ಅನ್ನದಾತರಲ್ಲಿ ಆತ್ಮಸ್ಥೈರ್ಯ ತುಂಬಲು ದಿಟ್ಟ ಹೆಜ್ಜೆ ಇಟ್ಟ ಸರ್ಕಾರ; ಕೃಷಿ ಉತ್ಪನ್ನಗಳ ಸಾಗಣೆ, ವಹಿವಾಟಿಗೆ ಮುಕ್ತ ಅವಕಾಶ

page 1 1
Published on

ಬೆಂಗಳೂರು: ಲಾಕ್​ಡೌನ್​ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ರೈತರಲ್ಲಿ ಆತ್ಮಸ್ಥೈರ್ಯ ತುಂಬಲು ದಿಟ್ಟ ಹೆಜ್ಜೆ ಇಟ್ಟಿರುವ ಸರ್ಕಾರ ಕೃಷಿ ಉತ್ಪನ್ನ ಸಾಗಣೆ, ವಹಿವಾಟಿಗೆ ಮುಕ್ತ ಅವಕಾಶ ನೀಡುವುದೂ ಸೇರಿ ಹಲವಾರು ಗುಣಾತ್ಮಕ ಸುಧಾರಣೆ ಕ್ರಮಗಳನ್ನು ಕೈಗೊಂಡಿದೆ. ಅಗತ್ಯ ವಸ್ತು ಸೇವಾ ಕಾಯ್ದೆ ವ್ಯಾಪ್ತಿಗೆ ತರುವುದರ ಜತೆಗೆ ಕೃಷಿ ಸಂಬಂಧಿತ ಇಲಾಖೆಗಳನ್ನೇ ಅಗತ್ಯ ಸೇವೆಗೆ ಸೇರಿಸಿ ಆಡಳಿತ ಸಜ್ಜುಗೊಳಿಸಿದೆ. ರೈತರ ಅಹವಾಲು ಆಲಿಸಿ ತಕ್ಷಣ ಸ್ಪಂದಿಸಲೆಂದು ಅಗ್ರಿ ವಾರ್ ರೂಮ್ ಸ್ಥಾಪಿಸಿರುವುದು ಮತ್ತೊಂದು ಸ್ವಾಗತಾರ್ಹ ಸಂಗತಿ.

ಕೃಷಿ ಸಚಿವ ಬಿ.ಸಿ. ಪಾಟೀಲ್ ಒಂದು ವಾರದಲ್ಲಿ 19 ಜಿಲ್ಲೆ ಸುತ್ತಾಡಿ ವಸ್ತುಸ್ಥಿತಿ ಅವಲೋಕಿಸುವ ಮೂಲಕ ಆಡಳಿತದ ಮನೋಬಲ ಹೆಚ್ಚಿಸಿದ್ದಾರೆ. ಇಷ್ಟಾಗಿಯೂ ಸೂಕ್ತ ರೀತಿಯಲ್ಲಿ ಸಂವಹನ , ಸಂಪರ್ಕ ಸಾಧ್ಯವಾಗಿಲ್ಲದ ಪರಿಣಾಮ ತುರ್ತು ವಿಶೇಷ ಕ್ರಮಗಳತ್ತ ಚಿತ್ತ ನೆಟ್ಟಿದ್ದಾರೆ. ಲಾಕ್​ಡೌನ್ ಅವಧಿಯ ಹಾಗೂ ನಂತರದ ದೀರ್ಘಾವಧಿ ಪರಿಹಾರ ಕ್ರಮಗಳಿಗೆ ಆದ್ಯತೆ ನೀಡುವುದು ಕೃಷಿ ಕ್ಷೇತ್ರ ಹಾಗೂ ಗ್ರಾಮೀಣರ ಬದುಕು ಹಾಗೂ ಗ್ರಾಹಕರ ಹಿತರಕ್ಷಣೆಯಿಂದ ಬಹುಮುಖ್ಯವೆಂದು ಅನ್ನದಾತರು ಪ್ರತಿಪಾದಿಸುತ್ತಿದ್ದಾರೆ. ರಾಜ್ಯದಲ್ಲಿ ಆಗಿದ್ದೇನು?

* ಕೃಷಿ, ತೋಟಗಾರಿಕೆ ಉತ್ಪನ್ನಗಳ ಮುಕ್ತ ಸಾಗಣೆಗೆ (ಕೇರಳ ಹೊರತುಪಡಿಸಿ) ಅವಕಾಶ, ತೆರೆದ ಮಾರುಕಟ್ಟೆಗಳು, ಗ್ರೀನ್​ಕಾರ್ಡ್ ಪಾಸ್ ವ್ಯವಸ್ಥೆ

* ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದು ಹೊಲದಿಂದ ನೇರ ಮಾರಾಟಕ್ಕೆ ಅನುಮತಿ

* ಹೊಲ, ಗದ್ದೆಗಳ ಕೆಲಸಕ್ಕೆ ಕೃಷಿ ಕೂಲಿಕಾರರನ್ನು ಕರೆದೊಯ್ಯಲು ಅಡೆತಡೆ ನಿವಾರಣೆ

* ಮುಂಗಾರು ಹಂಗಾಮಿಗೆ ಕೃಷಿ ಪರಿಕರ, ರಸಗೊಬ್ಬರ, ಬೀಜ ದಾಸ್ತಾನು, ಸಂಬಂಧಿಸಿದ ಅಂಗಡಿಗಳ ವಹಿವಾಟು ಸುಗಮಗೊಂಡಿದೆ

* ಟ್ರಾ್ಯಕ್ಟರ್ ಸಹಿತ ಕೃಷಿ ಯಂತ್ರೋಪಕರಣಗಳ ದುರಸ್ತಿ ಅಂಗಡಿ ತೆರೆಯಲು ಅವಕಾಶ, ನೇರ ಕ್ಷೇತ್ರಕ್ಕೆ ಹೋಗಿ ರಿಪೇರಿಗೆ ಆಸಕ್ತಿ ತೋರಿದ ಕಂಪನಿಗಳ ಪ್ರತಿನಿಧಿಗಳಿಗೆ ಗ್ರೀನ್ ಪಾಸ್

* ಹಣ್ಣು, ತರಕಾರಿಗಳನ್ನು ಹಾಪ್ಕಾಮ್್ಸ ಮೂಲಕ ಖರೀದಿಸಿ ನೇರ ಗ್ರಾಹಕರಿಗೆ ಮಾರಾಟ

* ಕೋಲ್ಡ್ ಸ್ಟೋರೇಜ್​ಗಳಲ್ಲಿ ಲಭ್ಯ ಸ್ಥಳಾವಕಾಶದಲ್ಲಿ ಶುಲ್ಕರಹಿತ ದಾಸ್ತಾನು, ದ್ರಾಕ್ಷಿ ವೈನರಿ ಘಟಕಗಳ ಆರಂಭಕ್ಕೆ ಅಸ್ತು

* ಪುಷ್ಪ ಕೃಷಿ ನಷ್ಟದ ಸಮೀಕ್ಷೆಗೆ ಸಮ್ಮತಿ, ಕಿಸಾನ್ ಸಮ್ಮಾನ್ ನಿಧಿಯಡಿ ರೈತರ ಖಾತೆಗೆ ತಲಾ 2,000 ರೂ. ಜಮೆಗೆ ವ್ಯವಸ್ಥೆ

ಆಗಬೇಕಾಗಿದ್ದೇನು?

* ತರಕಾರಿ, ಹಣ್ಣು ಬೆಳೆದ ಪ್ರದೇಶದಲ್ಲಿ ಮಾರಾಟವಾಗುತ್ತಿಲ್ಲ, ಇದಕ್ಕಾಗಿ ಸಮಗ್ರ ನೆಟ್​ವರ್ಕ್ ಸೃಷ್ಟಿಸಿ ಒಂದಕ್ಕೊಂದು ಬೆಸೆಯಬೇಕು

* ದವಸ-ಧಾನ್ಯ, ದ್ವಿದಳ ಧಾನ್ಯಗಳನ್ನು ಸರ್ಕಾರವೇ ಬೆಂಬಲ ಬೆಲೆಗೆ ಖರೀದಿಸಿ ಶೇಖರಿಸಬೇಕು

* ರೈತ ಸಂಪರ್ಕ ಕೇಂದ್ರದ ಅಧಿಕಾರಿಯನ್ನು ಲೈಸನಿಂಗ್ (ಮಧ್ಯವರ್ತಿ) ಅಧಿಕಾರಿ ಯನ್ನಾಗಿ ಪರಿವರ್ತಿಸಿ ಅಂಡ್ರಾಯ್್ಡ ಮೊಬೈಲ್ ಮುಖೇನ ಬೇಡಿಕೆಗೆ ತಕ್ಕಂತೆ ಅಪ್​ಲೋಡ್ ವ್ಯವಸ್ಥೆ ಮಾಡಬೇಕು

* ಸಾಕಷ್ಟು ನಗದು ಪ್ರಸರಣಕ್ಕೆ ಅವಕಾಶ, ಗ್ರಾಮೀಣರ ಬದುಕು

| ಮೃತ್ಯುಂಜಯ ಕಪಗಲ್​

ತುರ್ತಾಗಿ ತೋಟಗಾರಿಕೆ ಬೆಳೆಗಳ ಮಾರಾಟ ವ್ಯವಸ್ಥೆಯಾಗಬೇಕಾಗಿದೆ. ಸಮಗ್ರ ನಷ್ಟ ಸಮೀಕ್ಷೆ ನಡೆಸಿ ಎಕರೆಗೆ ಇಂತಿಷ್ಟು ನೇರ ಪರಿಹಾರ ನೀಡಬೇಕು. | ಚಾಮರಸ ಮಾಲಿಪಾಟೀಲ್, ಗೌರವಾಧ್ಯಕ್ಷ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ.

ಕೃಷಿ, ತೋಟಗಾರಿಕೆ ಉತ್ಪನ್ನಗಳ ಸಾಗಣೆಗೆ ಮುಕ್ತ ಅವಕಾಶ ಸೇರಿ ಅಗತ್ಯವಿರುವ ಎಲ್ಲ ಕ್ರಮ ಕೈಗೊಳ್ಳಲಾಗಿದೆ. ರೈತರು, ಕೃಷಿ ಹಾಗೂ ಕೂಲಿಕಾರರ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದೆ. | ಬಿ.ಸಿ.ಪಾಟೀಲ್ ಕೃಷಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net