ಎಸ್ಸೆಸ್ಸೆಲ್ಸಿ ಪರೀಕ್ಷಾ ಶುಲ್ಕ ಹೆಚ್ಚಳ ಮಾಡಿ ಸರ್ಕಾರ ಆದೇಶ

SSLC Exam
Published on

ಬೆಂಗಳೂರು: 2025-26ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಪರೀಕ್ಷಾ ಶುಲ್ಕವನ್ನು ಪರಿಷ್ಕರಣೆ ಮಾಡಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಶೇ.5 ಹೆಚ್ಚಳ ಮಾಡಿದೆ.

ಇದರಿಂದಾಗಿ 676 ರೂ. ಇದ್ದ ಪರೀಕ್ಷಾ ಶುಲ್ಕ 710 ರೂ. ಆಗಲಿದೆ. ಖಾಸಗಿ ಅಭ್ಯರ್ಥಿಗಳ ಶುಲ್ಕ, ಪುನರಾವರ್ತಿತ ಅಭ್ಯರ್ಥಿಗಳ ಶುಲ್ಕ ಸೇರಿ ಎಲ್ಲ ರೀತಿಯ ಶುಲ್ಕವು ಶೇ.5 ಹೆಚ್ಚಳವಾಗಿದೆ.

ಖಾಸಗಿ ಅಭ್ಯರ್ಥಿಗಳಿಗೆ 236 ರೂ.ರಿಂದ 248 ರೂ. ಹಾಗೂ ಈಗಾಗಲೇ ಖಾಸಗಿ ಅಭ್ಯರ್ಥಿಯಾಗಿ ನೋಂದಣಿಯಾಗಿ ಶುಲ್ಕ ಪಾವತಿಸಿರುವ ಅಭ್ಯರ್ಥಿಗಳ ನೋಂದಣಿ ನವೀಕರಣ ಶುಲ್ಕವನ್ನು 69 ರೂ. ಗಳಿಂದ 72 ರೂ.ಗೆ ಹೆಚ್ಚಿಸಲಾಗಿದೆ. ಪುನರಾವರ್ತಿತ ಅಭ್ಯರ್ಥಿಗಳಿಗೆ ಒಂದು ವಿಷಯಕ್ಕೆ 427 ರೂ.ರಿಂದ 448 ರೂ.ಗೆ ಏರಿಸಲಾಗಿದೆ. ಎರಡು ವಿಷಯಗಳಿಗೆ 532 ರೂ.ರಿಂದ 559 ರೂ. ಹಾಗೂ ಮೂರಕ್ಕೂ ಮೇಲ್ಪಟ್ಟು ವಿಷಯಗಳಿಗೆ 716 ರೂ.ನಿಂದ 752 ರೂ.ಗೆ ಹೆಚ್ಚಿಸಲಾಗಿದೆ. ಪರಿಷ್ಕೃತ ಶುಲ್ಕವೂ 2025-26ನೇ ಸಾಲಿನಲ್ಲಿ ನಡೆಯುವ ಪರೀಕ್ಷೆಗಳಿಗೆ ಅನ್ವಯವಾಗುತ್ತದೆ ಎಂದು ಮಂಡಳಿ ಆದೇಶದಲ್ಲಿ ತಿಳಿಸಿದೆ.

ಹಾಲಿ ಬೆಲೆ ಏರಿಕೆಯಲ್ಲಿ ತತ್ತರಿಸುತ್ತಿರುವ ಜನರಿಗೆ ಇದೀಗ ಶೇ.5 ಶುಲ್ಕ ಹೆಚ್ಚಳ ಮಾಡುತ್ತಿರುವುದು ಸರಿಯಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ಸಾಕಷ್ಟು ತೊಂದರೆ ಆಗಲಿದೆ ಎಂದು ಕೆಲವು ವಿರೋಧ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net