ಹಾಲು ಉತ್ಪಾದಕರ ಹಿತ ಕಾಯಲಿ ಸರ್ಕಾರ

skp milk
ಇಟ್ಟಿಗೆಹಳ್ಳಿಯಲ್ಲಿ ನೂತನ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಕಚೇರಿಯನ್ನು ಸಂಸದ ಬಿ.ವೈ ರಾಘವೇಂದ್ರ ಉದ್ಘಾಟಿಸಿದರು. ಸುಶೀಲಾಬಾಯಿ, ಶಿವಶಂಕರಪ್ಪ, ದಯಾನಂದ್, ಹರೀಶ್ ಕರಿಗೌಡರ, ಎಚ್.ಲಕ್ಷ್ಮಣಪ್ಪ ಇತರರಿದ್ದರು.
Published on

ಶಿಕಾರಿಪುರ: ಜಿಲ್ಲೆಯಲ್ಲಿ ಶಿಕಾರಿಪುರ ತಾಲೂಕು ಹಾಲು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರಲು ಕಾರಣ ಹಾಲು ಉತ್ಪಾದಕರು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಇಟ್ಟಿಗೆಹಳ್ಳಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಬರಗಾಲ, ಅತಿವೃಷ್ಟಿ, ಅನಾವೃಷ್ಟಿ ಮತ್ತು ಕರೊನಾ ಸಮಯದಲ್ಲಿ ಬಹುತೇಕ ನಮ್ಮ ರೈತರ ಕೈಹಿಡಿದು ನಡೆಸಿದ್ದು ಕ್ಷೀರೋದ್ಯಮ ಎಂದರು.

ಪ್ರತಿ ಗಾಮಗಳಲ್ಲಿ ನಮ್ಮ ರೈತರು ಹೈನೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ. ಸರ್ಕಾರ ಹಾಲು ಉತ್ಪಾದಕರ ಹಿತವನ್ನು ಕಾಯಬೇಕಿದೆ. ತಾಲೂಕಿನಲ್ಲಿ ಪಶು ಆಹಾರ ಉತ್ಪಾದನಾ ಘಟಕವನ್ನು ಹೈನೋದ್ಯಮ ಮತ್ತು ಪಶು ಸಂರಕ್ಷಣೆ ದೃಷ್ಟಿಯಿಂದ ನಿರ್ಮಿಸಲಾಗಿದೆ. ಪಶು ಸಂರಕ್ಷಣೆ ಬಹುತೇಕ ರೈತರ ಆದಾಯದ ಮೂಲ. ಹೈನೋದ್ಯಮ ಹೆಚ್ಚಿದಷ್ಟು ರೈತರ ಆದಾಯವೂ ಹೆಚ್ಚುತ್ತದೆ. ಕಾಲ ಕಾಲಕ್ಕೆ ಪಶುಗಳಿಗೆ ಸೂಕ್ತವಾದ ಚಿಕಿತ್ಸೆ ಕೊಡಿಸಬೇಕು ಎಂದು ಸಲಹೆ ನೀಡಿದರು.

ಮುದ್ದನಹಳ್ಳಿ ಗ್ರಾಪಂ ಅಧ್ಯಕ್ಷೆ ಸುಶೀಲಾಬಾಯಿ, ಶಿವಮೊಗ್ಗ ಹಾಲು ಒಕ್ಕೂಟದ ನಿರ್ದೇಶಕ ಶಿವಶಂಕರಪ್ಪ, ದಯಾನಂದ್, ಹರೀಶ್ ಕರಿಗೌಡರ, ಎಚ್.ಲಕ್ಷ್ಮಣಪ್ಪ, ಸಿದ್ದನಗೌಡ, ಗಂಗ್ಯಾನಾಯ್ಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net