ಸರ್ಕಾರಿ ಜಾಗ ಅರ್ಹರಿಗೆ ನೀಡಲು ಒತ್ತಾಯಿಸಿ ಮನವಿ ಸಲ್ಲಿಕೆ

2-RNR-05
Published on

ರಾಣೆಬೆನ್ನೂರ: ಮಿನಿ ವಿಧಾನಸೌಧಕ್ಕೆ ಹೊಂದಿಕೊಂಡಿರುವ ಸರ್ಕಾರಿ ಜಾಗದಲ್ಲಿ ಮುದ್ರಾಂಕ ಮಾರಾಟಗಾರರು ಹಾಗೂ ದಸ್ತು ಬರಹಗಾರರ ಸಂಕ್ಕೆ ನೀಡಿರುವ ನಿಯಮ ಉಲ್ಲಂಘಿಸಿ ಬೇರೆಯವರಿಗೆ ಬೇರೆ ಬೇರೆ ಉದ್ಯೋಗ ಮಾಡಿಕೊಳ್ಳಲು ಅವಕಾಶ ನೀಡಿದ್ದು ಈ ಕುರಿತು ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಡಾ. ಬಿ.ಆರ್​. ಅಂಬೇಡ್ಕರ್​ ಸೇವಾ ಸಂಸ್ಥೆ ಸೇರಿ ವಿವಿಧ ಸಂಸ್ಥೆಗಳ ವತಿಯಿಂದ ಸೋಮವಾರ ಗ್ರೇಡ್​&2 ತಹಸೀಲ್ದಾರ್​ ಅರುಣ ಕಾರಗಿ ಅವರಿಗೆ ಮನವಿ ಸಲ್ಲಿಸಲಾಯಿತು.

ಸರ್ಕಾರಿ ಷರತ್ತುಗಳನ್ನು ವಿಧಿಸಿ ವಾಷಿರ್ಕ ಗುತ್ತಿಗೆಯಂತೆ ಜಾಗೆಯನ್ನು ಸಾರ್ವಜನಿಕ ಅನುಕೂಲಕ್ಕೆ ಮಂಜೂರು ಮಾಡಲಾಗಿದೆ. ಕಳೆದ 20 ವರ್ಷಗಳಿಂದ ಸಂದವರು ಜಾಗವನ್ನು ಅನುಭೋಗ ಮಾಡುತ್ತಿದ್ದಾರೆ. ಆದರೀಗ ಸರ್ಕಾರಿ ಸ್ವತ್ತಿನ ಗುತ್ತಿಗೆ ಅವಧಿ ಮುಗಿದಿದೆ. ಆದರೂ ಸಂದವರು 4 ವರ್ಷಗಳಿಂದ ಯಾವುದೇ ಸರ್ಕಾರಿ ಭೂ ಬಾಡಿಗೆ ತುಂಬದೆ ಅನಧಿಕೃತವಾಗಿ ಜಾಗವನ್ನು ಬಳಸುತ್ತಿದ್ದಾರೆ.

ಅಲ್ಲದೆ ಸರ್ಕಾರಿ ಸ್ವತ್ತನ್ನು ದಸ್ತು ಬರಹಗಾರರ ಸಂಘದ ಸದಸ್ಯರನ್ನು ಹೊರತು ಪಡಿಸಿ ಅನಧಿಕೃತ ವ್ಯಕ್ತಿಗಳು ಯಾವುದೇ ಸರ್ಕಾರಿ ಅದೇಶವಿಲ್ಲದೆ ಹಾಗೂ ಯಾವುದೇ ಸಂಘದ ಆದೇಶವಿಲ್ಲದೇ ಕಾನೂನು ಬಾಹಿರವಾಗಿ ವಾಣಿಜ್ಯ ಉದ್ದೇಶಕ್ಕಾಗಿ ಕಚೇರಿಗಳನ್ನು ನಡೆಸುತ್ತಿದ್ದಾರೆ. ಕೆಲವರು ಅನಧಿಕೃತ ವ್ಯಕ್ತಿಗಳಿಗೆ ಹಸ್ತಾಂತರ ಮಾಡಿದ್ದಾರೆ. ಆದ್ದರಿಂದ ಕಂದಾಯ ಇಲಾಖೆ ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮ ಕೈಗೊಂಡು ಸರ್ಕಾರಿ ಸ್ವತ್ತನ್ನು ಎಲ್ಲರಿಗೂ ದೊರೆಯುವಂತೆ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರಮುಖರಾದ ಬಸವರಾಜ ಸಾವಕ್ಕನವರ, ಮಲ್ಲೇಶಪ್ಪ ಮದ್ಲೇರ, ಆಂಜನೇಯ ಛಲವಾದಿ, ಅರುಣ ಛಲವಾದಿ, ಮಲ್ಲೇಶ ನಿಂಗಮ್ಮನವರ, ಗೌತಮ ಸಾವಕ್ಕನವರ, ಗುಡ್ಡಪ್ಪ ಮಡಿವಾಳರ, ಪ್ರಭಾಕರ ಶಿಗ್ಲಿ, ಚಂದ್ರಪ್ಪ ಬಣಕಾರ, ಪರಶುರಾಮ ಕುರುವತ್ತಿ, ಭಾಷಾ ಹಂಪಾಪಟ್ಟಣ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net