ಸರ್ಕಾರ ಶುಂಠಿ ಖರೀದಿ ಕೇಂದ್ರ ತೆರೆಯಲಿ

ginger
ಶುಂಠಿ ಖರೀದಿ ಕೇಂದ್ರ ತೆರೆಯುವಂತೆ ಬೆಳೆಗಾರರು ಡಿಸಿ ಕಚೇರಿ ಎದುರು ಪ್ರತಿಭಟಿಸಿದರು. ಚಂದ್ರಶೇಖರ್, ಗಿರೀಶ್ ಕುಮಾರ್, ಕೃಷ್ಣಪ್ಪ, ರೇವಣಪ್ಪ, ಶಿವಪ್ಪ ಮತ್ತಿತರರಿದ್ದರು.
Published on

ಶಿವಮೊಗ್ಗ: ಶುಂಠಿ ಬೆಲೆ ತೀವ್ರ ಕುಸಿತ ಕಂಡಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ. ಸರ್ಕಾರ ಮಧ್ಯ ಪ್ರವೇಶಿಸಿ ಕೂಡಲೇ ಖರೀದಿ ಕೇಂದ್ರಗಳನ್ನು ತೆರೆಯಬೇಕು. ಶುಂಠಿಗೆ ಬೆಲೆ ನಿಗದಿ ಮಾಡಬೇಕು ಎಂದು ಆಗ್ರಹಿಸಿ ಬುಧವಾರ ಶುಂಠಿ ಬೆಳೆಗಾರರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಪ್ರಸ್ತುತ ಶುಂಠಿ ಕ್ವಿಂಟಾಲ್‌ಗೆ 1,500 ರಿಂದ 2,000 ರೂ. ಬೆಲೆಯಿದೆ. ಇದು ಉತ್ಪಾದನಾ ವೆಚ್ಚಕ್ಕಿಂತ ತೀರಾ ಕಡಿಮೆಯಾಗಿದೆ. ಇದೇ ಬೆಲೆಗೆ ಮಾರಾಟ ಮಾಡಿದರೆ ಬೆಳೆಗಾರರಿಗೆ ವ್ಯಾಪಕ ನಷ್ಟವಾಗಲಿದೆ. ಬೆಳೆಗಾರರು ಆತ್ಮಹತ್ಯೆ ಹಾದಿ ಹಿಡಿಯಬೇಕಾಗುತ್ತದೆ. 2016-17ರಲ್ಲಿ ಶುಂಠಿ ಬೆಳೆ ತೀವ್ರ ಕುಸಿತ ಇದ್ದಾಗ ಅರುಣಾಚಲ ಪ್ರದೇಶದ ಸರ್ಕಾರ ಕನಿಷ್ಠ ಬೆಲೆ ನಿಗದಿ ಮಾಡಿತ್ತು. ಮಿಜೋರಾಂನಲ್ಲಿ ಕಳೆದ ವರ್ಷ ಪ್ರತಿ ಕ್ವಿಂಟಾಲ್‌ಗೆ ಐದು ಸಾವಿರ ರೂ. ನಿಗದಿ ಮಾಡಲಾಗಿತ್ತು ಎಂದು ಪ್ರತಿಭಟನಾಕಾರರು ತಿಳಿಸಿದರು.

ಸರ್ಕಾರ ಕೂಡಲೇ ಮಧ್ಯಪ್ರವೇಶಿಸ ಖರೀದಿ ಕೇಂದ್ರಗಳ ಮೂಲಕ ಕ್ವಿಂಟಾಲ್‌ಗೆ 7 ಸಾವಿರ ರೂ. ದರ ನಿಗದಿ ಮಾಡಿ ಶುಂಠಿ ಬೆಳೆಗಾರರನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಶುಂಠಿ ಬೆಳೆಗಾರರಾದ ಗಿರೀಶ್‌ಕುಮಾರ್, ಚಂದ್ರಶೇಖರ್, ರೇವಣಪ್ಪ, ಶಿವಪ್ಪ, ರಮೇಶ್, ಕೃಷ್ಣಪ್ಪ ಮುಂತಾದವರು ಪ್ರತಿಭಟನೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net