

ಬೆಂಗಳೂರು: ನಾಲ್ವರು ಡಿವೈಎಸ್ಪಿ (ಡೆಪ್ಯೂಟಿ ಸೂಪರಿಟೆಂಡೆಂಟ್ ಆಫ್ ಪೊಲೀಸ್) ಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಸಿಐಡಿ ಡಿವೈಎಸ್ಪಿಗಳಾಗಿದ್ದ ವಿ.ಗೋವಿಂದರಾಜು ಅವರನ್ನು ಹುಬ್ಬಳ್ಳಿ-ಧಾರವಾಡ ನಗರದ ಹುಬ್ಬಳ್ಳಿ ಉತ್ತರ ವಿಭಾಗಕ್ಕೆ ಮತ್ತು ಅನುಷಾ ಅವರನ್ನು ಹಬ್ಬಳ್ಳಿ-ಧಾರವಾಡ ನಗರದ ಧಾರವಾಡ ನಗರ ಉಪವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.
ಹಾಗೇ ರಾಜ್ಯ ಗುಪ್ತವಾರ್ತೆ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಡಿವೈಎಸ್ಪಿಗಳಾದ ವಿನಾಯಕ ಎನ್. ಶೆಟ್ಟಿಗೇರ್ ಅವರನ್ನು ಶಿವಮೊಗ್ಗ ಜಿಲ್ಲೆಯ ಸಾಗರ ಉಪವಿಭಾಗಕ್ಕೆ ಮತ್ತು ಶಿವಾನಂದ ಎನ್. ಮದರಖಂಡಿಯವರನ್ನು ಶಿಕಾರಿಪುರ ಉಪವಿಭಾಗಕ್ಕೆ ಟ್ರಾನ್ಸ್ಫರ್ ಮಾಡಿ ರಾಜ್ಯ ಮಹಾನಿರ್ದೇಶಕರು ಮತ್ತು ಆರಕ್ಷಕ ಮಹಾನಿರೀಕ್ಷಕರ ಕಚೇರಿ ಆದೇಶ ಹೊರಡಿಸಿದೆ.