ಎದುರಾಗಿತ್ತು. ಆಗ ಹಿಂದಿನ ಸಿಎಂ ಕುಮಾರಸ್ವಾಮಿ ಎರಡು ದಿನದಲ್ಲಿ ರೈತರ ಹಿತ ದೃಷ್ಟಿಯಿಂದ ಬೆಂಬಲ ಬೆಲೆ ಘೋಷಣೆ ಮಾಡಿದರು. ಅವರಿಗೆ ರೈತರ ಬಗ್ಗೆ ಇರುವ ಕಾಳಜಿ ಈಗಿನ ಸರ್ಕಾರಕ್ಕೆ ಯಾಕಿಲ್ಲ ಎಂದು ಕಿಡಿಕಾರಿದರು.

ಮಾವು ಬೆಳೆಗಾರರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸುತ್ತದೆ ಎಂಬ ನಿರೀೆಯಿತ್ತು. ಸಂಪುಟ ಸಭೆಯಲ್ಲಿ ಸಚಿವ ಕೆ.ಎಚ್​.ಮುನಿಯಪ್ಪ ಸೇರಿ ಸಚಿವರು ಧ್ವನಿ ಗೂಡಿಸಿದ್ದಾರೆ. ಎರಡೂ ಜಿಲ್ಲೆಯ ಜನಪ್ರತಿನಿಧಿಗಳು ತೆವಲಿಗೆ ಹೇಳಿಕೆ ನೀಡುವುದನ್ನು ಬಿಟ್ಟು ಪಾತೀತವಾಗಿ ರೈತರ ಪರ ಹೋರಾಟ ನಡೆಸಬೇಕು ಎಂದು ತಿಳಿಸಿದರು.

ಕೆಸಿ ವ್ಯಾಲಿ ಯೋಜನೆ ಪೈಪ್​ಗಳಲ್ಲಿ ನೀರಿಗಿಂತ ಹಣ ಹೊಳೆಯೇ ಹೆಚ್ಚು ಹರಿಯಿತು, 430 ಎಂಎಲ್​ಡಿ ಹರಿಯಬೇಕಿದ್ದ ನೀರು, 250 ಎಂಎಲ್​ಡಿಗೆ ತಲುಪಲಿಲ್ಲ. ಯೋಜನೆಯ ನೀರು ಇದೀಗ ಯತ್ತ ಹರಿಯುತ್ತಿದೆ ಎಂದು ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net