ಸರಗಳ್ಳತನ ಮಟ್ಟ ಹಾಕಲು ಎಸ್ಪಿಗೆ ಮನವಿ

20 smg 3a
Published on

ಶಿವಮೊಗ್ಗ: ಗೋಪಾಲಗೌಡ ಬಡಾವಣೆ ಮತ್ತು ಸ್ವಾಮಿ ವಿವೇಕಾನಂದ ಬಡಾವಣೆಗಳಲ್ಲಿ ಹೆಚ್ಚುತ್ತಿರುವ ಮನೆ, ಸರ ಕಳ್ಳತನ ಹಾಗೂ ಅಕ್ರಮ ಚಟುವಟಿಕೆಗಳ ನಿವಾರಣೆಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸ್ಥಳೀಯರು ಎಸ್ಪಿ ಬಿ.ಎಂ.ಲಕ್ಷ್ಮೀಪ್ರಸಾದ್ ಅವರಿಗೆ ಮನವಿ ಸಲ್ಲಿಸಿದರು.

ಬಡಾವಣೆಗಳಲ್ಲಿ ವಾಯುವಿಹಾರಕ್ಕೆ ಹೋಗುವ ಹಾಗೂ ದಿನನಿತ್ಯದ ಕೆಲಸ ಮುಗಿಸಿ ಮನೆಗೆ ಬರುವ ಒಬ್ಬಂಟಿಗರನ್ನು ಅಡ್ಡಗಟ್ಟಿ ಹಲ್ಲೆ ಮಾಡಿ ದರೋಡೆ ಮಾಡಲಾಗುತ್ತಿದೆ. ಜತೆಗೆ ಬೀಗ ಹಾಕಿರುವ ಮನೆಗಳಲ್ಲೂ ಕಳ್ಳತನ ಹೆಚ್ಚುತ್ತಿದ್ದು ಇದರಿಂದ ಸ್ಥಳೀಯರು ಭಯಭೀತರಾಗಿದ್ದಾರೆ ಎಂದು ಅಳಲು ತೋಡಿಕೊಂಡರು.

ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಅಪರಾಧ ಪ್ರಕರಣ ಕಡಿಮೆಯಾಗಿಲ್ಲ. ಭಾನುವಾರ ಬೆಳಗ್ಗೆ ನಿವೃತ್ತ ಕೆಪಿಸಿ ನೌಕರರೊಬ್ಬರ ಸರ ಕಸಿದು, ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಹಾಗಾಗಿ ಇದನ್ನು ಗಂಭೀರವಾಗಿ ಪರಿಗಣಿಸುವಂತೆ ಮನವಿ ಮಾಡಿದರು.

ಜಿ.ಡಿ.ಮಂಜುನಾಥ್, ಎಚ್.ಎಂ.ಸತ್ಯನಾರಾಯಣ, ಎಸ್.ಸಿ.ರಾಮಚಂದ್ರ, ಎಂ.ರಾಮಪ್ಪಗೌಡ, ಆರ್.ರಾಜಶೇಖರ್, ಟಿ.ಡಿ.ಜಿತೇಂದ್ರಗೌಡ, ರುದ್ರಮುನಿ ಸಜ್ಜನ್, ಮೋಹನ್ ಮೂರ್ತಿ, ಲಿಂಗರಾಜು, ವೆಂಕಟೇಶ್, ಡಾ.ಗೌತಮ್, ರಾಜ್‌ಕುಮಾರ್, ಕೃಷ್ಣಮೂರ್ತಿ, ರಾಘು ಕೆ. ಗೌಡ, ಚಂದ್ರಶೇಖರ್, ಟಿ.ಎಂ.ನಾಗೇಂದ್ರ, ಅಜ್ಜಪ್ಪ, ಶಿವಶಂಕರ್, ಸತೀಶ್, ವಿಜಯಕುಮಾರ್, ಮಹೇಶ್, ಬಸವರಾಜ, ವಿಷ್ಣುಮೂರ್ತಿ, ಶಿವಮೂರ್ತಿ, ಆದಿಮೂರ್ತಿ, ಅನುಸೂಯಮ್ಮ, ಶ್ರುತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net