ರಿಲಯನ್ಸ್​ನ ಜಿಯೋ ಫ್ಲಾಟ್​ಫಾರಂನಲ್ಲಿ ಗೂಗಲ್​ನಿಂದ 33,838.15 ಕೋಟಿ ರೂ. ಹೂಡಿಕೆ

jio platform
Published on

ನವದೆಹಲಿ: ರಿಲಯನ್ಸ್​ ಇಂಡಸ್ಟ್ರೀಸ್​ನ ಜಿಯೋ ಫ್ಲಾಟ್​ಫಾರಂನಲ್ಲಿ ಗೂಗಲ್​ನ ಮಾತೃಸಂಸ್ಥೆ ಆಲ್ಫಬೆಟ್​ 33,838.15 ಕೋಟಿ ರೂ. ಹೂಡಿಕೆ ಮಾಡಿದೆ. ಇದಕ್ಕಾಗಿ ಅದು ಜಿಯೋ ಪ್ಲಾಟ್​ಫಾರಂನ ಶೇ.7.7 ಷೇರುಗಳನ್ನು ಖರೀದಿಸಿದೆ.

ರಿಲಯನ್ಸ್​ ಇಂಡಸ್ಟ್ರೀಸ್​ನ ಮುಖ್ಯಸ್ಥ ಮುಖೇಶ್​ ಅಂಬಾನಿ ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ಗೂಗಲ್​ನ ಮಾತೃ ಸಂಸ್ಥೆ ಆಲ್ಫಬೆಟ್​ನ ಸಂಸ್ಥಾಪಕರನ್ನು ಹಿಂದಿಕ್ಕಿ 6ನೇ ಸ್ಥಾನಕ್ಕೇರಿದ ಬೆನ್ನಲ್ಲೇ ಈ ಹೂಡಿಕೆ ಬಂದಿರುವುದು ವಿಶೇಷವಾಗಿದೆ.

ಗೂಗಲ್​ನ ಈ ಹೂಡಿಕೆಯೊಂದಿಗೆ ಜಿಯೋ ಫ್ಲಾಟ್​ಫಾರಂನಲ್ಲಿ ವಿವಿಧ ವಿದೇಶಿ ಹೂಡಿಕೆದಾರರಿಂದ ಒಟ್ಟಾರೆ 1,52,046.10 ಕೋಟಿ ರೂ. ಹೂಡಿಕೆ ಬಂದಂತಾಗಿದೆ. ವೆಬ್​ಕಾಸ್ಟ್​ ಮೂಲಕ ಬುಧವಾರ ನಡೆದ ರಿಲಯನ್ಸ್​ ಇಂಡಸ್ಟ್ರೀಸ್​ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸಂಸ್ಥೆಯ ಸಿಎಂಡಿ ಮುಖೇಶ್​ ಅಂಬಾನಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ರಿಲಯನ್ಸ್​ನ ಡಿಜಿಟಲ್​ ವಿಭಾಗವಾಗಿರುವ ಜಿಯೋ ಫ್ಲಾಟ್​ಫಾರಂನಲ್ಲಿ ಸಂಗೀತ ಮತ್ತು ಸಿನಿಮಾ ಆ್ಯಪ್​ಗಳು ಇವೆ. ಜಿಯೋ ಇನ್ಫೋಕಾಂ ಎಂಬ ಟೆಲಿಕಾಂ ಕಂಪನಿ ಇದರ ಮುಖ್ಯ ಘಟಕವಾಗಿದೆ. ಇಲ್ಲಿ ಒಟ್ಟು 387 ದಶಲಕ್ಷ ಬಳಕೆದಾರರು ನೋಂದಣಿ ಹೊಂದಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net