ಸರ್ಕಾರಿ ಆಸ್ಪತ್ರೆಯ ಶವಾಗಾರ ಸ್ಥಳಾಂತರಕ್ಕೆ ಆಗ್ರಹ

oplus_0
oplus_0
Published on

ರಾಣೆಬೆನ್ನೂರ: ನಗರದ ತಾಲೂಕು ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿರುವ ಶವಾಗಾರದಿಂದ ಸುತ್ತಲಿನ ನಿವಾಸಿಗಳಿಗೆ ತೊಂದರೆ ಉಂಟಾಗುತ್ತಿದ್ದು, ಶವಾಗಾರವನ್ನು ಬೇರೆಡೆ ಸ್ಥಳಾಂತರಿಸುವಂತೆ ಆಗ್ರಹಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಯ ಹಿಂಭಾಗದ ಕಾಂಪೌಂಡ್​ಗೆ ಹೊಂದಿಕೊಂಡು ಶವಾಗಾರವಿದೆ. ಇದೇ ಕಾಂಪೌಂಡ್​ಗೆ ಹೊಂದಿಕೊಂಡು ಕನಕದಾಸ ನಗರದ ಹಲವು ಮನೆಗಳಿವೆ. ಶವಾಗಾರದಲ್ಲಿ ಶವದ ಬುರಡೆ ಒಡೆಯುವುದು, ಮೃತರ ಕುಟುಂಬಸ್ಥರ ಗೋಳಾಟ, ಹಗಲು&ರಾತ್ರಿ ಎನ್ನದ ಜನ ಸೇರುತ್ತಿರುವ ಕಾರಣ ಇಲ್ಲಿಯ ನಿವಾಸಿಗಳಿಗೆ ತೀವ್ರ ತೊಂದರೆ ಉಂಟಾಗಿದೆ.
ಗಬ್ಬು ನಾಥ…
ಅಪಘಾತ, ಆತ್ಮಹತ್ಯೆ, ಅನಾರೋಗ್ಯದ ಕಾರಣದಿಂದ ಮೃತಪಡುವವರ ಶವಗಳನ್ನು ಶವಾಗಾರಕ್ಕೆ ತಂದು ಹಾಕಲಾಗುತ್ತಿದೆ. ಆದರೆ, ವೈದ್ಯರು ಮರಣೋತ್ತರ ಪರೀೆ ನಡೆಸಿ ಶವವನ್ನು ವಾರಸುದಾರರಿಗೆ ಹಸ್ತಾಂತರ ಮಾಡಲು ದಿನಗಟ್ಟಲೇ ಸಮಯ ತೆಗೆದುಕೊಳ್ಳುತ್ತಿದ್ದಾರೆ. ಅಪರಿಚಿತ ಶವಗಳು ಬಂದಾಗ ಅವು ಗಬ್ಬು ನಾರಲು ಶುರು ಮಾಡಿದರೂ ವೈದ್ಯರು ಅವುಗಳ ಮರಣೋತ್ತರ ಪರೀೆ ನಡೆಸುವುದಿಲ್ಲ.
ಇದರಿಂದ ಕನಕದಾಸ ನಗರದ ನಿವಾಸಿಗಳು ಮೂಗು ಮುಚ್ಚಿಕೊಂಡೇ ಜೀವನ ನಡೆಸಬೇಕಾದ ಪರಿಸ್ಥಿತಿ ಎದುರಾಗುತ್ತಿದೆ. ಅಲ್ಲದೆ ಶವಗಳ ದುರ್ವಾಸನೆಗೆ ಊಟ, ಉಪಹಾರ ಸಹ ಬಿಟ್ಟು ಕುಳಿತುಕೊಳ್ಳುವ ದುಸ್ಥಿತಿ ಬಂದೋದಗುತ್ತಿದೆ. ಶವಗಳನ್ನು ತೆಗೆಯುವಂತೆ ವೈದ್ಯರಿಗೆ ೋನ್​ ಮಾಡಿ ಹೇಳಿದ ನಂತರವೇ ಶವಗಳ ವಿಲೇವಾರಿ ಮಾಡುತ್ತಿದ್ದಾರೆ.
ನಾಯಿಗಳ ಉಪಟಳ…
ಶವಗಳನ್ನು ತೊಳೆದ ನೀರು ಆಸ್ಪತ್ರೆಯ ಕಾಂಪೌಂಡ್​ನಿಂದ ಕನಕದಾಸ ನಗರದ ಚರಂಡಿ ಬರುತ್ತಿದೆ. ಇದರಲ್ಲಿ ಬರುವ ಮಾಂಸ ತಿನ್ನಲು ನಾಯಿಗಳು ಹಿಂಡು ಹಿಂಡಾಗಿ ಬರುತ್ತಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ. ಇದರಿಂದ ಮಕ್ಕಳನ್ನು ಮನೆಯಿಂದ ಹೊರಗೆ ಬಿಡದ ಪರಿಸ್ಥಿತಿ ಎದುರಾಗಿದೆ ಎಂಬುದು ಸ್ಥಳಿಯರ ಆರೋಪವಾಗಿದೆ.
ಮನವಿ ಮಾಡಿದರೂ ಪ್ರಯೋಜನವಿಲ್ಲ…
ಆಸ್ಪತ್ರೆಯ ಹಿಂಭಾಗದಲ್ಲಿರುವ ಶವಾಗಾರವನ್ನು ಮುಂಭಾಗದ ರಸ್ತೆ ಬಳಿ ಅಥವಾ ಬೇರೆಡೆ ಮಾಡುವಂತೆ ಆಸ್ಪತ್ರೆಯ ವೈದ್ಯಾಧಿಕಾರಿ, ಈ ಹಿಂದಿನ ಎಲ್ಲ ಶಾಸಕರು ಹಾಗೂ ಹಾಲಿ ಶಾಸಕರಿಗೂ ಮನವಿ ಸಲ್ಲಿಸಿದ್ದೇವೆ. ಆದರೆ, ಈವರೆಗೂ ಯಾವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಂಡಿಲ್ಲ ಎಂಬುದು ಇಲ್ಲಿಯ ನಿವಾಸಿಗಳ ಅಳಲು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net