

ಬೆಂಗಳೂರು: ಹಣಕಾಸು ಇಲಾಖೆ ಪ್ರಧಾನ ಕಾರ್ಯದರ್ಶಿ ಮತ್ತು ಮುಖ್ಯಮಂತ್ರಿ ಅಪರ ಮುಖ್ಯ ಕಾರ್ಯದರ್ಶಿ ಈ ಎರಡೂ ಪ್ರಭಾವಿ ಹುದ್ದೆಗಳನ್ನು ಎಲ್.ಕೆ.ಅತೀಖ್ ನಿರ್ವಹಿಸುತ್ತಿದ್ದಾರೆ. ಸೇವೆಯಿಂದ ಇದೇ ಜ.31ರಂದು ವಯೋನಿವೃತ್ತರಾಗಲಿದ್ದು, ಅದಕ್ಕೂ ಮುನ್ನವೇ ಮಹತ್ವದ ಹುದ್ದೆ ಭಕ್ಷೀಸು ಲಭಿಸಿದೆ.
ಸೇವೆಯಿಂದ ವಯೋನಿವೃತ್ತ ಮರು ದಿನ (ೆ.1)ದಿಂದಲೇ ಮುಖ್ಯಮಂತ್ರಿ ಅಪರ ಮುಖ್ಯ ಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ. ಈ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ( ಸೇವೆಗಳು-1) ಸೋಮವಾರ ಆದೇಶ ಹೊರಡಿಸಿದೆ.
ಸಿಎಂ ಸಿದ್ದರಾಮಯ್ಯ ದಾಖಲೆಯ 16ನೇ ಬಜೆಟ್‌ಗೆ ಪೂರ್ವಾಭ್ಯಾಸ ಶುರು ಮಾಡಿಲ್ಲ. ಹಣಕಾಸು ಇಲಾಖೆ ನಿಭಾಯಿಸಿದ ಅನುಭವವುಳ್ಳ ಅತೀಖ್ ಅವರು 2025-26ನೇ ಸಾಲಿನ ಬಜೆಟ್‌ಗೆ ಮೊದಲು ವಯೋನಿವೃತ್ತರಾಗಲಿದ್ದಾರೆ. ಆದರೂ ಸಿಎಂ ಅಪರ ಮುಖ್ಯ ಕಾರ್ಯದರ್ಶಿ ಹುದ್ದೆಯಲ್ಲಿ ಮುಂದುವರಿಯುವ ಸಾಧ್ಯತೆಗಳಿವೆ ಎಂಬ ತರ್ಕಕ್ಕೆ ಸೋಮವಾರದ ಆದೇಶ ಪುಷ್ಠಿ ನೀಡಿದೆ.
ಅತೀಖ್ ತೆರವುಗೊಳಲಿಸಲಿರುವ ಹಣಕಾಸು ಇಲಾಖೆ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಐಎಎಸ್ ಅಧಿಕಾರಿ ರಿತೇಶ್‌ಕುಮಾರ್ ಸಿಂಗ್ (ಹಾಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿ) ರನ್ನು ವರ್ಗಾಯಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶಿಸಿದೆ.
ಹಣಕಾಸು ಇಲಾಖೆಯಲ್ಲಿ ತಾತ್ಕಾಲಿಕವಾಗಿ ವಿಶೇಷ ಕರ್ತವ್ಯಾಧಿಕಾರಿ ಹುದ್ದೆಯನ್ನು ಹೊಸದಾಗಿ ಸೃಷ್ಟಿಸಲಾಗಿದೆ. ಈ ಹುದ್ದೆಯ ಸಮಪ್ರಭಾರವನ್ನೂ ರಿತೇಶ್ ಕುಮಾರ್ ಸಿಂಗ್ ಅವರಿಗೆ ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.