ಗೋಪಾಲಕೃಷ್ಣ ಬೇಳೂರಿಗಿದೆ ‘ಚೇಳಿನ’ ಬುದ್ಧಿ

bjp (3)
ಸಾಗರದದಲ್ಲಿ ಬಿಜೆಪಿ ಸೇರ್ಪಡೆಗೊಂಡವನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಬರಮಾಡಿಕೊಂಡರು. ಟಿ.ಡಿ.ಮೇಘರಾಜ್, ಡಾ. ರಾಜನಂದಿನಿ ಕಾಗೋಡು, ಗಣೇಶಪ್ರಸಾದ್, ದೇವೇಂದ್ರಪ್ಪ ಇತರರಿದ್ದರು.
Published on

ಸಾಗರ: ತನಗೆ ಸಹಾಯ ಮಾಡಿದವರನ್ನೇ ಕುಟುಕುವ ಚೇಳಿನ ಬುದ್ಧಿ ಗೋಪಾಕೃಷ್ಣ ಬೇಳೂರು ಅವರಿಗಿದೆ. ಚುನಾವಣೆ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಕಾಗೋಡು ತಿಮ್ಮಪ್ಪ ಅವರನ್ನೇ ಬಿಟ್ಟಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ, ಮಾಜಿ ಶಾಸಕ ಹರತಾಳು ಹಾಲಪ್ಪ ವಾಗ್ದಾಳಿ ನಡೆಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಬುಧವಾರ ಬಿಜೆಪಿಗೆ ಸೇರ್ಪಡೆಯಾದ ವಿವಿಧ ಪಕ್ಷದ ಮುಖಂಡರನ್ನು ಬರಮಾಡಿಕೊಂಡು ಮಾತನಾಡಿದ ಅವರು, ಈ ಚೇಳಿನ ಕೈನಲ್ಲಿ ನಾವು ಸಹ ಈ ಹಿಂದೆ ಕುಟುಕಿಸಿಕೊಂಡಿದ್ದೇವೆ ಎಂದರು.
ಕಾಗೋಡು ತಿಮ್ಮಪ್ಪ ಅವರ ಸ್ವಾೀನದಲ್ಲಿರುವ ಪಾಲಿಟೆಕ್ನಿಕ್ ಕಾಲೇಜಿಗೆ ಸರ್ಕಾರ ಜಾಗ ಮಂಜೂರು ಮಾಡಿದೆ. ಗೋಪಾಲಕೃಷ್ಣ ಬೇಳೂರು ತಾವು ಗೆದ್ದ ನಂತರ ಆ ಜಾಗವನ್ನು ವಶಕ್ಕೆ ಪಡೆಯುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಹಿಂದೆ ಕಂಸ, ಧ್ವಂಸ ಎಂದು ಕಾಗೋಡು ತಿಮ್ಮಪ್ಪ ಅವರನ್ನು ಟೀಕಿಸಿದ್ದರು. ಆದರೂ ಕಾಗೋಡು ತಿಮ್ಮಪ್ಪ ಅವರು ಬೇಳೂರು ಗೆಲುವಿಗೆ ಶ್ರಮಿಸಿದ್ದಾರೆ. ಅಂಥವರ ಕಾಲೇಜಿಗೆ ಸರ್ಕಾರ ನೀಡಿದ ಜಾಗವನ್ನು ವಾಪಸ್ ಪಡೆಯಿರಿ ಎಂದು ಪತ್ರೆ ಬರೆದಿರುವ ದಾಖಲೆ ನನ್ನ ಬಳಿ ಇದೆ. ಇದನ್ನು ಸಾರ್ವಜನಿಕರಿಗೆ ತಿಳಿಸುವ ಕೆಲಸವನ್ನು ಪಕ್ಷದ ಪ್ರಮುಖರು ಮಾಡಬೇಕು ಎಂದು ಸೂಚಿಸಿದರು.
ಅಭಿವೃದ್ಧಿ ಕಾರ್ಯಗಳಿಗೆ ತಾನೇ ಹಣ ತಂದಿದ್ದು ಎಂದು ಬಿಂಬಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ. ಅವರು ಯಾವ ರೀತಿ ಹಣ ತಂದಿದ್ದಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ಎಲ್ಲವನ್ನೂ ಬಹಿರಂಗಪಡಿಸುತ್ತೇನೆ. ಮುಖಂಡರು ಕಾರ್ಯಕರ್ತರು ಯಾವುದಕ್ಕೂ ಹಿಂಜರಿಯದೆ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕು. ಜಿಲ್ಲಾ ಪಮಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸುವ ನಿಟ್ಟಿನಲ್ಲಿ ಈಗಿನಿಂದಲೇ ಸಿದ್ಧತೆ ನಡೆಸಬೇಕು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಪ್ರಮುಖರಾದ ಡಾ. ರಾಜನಂದಿನಿ ಕಾಗೋಡು, ಗಣೇಶಪ್ರಸಾದ್, ದೇವೇಂದ್ರಪ್ಪ ಯಲಕುಂದ್ಲಿ, ಮಧುರಾ ಶಿವಾನಂದ್, ವಿ.ಮಹೇಶ್, ಜನಾರ್ದನ ಉಡುಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net