

ಮೈಸೂರು: ನಗರಾದ್ಯಂತ ಗೌರಿ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಹಬ್ಬದ ಸಿದ್ಧತೆಗಾಗಿ ಮಾರುಕಟ್ಟೆಯಲ್ಲಿ ಸಾರ್ವಜನಿಕರು ಗುರುವಾರ ಬೆಲೆ ಏರಿಕೆ ನಡುವೆಯೂ ಪೂಜಾ ಸಾಮಗ್ರಿ, ಗಣೇಶ ಹಾಗೂ ಗೌರಿ ಮೂರ್ತಿ ಖರೀದಿಸಿದರು.
ಈ ಬಾರಿ ಸೆ.6 ರಂದು ಸ್ವರ್ಣಗೌರಿಯ ಹಬ್ಬ, ಮಾರನೇ ದಿನ ಸೆ.7 ಗಣೇಶನ ಹಬ್ಬ ಆಚರಣೆ ಮಾಡಲಾಗುತ್ತಿದೆ. ಆದ್ದರಿಂದ ಗೌರಿ-ಗಣೇಶನನ್ನು ಕರೆತರಲು ಮನೆಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಪೂರ್ವತಯಾರಿ ಭರದಿಂದ ಸಾಗಿದೆ. ನಗರದ ದೇವರಾಜ ಮಾರುಕಟ್ಟೆ ಸೇರಿ ಇನ್ನಿತರ ಕಡೆಗಳಲ್ಲಿ ಜೋರು ವ್ಯಾಪಾರ ವಹಿವಾಟು ನಡೆಯಿತು. ಹೂವು, ಹಣ್ಣು, ಪೂಜಾ ಸಾಮಗ್ರಿ, ಬಾಗಿನ ನೀಡಲು ಬಿದಿರಿನ ಮೊರ ಖರೀದಿಸುವಲ್ಲಿ ಮಹಿಳೆಯರು, ಯುವಕರು ನಿರತರಾಗಿದ್ದರು.
ಮಾರುಕಟ್ಟೆಗೆ ಜನರು ಲಗ್ಗೆ ಇಟ್ಟು, ಹಬ್ಬದ ಸಾಮಗ್ರಿ ಖರೀದಿಸಲು ಮುಗಿ ಬಿದ್ದರು. ದೇವರಾಜ ಮಾರುಕಟ್ಟೆ, ಮಂಡಿ ಮಾರ್ಕೆಟ್, ಅಗ್ರಹಾರದ ವಾಣಿವಿಲಾಸ ಮಾರುಕಟ್ಟೆ, ನಂಜುಮಳಿಗೆ, ಧನ್ವಂತ್ರಿ ರಸ್ತೆ, ಸಯ್ಯಜಿರಾವ್ ರಸ್ತೆ, ಅ