

Viral Video | ಮಧ್ಯಪ್ರದೇಶದ ಕಟ್ನಿ ಜಿಲ್ಲೆಯ ಸರ್ಕಾರಿ ಶಾಲೆಯ ಶಿಕ್ಷಕನು ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಗಳಿಗೆ ಮದ್ಯ ನೀಡುತ್ತಿರುವ ವೀಡಿಯೊ ಸೊಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಶಿಕ್ಷಕನ್ನು ಅಮಾನತುಗೊಳಿಸಲಾಗಿದೆ.
ಶಿಕ್ಷಕನಾದ ಲಾಲ್ ನವೀನ್ ಪ್ರತಾಪ್ ಸಿಂಗ್ನು ಈ ವಿಡಿಯೋದಲ್ಲಿ ಮದ್ಯವನ್ನು ಕಪ್‌ಗಳಿಗೆ ಸುರಿದು ಚಿಕ್ಕ ಹುಡುಗರಿಗೆ ನೀಡುತ್ತಿರುವುದು ಕಂಡುಬಂದಿದೆ. ಜೊತೆಗೆ ಮದ್ಯ ಸೇವಿಸುವ ಮೊದಲು ಅದಕ್ಕೆ ನೀರನ್ನು ಬೆರೆಸಲು ಅವನು ವಿದ್ಯಾರ್ಥಿಗೆ ಸೂಚಿಸುವುದನ್ನು ನೋಡಬಹುದು.
ಸೊಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಕಟ್ನಿ ಜಿಲ್ಲಾಧಿಕಾರಿ ದಿಲೀಪ್ ಕುಮಾರ್ ಯಾದವ್ ಶಿಕ್ಷಕನ ಮೇಲೆ ಶೀಘ್ರ ಕ್ರಮ ಕೈಗೊಂಡು ಜಿಲ್ಲಾ ಶಿಕ್ಷಣ ಅಧಿಕಾರಿ ಒ.ಪಿ. ಸಿಂಗ್ ಅವರಿಗೆ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ.
ಇದನ್ನೂ ಓದಿ: ಜೈಲುಗಳಲ್ಲಿ ಕೈದಿಗಳಿಗೆ ವಿಶೇಷ 'ಲೈಂಗಿಕ ಕೊಠಡಿಗಳು'!
ದುರ್ನಡತೆ, ಅಪ್ರಾಪ್ತ ವಯಸ್ಕರಲ್ಲಿ ಮದ್ಯ ಸೇವನೆಯನ್ನು ಉತ್ತೇಜಿಸುವುದು ಮತ್ತು ಬೋಧನಾ ವೃತ್ತಿಯ ನೈತಿಕ ಮಾನದಂಡಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸಿಂಗ್ನ್ನು ಮಧ್ಯಪ್ರದೇಶ ನಾಗರಿಕ ಸೇವೆಗಳ ನಿಯಮಗಳ ಅಡಿಯಲ್ಲಿ ಅದೇ ದಿನ ಅಮಾನತುಗೊಳಿಸಲಾಯಿತು. ಶಿಕ್ಷಣ ಸಂಸ್ಥೆಗಳ ಪಾವಿತ್ರ್ಯವನ್ನು ಕಾಪಾಡಿಕೊಳ್ಳಲು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. (ಏಜೆನ್ಸೀಸ್)