ಸರ್ಕಾರಿ ಶಾಲೆಗೆ ನೋಡಲ್​ ಅಧಿಕಾರಿ ಭೇಟಿ; ಮಕ್ಕಳಲ್ಲಿ ಜಾಗೃತಿ

3-RNR-04
Published on

ರಾಣೆಬೆನ್ನೂರ: ಕೊಪ್ಪಳ ನಗರಾಭಿವೃದ್ಧಿ ಯೋಜನಾಧಿಕಾರಿ, ನೋಡಲ್​ ಅಧಿಕಾರಿ ರೇಷ್ಮಾಭಾನು ಹಾನಗಲ್ಲ ಮಂಗಳವಾರ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. 17 ಭೇಟಿ ನೀಡಿ ಪ್ರಧಾನ ಮಂತ್ರಿ ಪೋಷಣ ಅಭಿಯಾನ ಕಾರ್ಯಕ್ರಮ ಕುರಿತು ಜಾಗೃತಿ ಮೂಡಿಸಿದರು.

ಶಾಲಾ ಮಕ್ಕಳಿಗೆ ಬಾಳೆಹಣ್ಣು ವಿತರಿಸಿದ ಅವರು, ಮಕ್ಕಳು ಶಾಲೆಯಲ್ಲಿ ಬಿಸಿಯೂಟದ ಜೊತೆಗೆ ಕೊಡುವ ಹಾಲು, ರಾಗಿ ಮಾಲ್ಟ್​, ಮೊಟ್ಟೆ ಹಾಗೂ ಬಾಳೆಹಣ್ಣು ಎಲ್ಲವುಗಳನ್ನು ಸೇವಿಸಿ ಉತ್ತಮ ಆರೋಗ್ಯವಂತರಾಗಿ, ಗುಣಾತ್ಮಕ ಶಿಕ್ಷಣ ಪಡೆಯಬೇಕು ಎಂದರು.

ತಹಸೀಲ್ದಾರ್​ ಆರ್​.ಎಚ್​. ಭಾಗವಾನ್​, ತಾಲೂಕು ದೈಹಿಕ ಶಿಕ್ಷಣ ಅಧೀಕ್ಷಕ ಪ್ರಭಾಕರ ಚಂದಿ, ಶಾಲೆಯ ಮುಖ್ಯಶಿಕ್ಷಕ ರಮೇಶ ಕಾಳಿ, ಎಸ್​ಡಿಎಂಸಿ ಅಧ್ಯಕ್ಷ ಆನಂದ ಚಿನ್ನಿಕಟ್ಟಿ , ಬಿ.ಪಿ. ಶಿಡೇನೂರ, ನಾಗರಾಜ ಕೋಳೂರ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net