

Google Search: ಇಂದು ಯಾರಿಗಾದರೂ ಯಾವುದೇ ಮಾಹಿತಿ ಬೇಕಾದಾಗ ಮೊದಲು ಮಾಡುವ ಕೆಲಸವೆಂದರೆ ಗೂಗಲ್ ಸರ್ಚ್. ಗೂಗಲ್ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ನಮಗಿರುವ ಎಷ್ಟೋ ಅನುಮಾನಗಳಿಗೆ ಗೂಗಲ್ ಉತ್ತರ ನೀಡಿದೆ.
ಒಂದು ಊರಿನಿಂದ ಮತ್ತೊಂದು ಊರಿಗೆ ಹೋಗುವಾಗ ದಾರಿ ಗೊತ್ತಿಲ್ಲದಿರುವವರಿಗೂ ಗೂಗಲ್ ದಾರಿದೀಪವಾಗಿದೆ. ಕೆಲವೊಮ್ಮೆ ಕೆಲವೊಂದು ಆರೋಗ್ಯ ಸಮಸ್ಯೆಗಳಿಗೂ ಗೂಗಲ್ ಮೂಲಕ ಉತ್ತರ ಕಂಡುಕೊಂಡು ನಿಟ್ಟುಸಿರುವ ಬಿಟ್ಟವರು ಕೂಡ ಇದಾರೆ. ಅದೇ ರೀತಿ ಗೂಗಲ್ ಸಹಾಯದಿಂದಲೇ ಕ್ರಿಮಿನಲ್ ಕೆಲಸ ಮಾಡಿದವರು ಕೂಡ ನಮ್ಮ ನಡುವೆ ಇದಾರೆ.
ಯಾವುದೇ ಮಾಹಿತಿಗಾಗಿ ಗೂಗಲ್ ಅನ್ನೇ ಆಶ್ರಯಿಸಿರುವ ನಾವು ಕೆಲವು ಸಂದರ್ಭಗಳಲ್ಲಿ ತುಂಬಾ ಎಚ್ಚರಿಕೆಯನ್ನು ಅನುಸರಿಸಬೇಕಿದೆ. ಏನೋ ಹುಡುಕಲು ಹೋಗಿ ಕೆಲವೊಮ್ಮೆ ಅಪಾಯಕ್ಕೂ ಸಿಲುಕಬಹುದು ಮತ್ತು ಜೈಲುಪಾಲಾಗಬಹುದು. ಹೀಗಾಗಿ ಗೂಗಲ್‌ನಲ್ಲಿ ಎಂದಿಗೂ ಹುಡುಕಬಾರದ 4 ವಿಷಯಗಳ ಬಗ್ಗೆ ನಾವೀಗ ತಿಳಿದುಕೊಳ್ಳೋಣ.
ಗೂಗಲ್‌ನಲ್ಲಿ ಬಾಂಬ್ ತಯಾರಿಸುವುದು ಹೇಗೆ ಎಂಬುದನ್ನು ಯಾವುದೇ ಕಾರಣಕ್ಕೂ ಹುಡುಕಬೇಡಿ. ಈ ರೀತಿ ಮಾಡುವುದು ದೊಡ್ಡ ಕ್ರಿಮಿನಲ್ ಅಪರಾಧವಾಗಿದೆ. ಯಾವುದೇ ದೇಶದ ಭದ್ರತಾ ವ್ಯವಸ್ಥೆಯು ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತದೆ. ನಿಮ್ಮ ಸರ್ಚ್ ಹಿಸ್ಟರಿಯಲ್ಲಿ ಬಾಂಬ್ ತಯಾರಿಸುವ ಮಾಹಿತಿ ಇದ್ದರೆ ನೀವು ಖಂಡಿತವಾಗಿಯೂ ಜೈಲಿಗೆ ಹೋಗಬೇಕಾಗುತ್ತದೆ.
ಬಾಂಬ್ ತಯಾರಿಸುವುದು ಮಾತ್ರವಲ್ಲ ಮಕ್ಕಳು ಮತ್ತು ಅಪ್ರಾಪ್ತ ವಯಸ್ಕರ ಲೈಂಗಿಕ ವಿಡಿಯೋಗಳನ್ನು ಹುಡುಕುವುದು ಸಹ ಅಪರಾಧ. ಅಪ್ರಾಪ್ತರ ವಿಡಿಯೋಗಳನ್ನು ಗೂಗಲ್ ಸರ್ಚ್ನಲ್ಲಿ ಹುಡುಕಿ ವೀಕ್ಷಣೆ ಮಾಡುವುದು ಮತ್ತು ಅದನ್ನು ಹಂಚಿಕೆ ಮಾಡುವುದು ಗಂಭೀರ ಅಪರಾಧವಾಗಿದೆ. ಸಿಕ್ಕಿಬಿದ್ದರೆ, 5 ರಿಂದ 7 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಬಹುದು.
ಗೂಗಲ್‌ನಲ್ಲಿ ಹ್ಯಾಕಿಂಗ್ ಟ್ಯುಟೋರಿಯಲ್ಗಳು ಮತ್ತು ಹ್ಯಾಕಿಂಗ್ ಸಾಫ್ಟ್ವೇರ್ಗಳನ್ನು ಹುಡುಕುವುದರಿಂದಲೂ ನೀವು ತೊಂದರೆಗೆ ಸಿಲುಕಬಹುದು. ಗೂಗಲ್‌ನಲ್ಲಿ ಹೇಗೆ ಹ್ಯಾಕ್ ಮಾಡುವುದು ಎಂದು ಹುಡುಕಿದರೆ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.
ನಾವು ಗೂಗಲ್‌ನಲ್ಲಿ ಸಿನಿಮಾಗಳನ್ನು ಹುಡುಕುವಾಗ ಪೈರೇಟೆಡ್ ಸಿನಿಮಾಗಳನ್ನು ಹುಡುಕುವುದು ಮತ್ತು ಡೌನ್‌ಲೋಡ್ ಮಾಡುವುದು ಕೂಡ ಅಪರಾಧವಾಗಿ. ಹೀಗೆ ಮಾಡಿ ಸಿಕ್ಕಿಬಿದ್ದರೆ, ನೀವು 10 ಲಕ್ಷ ರೂಪಾಯಿ ದಂಡ ಮತ್ತು 3 ವರ್ಷ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. (ಏಜೆನ್ಸೀಸ್)