ಗೂಳೂರು ಬಳಿ‌ ಮೆಡಿಕಲ್ ಕಾಲೇಜು ಬೇಡ

ಬಾ.ಹ.ರಮಾಕುಮಾರಿ
ಬಾ.ಹ.ರಮಾಕುಮಾರಿ
Published on

ಪ್ರಮುಖ ಮುಖ್ಯಾಂಶಗಳು

  • ಗಣಿಬಾಧಿತ, ಹಿಂದುಳಿದ ತಾಲೂಕುಗಳಲ್ಲಿ ಸ್ಥಾಪಿಸಿ
  • ಕಸಾಪ ಮಾಜಿ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಆಗ್ರಹ
  • ಕೆ.ಬಿ.ಕ್ರಾಸ್ ಸೂಕ್ತ ಜಾಗ
ತುಮಕೂರು: ತಾಲೂಕಿನ ಗೂಳೂರು ಬಳಿ ಸರ್ಕಾರ ವಶಪಡಿಸಿಕೊಂಡಿರುವ ಜಾಗದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸುವ ನಿರ್ಧಾರವನ್ನು ಡಿಸಿಎಂ ಡಾ.ಜಿ.ಪರಮೇಶ್ವರ ಮರುಪರಿಶೀಲನೆ ಮಾಡಲಿ ಎಂದು ಕಸಾಪ ಮಾಜಿ ಅಧ್ಯಕ್ಷೆ, ಚಿಂತಕಿ ಬಾ.ಹ.ರಮಾಕುಮಾರಿ ಅಭಿಪ್ರಾಯಿಸಿದ್ದಾರೆ.
ತುಮಕೂರು ನಗರದಲ್ಲಿಯೇ ಮೂರು ದಿಕ್ಕಿನಲ್ಲಿಯೂ 3 ಖಾಸಗಿ ಮೆಡಿಕಲ್ ಕಾಲೇಜ ಗಳಿವೆ. ಹಲವಾರು ದೊಡ್ಡ ದೊಡ್ಡ ಆಸ್ಪತ್ರೆಗಳು ಸೇವೆ ಸಲ್ಲಿಸುತ್ತಿವೆ. ಹಾಗಾಗಿ, ತುಮಕೂರು ಜಿಲ್ಲಾ ಕೇಂದ್ರಕ್ಕೆ ದೂರ ಇರುವ ಪಾವಗಡ, ಶಿರಾ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಗಳು ಹಿಂದುಳಿದ ಪ್ರದೇಶ ಮತ್ತು ಗಣಿ ಬಾಧಿತ ಪ್ರದೇಶಗಗಳಾಗಿವೆ. ಅಂತಹ ಸ್ಥಳಗಳಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಯಾದರೆ ಎಲ್ಲ ರೀತಿಯಲ್ಲು ಸೂಕ್ತವೆನಿಸಲಿದೆ. ಜನರಿಗು ಅನುಕೂಲವಾಗಲಿದೆ ಎಂದರು.
ಇದರಿಂದ ಹಿಂದುಳಿದ ತಾಲ್ಲೂಕು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ದೂರ ಪ್ರದೇಶದಲ್ಲಿ ವಾಸಿಸುವ, ಮತ್ತು ಗಣಿ ಬಾಧಿತ ಪ್ರದೇಶಗಳ ಸುತ್ತಮುತ್ತಲಿನ ಜನರು ಆರೋಗ್ಯ ಸೌಲಭ್ಯ ಪಡೆಯಲು ಅನುಕೂಲವಾಗುತ್ತದೆ. ತಿಪಟೂರು, ತುರುವೇಕೆರೆ, ಚಿಕ್ಕನಾಯಕನಹಳ್ಳಿ 3 ತಾಲೂಕುಗಳ ಮಧ್ಯೆ ಕೆ.ಬಿ.ಕ್ರಾಸ್ ಬಳಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡುವುದು ಗಣಿಬಾಧಿತ ಪ್ರದೇಶಗಳ ಜನರಿಗೆ ಆರೋಗ್ಯ ಸೇವೆ ಒದಗಿಸಲು ಸಾಧ್ಯವಾಗಲಿದೆ. ಪಾವಗಡದಲ್ಲಿ ಅಥವಾ ಮಧುಗಿರಿ ಮತ್ತು ಪಾವಗಡ ಮಧ್ಯೆ ವೈದ್ಯಕೀಯ ಕಾಲೇಜು ಸ್ಥಾಪನೆಯಿಂದ ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ ಪೂರಕವಾಗಲಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮವಹಿಸಲಿ ಎಂದು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net