ವಿದ್ಯಾರ್ಥಿಗಳೊಂದಿಗೆ ಪರೀಕ್ಷಾ ಪೆ ಚರ್ಚಾ ವೀಕ್ಷಿಸಿದ ರಾಜ್ಯಪಾಲ

Pariksha Pe charcha
Published on

ಬೆಂಗಳೂರು: ದೇಶಾದ್ಯಂತ ವಿದ್ಯಾರ್ಥಿಗಳೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಂವಾದ ನಡೆಸಿದ ‘ಪರೀಕ್ಷಾ ಪೆ ಚರ್ಚಾ' ಕಾರ್ಯಕ್ರಮವನ್ನು ವಿವಿಧ ಶಾಲೆಗಳ ವಿದ್ಯಾರ್ಥಿಗಳೊಂದಿಗೆ ರಾಜ್ಯಪಾಲ ಥಾವರ್​​ಚಂದ್ ಗೆಹ್ಲೋತ್​ ಅವರು ರಾಜಭವನದಲ್ಲಿ ವೀಕ್ಷಣೆ ಮಾಡಿದರು.

ಕೆಪಿಎಸ್ ಶಾಲೆ 13ನೇ ಅಡ್ಡರಸ್ತೆ, ಮಲ್ಲೇಶ್ವರ, ಪೂರ್ಣ ಪ್ರಜ್ಞಾ ಎಜುಕೇಶನ್ ಸೆಂಟರ್, ಸ್ಟೆಲ್ಲಾ ಮೇರೀಸ್ ಪ್ರೌಢ ಶಾಲೆ, ಸರ್ಕಾರಿ ಪ್ರೌಢಶಾಲೆ ಸಂತೇಬೀದಿ, ಯಶವಂತಪುರ, ಸರ್ಕಾರಿ ಪ್ರೌಢಶಾಲೆ ಭಾರತೀಯ ವಿಜ್ಞಾನ ಮಂದಿರ, ನಿರ್ಮಲಾ ರಾಣಿ ಪ್ರೌಢ ಶಾಲೆ, ಮಲ್ಲೇಶ್ವರ, ಸರ್ಕಾರಿ ಪ್ರೌಢಶಾಲೆ ಮಲ್ಲೇಶ್ವರ, ಹಿಮಾಂಶು ಕಲಾ ಜ್ಯೋತಿ ವಿದ್ಯಾಪೀಠ, ಎಂಎಲ್​ಎ ಪ್ರೌಢಶಾಲೆ ವಿದ್ಯಾರ್ಥಿಗಳು ಈ ಸಂವಾದದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಶಿಕ್ಷಣಾ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. ದೂರದರ್ಶನದ ನ್ಯಾಷನಲ್ ಲೈವ್ ಸ್ಟ್ರೀಮಿಂಗ್ ಮೂಲಕ ಈ ಸಂವಾದವನ್ನು ವೀಕ್ಷಣೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net